IND vs SL Dream11 Prediction: ಸಿಂಹ-ಹುಲಿಗಳ ರಣ ಬೇಟೆಗೆ ಕ್ಷಣಗಣನೆ, ಇಲ್ಲಿದೆ ನೋಡಿ ಡ್ರೀಮ್​ 11 ತಂಡ

IND vs SL Dream11 Prediction: ಭಾರತ-ಪಾಕಿಸ್ತಾನ ಇಂದಿನ ಪಂದ್ಯದಲ್ಲಿ ಯಾವ ತಂಡದ ಆಟಗಾರರು ಉತ್ತಮವಾಗಿ ಆಡಲಿದ್ದಾರೆ? ಡ್ರೀಮ್​ 11 (Dream11 Prediction) ತಂಡ ಹೇಗಿರಲಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

IND vs SL

IND vs SL

  • Share this:
ಏಷ್ಯಾಕಪ್ 2022 (Asia Cup 2022) ಟಿ20 ಟೂರ್ನಿಯಲ್ಲಿ ರೋಹಿತ್ ಶರ್ಮಾ (Rohit Sharma) ನೇತೃತ್ವದ ಭಾರತ ತಂಡ ಇಂದು ಶ್ರೀಲಂಕಾವನ್ನು (IND vs SL) ಎದುರಿಸಲಿದೆ. ಸೂಪರ್ ಫೋರ್‌ನ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಸೋತಿತ್ತು. ಇದರಿಂದಾಗಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ಗೆಲ್ಲಲೇ ಬೇಕಾದ ಅನಿವಾರ್ಯತೆ ಎದುರಾಗಿದೆ. ಅದೇ ಸಮಯದಲ್ಲಿ, ಸೂಪರ್ ಫೋರ್‌ನ ಮೊದಲ ಪಂದ್ಯದಲ್ಲಿ, ಶ್ರೀಲಂಕಾ ಅಫ್ಘಾನಿಸ್ತಾನ ವಿರುದ್ಧ ಅಬ್ಬರದ ಜಯ ದಾಖಲಿಸಿದೆ. ಹಾಗಿದ್ದರೆ ಇಂದಿನ ಪಂದ್ಯದಲ್ಲಿ ಯಾವ ತಂಡದ ಆಟಗಾರರು ಉತ್ತಮವಾಗಿ ಆಡಲಿದ್ದಾರೆ? ಡ್ರೀಮ್​ 11 (Dream11 Prediction) ತಂಡ ಹೇಗಿರಲಿದೆ ಎಂದು ತಿಳಿದುಕೊಳ್ಳೋಣ ಬನ್ನಿ.

ಭಾರತ vs ಶ್ರೀಲಂಕಾ ಡ್ರೀಮ್ 11:

ನಾಯಕ- ವಿರಾಟ್ ಕೊಹ್ಲಿ
ಉಪನಾಯಕ- ದಾಸುನ್ ಶನಕ
ವಿಕೆಟ್ ಕೀಪರ್ - ಕುಸಲ್ ಮೆಡಿನ್ಸ್
ಬ್ಯಾಟ್ಸ್‌ಮನ್‌ಗಳು- ರೋಹಿತ್ ಶರ್ಮಾ, ಪಾತುಮ್ ನಿಶಾಂಕ, ಸೂರ್ಯಕುಮಾರ್ ಯಾದವ್
ಆಲ್ ರೌಂಡರ್ಸ್ - ವನಿಂದು ಹಸ್ರಂಗ, ಹಾರ್ದಿಕ್ ಪಾಂಡ್ಯ
ಬೌಲರ್‌ಗಳು: ಭುವನೇಶ್ವರ್ ಕುಮಾರ್, ದಿಲ್ಶನ್ ಮಧುಶಂಕ, ಮಹೇಶ್ ತಿಕಷ್ಣ.

ವಿರಾಟ್ ಕೊಹ್ಲಿ -ದಸುನ್ ಶಾನಕ ತಮ್ಮ ಅದ್ಭುತ ಪ್ರದರ್ಶನ:

ವಿರಾಟ್ ಕೊಹ್ಲಿ ಸುಮಾರು ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ಉತ್ತಮ ಲಯದಲ್ಲಿ ಕಾಣುತ್ತಿದ್ದಾರೆ. ವಿರಾಟ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 35 ರನ್, ಹಾಂಗ್ ಕಾಂಗ್ ವಿರುದ್ಧ ಔಟಾಗದೆ 59 ಮತ್ತು ಸೂಪರ್ 4 ನಲ್ಲಿ ಪಾಕಿಸ್ತಾನದ ವಿರುದ್ಧ 60 ರನ್ ಗಳ ಅದ್ಭುತ ಇನ್ನಿಂಗ್ಸ್ ಆಡಿದರು.

ಕುಸಾಲ್ ಮೆಂಡಿಸ್ ಶ್ರೀಲಂಕಾದ ಬಲಗೈ ಬ್ಯಾಟ್ಸ್‌ಮನ್. ಈ ಟೂರ್ನಿಯಲ್ಲಿ ಅವರು ಇಲ್ಲಿಯವರೆಗೆ 98 ರನ್‌ಗಳನ್ನು ಹೊಡೆದಿದ್ದಾರೆ. ಚಾಮಿಕಾ ಕರುಣಾರತ್ನೆ ಶ್ರೀಲಂಕಾದ ಬಲಗೈ ಬ್ಯಾಟ್ಸ್‌ಮನ್ ಮತ್ತು ಬಲಗೈ ಮಧ್ಯಮ ವೇಗಿ. ಈ ಟೂರ್ನಿಯಲ್ಲಿ ಇದುವರೆಗೆ 52 ರನ್ ಸಿಡಿಸಿ 2 ವಿಕೆಟ್ ಪಡೆದಿದ್ದಾರೆ.

ಇದನ್ನೂ ಓದಿ: IND vs SL Asia Cup 2022: ಇಂದು ಭಾರತ-ಶ್ರೀಲಂಕಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಭಾರತ ಮತ್ತು  ಶ್ರೀಲಂಕಾ​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚಿನ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ.

ಇದನ್ನೂ ಓದಿ: Suresh Raina: ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ನಿವೃತ್ತಿ ಘೋಷಿಸಿದ ಮಿಸ್ಟರ್​ ಐಪಿಎಲ್​​! ನೋವಿನ ವಿದಾಯ

IND vs SL ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್/ಆವೇಶ್​ ಖಾನ್​.

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪತುಮ್‌ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್‌ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
Published by:shrikrishna bhat
First published: