Asia Cup 2022 Super 4: ಇಂದಿನಿಂದ ಏಷ್ಯಾ ಕಪ್​ ಸೂಪರ್​ 4 ಆರಂಭ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Asia Cup 2022 Super 4: ಸೂಪರ್​ 4 ಏಷ್ಯಾ ಕಪ್​ ಹಂತವು ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಅಲ್ಲದೇ  ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಏಷ್ಯಾ ಕಪ್​ ಸೂಪರ್ 4

ಏಷ್ಯಾ ಕಪ್​ ಸೂಪರ್ 4

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಲೀಗ್​ ಹಂತವು ಮುಗಿದಿದ್ದು, ಇಂದಿನಿಂದ ಸೂಪರ್ 4 (Super 4) ಹಂತದ ಪಂದ್ಯಗಳು ನಡೆಯಲಿವೆ.  ಸೂಪರ್ 4ರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ (AFG vs SL) ತಂಡಗಳು ಸೆಣಸಾಡಲಿವೆ. ಹೀಗಾಗಿ ಈ ಬಾರಿ ಮತ್ತೊಮ್ಮೆ ಏಷ್ಯಾ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಸೂಪರ್​ 4 ಹಂತದ ಇಂದಿನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಶ್ರೀಲಂಕಾ ತಂಡವನ್ನು ಎದುರಿಸಲಿದೆ. ಪಂದ್ಯವು ಶಾರ್ಜಾದಲ್ಲಿ ನಡೆಯಲಿದ್ದು, ನಾಳೆ ಇಂಡೋ-ಪಾಕ್ ಕದನ ಮತ್ತೊಮ್ಮೆ ನಡೆಯಲಿದೆ.

ರೌಂಡ್​ ರಾಬಿನ್​ ಮಾದರಿಯಲ್ಲಿ ಸೂಪರ್ 4:

ಇನ್ನು, ಏಷ್ಯಾ ಕಪ್​ 2022ರಲ್ಲಿ ಸೂಪರ್ 4 ಮಾದರಿಯು ರೌಂಡ್​ ರಾಬಿನ್​ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಯಾವುದೇ ಗುಂಪುಗಳಾಗಿ ಪಂದ್ಯ ನಡೆಯುವುದಿಲ್ಲ. ಪ್ರತಿಯೊಂದು ತಂಡ ಸಹ ಉಳಿದ 3 ತಂಡಗಳ ಜೊತೆ ಸೆಣೆಸಬೇಕಾಗುತ್ತದೆ. ಇದರಲ್ಲಿ ಟಾಪ್​ 2 ತಂಡವು ಫೈನಲ್​ ಹಂತಕ್ಕೆ ತಲುಪುತ್ತವೆ.

ಏಷ್ಯಾ ಕಪ್​ ಸೂಪರ್​ 4 ಎಲ್ಲಿ ನಡೆಯುತ್ತೆ?:

ಇನ್ನು, ಸೂಪರ್​ 4 ಏಷ್ಯಾ ಕಪ್​ ಹಂತವು ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಅಲ್ಲದೇ  ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಇದನ್ನೂ ಓದಿ: Asia Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಷ್ಯಾ ಕಪ್​ನಿಂದ ಜಡೇಜಾ ಔಟ್​!

ಏಷ್ಯಾ ಕಪ್​ 2022 ಸೂಪರ್ 4 ವೇಳಾಪಟ್ಟಿ:

ಸೆಪ್ಟೆಂಬರ್ 3 - ಅಫ್ಘಾನಿಸ್ತಾನ್ vs ಶ್ರೀಲಂಕಾ- ಶಾರ್ಜಾ
ಸೆಪ್ಟೆಂಬರ್ 4 – ಭಾರತ vs ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 6 – ಭಾರತ vs ಶ್ರೀಲಂಕಾ – ದುಬೈ
ಸೆಪ್ಟೆಂಬರ್ 7 – ಪಾಕಿಸ್ತಾನ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 8 – ಭಾರತ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 9 – ಶ್ರೀಲಂಕಾ vs- ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ (ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ)

ನಾಳೆ ಭಾರತ-ಪಾಕ್​ ಪಂದ್ಯ:

ಕಳೆದ ರಾತ್ರಿ ನಡೆದ ಹಾಂಗ್​ ಕಾಂಗ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಜಯ ದಾಖಲಿಸುವ ಮೂಲಕ ಪಾಕಿಸ್ತಾನವು 4ನೇ ತಂಡವಾಗಿ ಸೂಪರ್ 4ಹಂತಕ್ಕೆ ತಲುಪಿದೆ. ಇದರಿಂದಾಗಿ ಇಲ್ಲಿ ಮತ್ತೊಮ್ಮೆ ಪಾಕ್​ ತಂಡವು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ. ನಾಳೆ (ಸೆ.04) ಇಂಡೋ-ಪಾಕ್​ ಕದನ ನಡೆಯಲಿದೆ. ಕ್ರಿಕೆಟ್​ ಅಭಿಮಾನಿಗಳಿಗೆ ಇದು ಭರ್ಜರಿ ಹಬ್ಬವಾಗಿರಲಿದೆ. ಒಂದು ವಾರದಲ್ಲಿ 2 ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ನೋಡಬಹುದಾಗಿದ್ದು, ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಪಾಕ್ ಸಿದ್ಧವಾಗಿದ್ದರೆ, ಇತ್ತ ಟೀಂ ಇಂಡಿಯಾ ಇದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ.

ಭಾರತ ತಂಡದ ಸ್ಟಾರ್​ ಆಲ್​ ರೌಂಡರ್​ ಟೂರ್ನಿಯಿಂದ ಹೊರಕ್ಕೆ:

ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಈ ಕಾರಣದಿಂದ ಅವರು ಟೂರ್ನಿಯಿಂದ ಹೊರನಡೆದಿದ್ದಾರೆ. ಇವರ ಬದಲಾಗಿ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸದ್ಯ ಜಡ್ಡು ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಪಟೇಲ್​ ಈಗಾಗಲೇ ಟೀಂ ಇಂಡಿಯಾದ ಸ್ಟ್ಯಾಂಡ್‌ಬೈ ಆಗಿ ಇರುವುದರಿಂದ ಸುಲಭವಾಗಿ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ: Asia Cup 2022: ಪಾಕಿಸ್ತಾನ ತಂಡಕ್ಕೆ ಭರ್ಜರಿ ಜಯ, ಮತ್ತೆ ಭಾರತ-ಪಾಕ್ ಕದನಕ್ಕೆ ಮುಹೂರ್ತ​ ಫಿಕ್ಸ್

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ಅಕ್ಷರ್​ ಪಟೇಲ್.
Published by:shrikrishna bhat
First published: