ಏಷ್ಯಾಕಪ್ 2023ರ (Asia Cup 2023) ಪಾಕಿಸ್ತಾನದಲ್ಲಿ ನಡೆಯಲಿದೆ. ಈ ವರ್ಷದ ಸೆಪ್ಟೆಂಬರ್‌ನಲ್ಲಿ ಈ ಟೂರ್ನಿ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಲೀಗ್‌ನಲ್ಲಿ ಒಟ್ಟು 6 ತಂಡಗಳು ಭಾಗವಹಿಸುತ್ತಿವೆ. ಶ್ರೀಲಂಕಾ, ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಈಗಾಗಲೇ ಈ ಪಂದ್ಯಾವಳಿಗೆ ಅರ್ಹತೆ ಪಡೆದಿವೆ. ಆರನೇ ಸ್ಥಾನಕ್ಕಾಗಿ 10 ತಂಡಗಳು ಪರಸ್ಪರ ಸೆಣಸಲು ಸಿದ್ಧವಾಗಿವೆ. ಹೀಗಾಗಿ ಎಸಿಸಿ ಏಷ್ಯಾಕಪ್ 2023ರ ಅಹರ್ತಾ ಸುತ್ತಿನ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.
ಅರ್ಹತಾ ಸುತ್ತಿನ ವೇಳಾಪಟ್ಟಿ ಬಿಡುಗಡೆ:
ಅರ್ಹತಾ ಸುತ್ತಿನ ಪಂದ್ಯಗಳು ಏಪ್ರಿಲ್ 18 ರಿಂದ ನಡೆಯಲಿವೆ. ಎಲ್ಲಾ ಪಂದ್ಯಗಳು ನೇಪಾಳದಲ್ಲಿ ನಡೆಯಲಿವೆ. ಎ ಮತ್ತು ಬಿ ಗುಂಪಿನಲ್ಲಿ ಐದು ತಂಡಗಳು ಇರುತ್ತವೆ. ಎ ಗುಂಪಿನ ಬಗ್ಗೆ ಮಾತನಾಡುವುದಾದರೆ, ಇದು ಒಮಾನ್, ನೇಪಾಳ, ಕತಾರ್, ಮಲೇಷ್ಯಾ ಮತ್ತು ಸೌದಿ ಅರೇಬಿಯಾ ತಂಡಗಳು ಸೆಣಸಾಡಲಿವೆ. ಆದರೆ ಬಿ ಗುಂಪಿನಲ್ಲಿ ಯುಎಇ, ಹಾಂಗ್ ಕಾಂಗ್, ಕುವೈತ್, ಸಿಂಗಾಪುರ್ ಮತ್ತು ಬಹ್ರೇನ್ ಇರಲಿದೆ.
The ACC Men’s Premier Cup – an integral part of ACC's new pathway structure gets underway on the 18th of April in Nepal. 10 Associate nations will battle it out for the title and the winner will directly qualify for the Men’s Asia Cup 2023. #ACCMensPremierCup #ACC pic.twitter.com/P9ybK6W4qs
— AsianCricketCouncil (@ACCMedia1) March 23, 2023
ಇದನ್ನೂ ಓದಿ: IND vs PAK: ಕ್ರಿಕೆಟ್ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್, ಏಕದಿನ ವಿಶ್ವಕಪ್ನಲ್ಲಿ ಭಾರತ-ಪಾಕ್ ಮ್ಯಾಚ್ ಕ್ಯಾನ್ಸಲ್?
ಭಾರತ-ಪಾಕ್ ಪಂದ್ಯ ಬೇರೆ ದೇಶದಲ್ಲಿ:
ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾಕಪ್ ಬಿಕ್ಕಟ್ಟಿನ ನಂತರ, BCCI ಮತ್ತು PCB ಎರಡೂ ಮಂಡಳಿಗಳು ಈ ವಿವಾದವನ್ನು ಪರಿಹರಿಸುವ ನಿಟ್ಟಿನಲ್ಲಿ ಒಮ್ಮತದ ನಿರ್ಧಾರಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ವರದಿ ಪ್ರಕಾರ, ಏಷ್ಯಾಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಪಾಕಿಸ್ತಾನದ ಹೊರಗೆ ಪರಸ್ಪರ ಪಂದ್ಯಗಳನ್ನು ಆಡಲಿದೆ. ಈ ಬಾರಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾ ಕಪ್ ಆತಿಥ್ಯವನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ. ಆದರೆ, ಟೀಂ ಇಂಡಿಯಾವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ನಿರಾಕರಿಸಿತ್ತು. ಅಂದಿನಿಂದ, ಪಂದ್ಯಾವಳಿಯ ಆಯೋಜನೆಗೆ ಸಂಬಂಧಿಸಿದಂತೆ ವಿವಾದದ ನಡೆಯುತ್ತಿತ್ತು.
ಏಷ್ಯಾ ಕಪ್ ಆತಿಥ್ಯದ ವಿವಾದವನ್ನು ಕೊನೆಗೊಳಿಸಲು ಭಾರತದ ಪಂದ್ಯಗಳನ್ನು ಪಾಕಿಸ್ತಾನದಿಂದ ಹೊರಗೆ ಸ್ಥಳಾಂತರಿಸುವ ಪ್ರಸ್ತಾಪಕ್ಕೆ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಎಲ್ಲಾ ಸದಸ್ಯರು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತು ತಾತ್ವಿಕವಾಗಿ ಒಪ್ಪಿಗೆ ನೀಡಲಾಗಿದೆ. ಕಳೆದ ವಾರ, ಐಸಿಸಿ ಮಂಡಳಿ ಸಭೆಯ ಹೊರತಾಗಿ, ದುಬೈನಲ್ಲಿ ನಡೆದ ಎಸಿಸಿ ಸದಸ್ಯ ರಾಷ್ಟ್ರಗಳ ಸಭೆಯಲ್ಲಿ ಇದನ್ನು ಒಪ್ಪಲಾಗಿದೆ ಎಂದು ವರದಿಯಾಗಿದೆ.
ಆದರೆ, ಇನ್ನೂ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಈ ಪರಿಹಾರದ ಮಾರ್ಗವನ್ನು ಸರಿಯಾಗಿ ಮಾಡಲು, ಕಾರ್ಯನಿರತ ಗುಂಪನ್ನು ರಚಿಸಲಾಗಿದೆ, ಇದು ಎಲ್ಲಾ ತಂಡಗಳ ಒಪ್ಪಿಗೆಯನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣ ಯೋಜನೆ ಮತ್ತು ಲಾಜಿಸ್ಟಿಕ್ಸ್ ಅನ್ನು ನೋಡಿಕೊಳ್ಳುತ್ತದೆ ಎಂದು ಹೇಳಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ