Asia Cup 2022: ದುಬೈನ ಐಷಾರಾಮಿ ಹೋಟೆಲ್‌ನಲ್ಲಿ ಟೀಂ ಇಂಡಿಯಾ ಬಾಯ್ಸ್, ಒಂದು ದಿನದ ಬಾಡಿಗೆ ಕೇಳಿದ್ರೆ ಆಗುತ್ತೆ ಶಾಕ್!

Asia Cup 2022: ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ನಾಳೆ ಮುಖಾಮುಖಿಯಾಗಲಿವೆ. ಏತನ್ಮಧ್ಯೆ, ಭಾರತ ತಂಡ ಪ್ರಸ್ತುತ ದುಬೈನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದೆ. ಈ ರೆಸಾರ್ಟ್​ನ ದಿನದ ಬಾಡಿಗೆ ಕೇಳಿದ್ರೆ ನೀವು ಶಾಕ್​ ಆಗ್ತಿರಾ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಯಲಿದೆ. ಈಗಾಗಲೇ ಏಷ್ಯಾಕಪ್‌ಗಾಗಿ ಏಷ್ಯಾದ ಅಗ್ರ ಆರು ತಂಡಗಳು ದುಬೈ (Dubai) ತಲುಪಿವೆ. ಇಂದು ಟೂರ್ನಿಯ ಮೊದಲ ಪಂದ್ಯ ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಹೀಗಾಗಿ ನಾಳೆ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ (IND vs PAK) ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಸಾಕಷ್ಟು ಕಾತುರದಿಂದ ಕಾಯುತ್ತಿದ್ದಾರೆ. ಏತನ್ಮಧ್ಯೆ, ಭಾರತ ತಂಡ ಪ್ರಸ್ತುತ ದುಬೈನ ಐಷಾರಾಮಿ ಹೋಟೆಲ್‌ನಲ್ಲಿ ತಂಗಿದೆ. ಈ ಹೋಟೆಲ್ ದುಬೈನಲ್ಲಿರುವ ಪಾಮ್ ಜುಮೇರಾ ರೆಸಾರ್ಟ್ ಆಗಿದೆ.

ಐಷಾರಾಮಿ ಹೋಟೆಲ್​ನಲ್ಲಿ ಭಾರತೀಯ ಆಟಗಾರರು:

ಏಷ್ಯಾ ಕಪ್​ ಟೂರ್ನಿಯಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಂದರೆ ACC ಭಾಗವಹಿಸುವ ತಂಡಗಳಿಗೆ ವಸತಿ ವ್ಯವಸ್ಥೆ ಮಾಡುತ್ತದೆ. ಎಸಿಸಿ ವ್ಯವಸ್ಥೆ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಂದೇ ಹೋಟೆಲ್‌ನಲ್ಲಿ ತಂಗಬೇಕಿತ್ತು. ಆದರೆ ಬಿಸಿಸಿಐ ತನ್ನ ಆಟಗಾರರನ್ನು ಬೇರೆ ಹೋಟೆಲ್‌ನಲ್ಲಿ ಇರಿಸಲು ಆದ್ಯತೆ ನೀಡಿದೆ. ಇದಕ್ಕೂ ಮುನ್ನ ಭಾರತ ತಂಡ ಟಿ20 ವಿಶ್ವಕಪ್ ವೇಳೆಯೂ ಪಾಮ್ ಜುಮೇರಾ ರೆಸಾರ್ಟ್‌ನಲ್ಲಿ ತಂಗಿತ್ತು. ಈ ಬಾರಿಯೂ ಭಾರತ ತಂಡದ ಆಟಗಾರರು ಅದೇ ಹೋಟೆಲ್​ನಲ್ಲಿ ತಂಗಿದ್ದಾರೆ.

ಭಾರತೀಯ ಆಟಗಾಗರು ತಂಗಿರು ದುಬೈನ ಐಷಾರಾಮಿ ಹೋಟೆಲ್


ಹೇಗಿದೆ ಪಾಮ್ ಜುಮೇರಾ ರೆಸಾರ್ಟ್ ?:

ದುಬೈ ನಗರವು ತನ್ನ ಹೊಳೆಯುವ, ಎತ್ತರದ ಕಟ್ಟಡಗಳು ಮತ್ತು ಐಷಾರಾಮಿ ಹೋಟೆಲ್‌ಗಳಿಗೆ ಹೆಸರುವಾಸಿಯಾಗಿದೆ. ಪಾಮ್ ಜುಮೇರಾ ದುಬೈನಲ್ಲಿರುವ ಪ್ರಸಿದ್ಧ ಹೋಟೆಲ್​ ಗಳಲ್ಲಿ ಒಂದಾಗಿದೆ. ವಿಶ್ವದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಪಾಮ್ ಜುಮೇರಾ ಕೂಡ ಸೇರಿದೆ. ಈ ಹೋಟೆಲ್‌ನಲ್ಲಿ ಹಲವು ಸೌಲಭ್ಯಗಳಿವೆ. 162 ಕೊಠಡಿಗಳ ಈ ಹೋಟೆಲ್‌ನಲ್ಲಿ ಹಲವು ಅಂಗಡಿಗಳಿವೆ. ನೀವು ಎಲ್ಲಿ ಶಾಪಿಂಗ್ ಮಾಡಬಹುದು. ಹೋಟೆಲ್ ಭವ್ಯವಾದ ವ್ಯೂ ಪಾಯಿಂಟ್ ಅನ್ನು ಹೊಂದಿದ್ದು, ಇಡೀ ದುಬೈ ನಗರವನ್ನು ನೋಡಬಹುದಾಗಿದೆ. ಪ್ರಮುಖ ವಿಷಯವೆಂದರೆ ಹೋಟೆಲ್​ನ ಮುಂಭಾಗದಲ್ಲಿ ಬೀಚ್ ಅನ್ನು ಹೊಂದಿದೆ.

ಟೀಂ ಇಂಡಿಯಾ ಆಟಗಾರರಿರುವ ಪಾಮ್ ಜುಮೇರಾ ರೆಸಾರ್ಟ್


ಒಂದು ದಿನದ ಬಾಡಿಗೆ ಎಷ್ಟು?:

ಸಕಲ ಸೌಕರ್ಯಗಳಿರುವ ಈ ಐಷಾರಾಮಿ ಪಾಮ್ ಜುಮೇರಾ ಹೋಟೆಲ್ ನ ಬಾಡಿಗೆ ಎಷ್ಟು ಎಂದು ನೀವು ಯೋಚಿಸುತ್ತಿರಬಹುದು. ಪಾಮ್ ಜುಮೇರಾದಲ್ಲಿ ಒಂದು ಕೊಠಡಿಯ ದಿನದ ಬಾಡಿಗೆ ಸುಮಾರು 30 ಸಾವಿರ ರೂಪಾಯಿಗಳು (ಭಾರತೀಯ ಮೌಲ್ಯದ ಪ್ರಕಾರ). ಸೀಸನ್ ನಲ್ಲಿ ಇದೇ ದರ ದಿನಕ್ಕೆ 50ರಿಂದ 60 ಸಾವಿರ ರೂ. ಆಗುತ್ತದೆಯಂತೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೂ ಮುನ್ನ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಯುವ ವೇಗಿ

ಏಷ್ಯಾ ಕಪ್​ 2022 ಭಾರತ ತಂಡ: 

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್.
Published by:shrikrishna bhat
First published: