Virat Kohli: ಏಷ್ಯಾ ಕಪ್​ನಲ್ಲಿ ಪಾಕ್​ ವಿರುದ್ಧ ಶತಕ ಸಿಡಿಸಲಿದ್ದಾರೆ ಕಿಂಗ್​ ಕೊಹ್ಲಿ, ಈ ಸಾಧನೆ ಮಾಡಲಿರುವ 2ನೇ ಭಾರತೀಯ ಆಟಗಾರ

ಏಷ್ಯಾ ಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕೊಹ್ಲಿ ಶತಕ ಸಿಡಿಸಲಿದ್ದಾರೆ. ಇದು ಹೇಗೆಂದು ಅಚ್ಚರಿಪಡಬೇಡಿ. ಪಾಕ್​ ವಿರುದ್ಧದ ಪಂದ್ಯದಲ್ಲಿ ವಿರಾಟ್​ ಮೈದಾನಕ್ಕೆ ಇಳಿಯುತ್ತಿದ್ದಂತೆ ಈ ಸಾಧನೆ ಮಾಡಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದ ಆಂತರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯನ್ನು ಈಗಾಗಲೇ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಅಲ್ಲದೇ ಕಿಂಗ್​ ಕೊಹ್ಲಿ  (Virat Kohli)  ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಿದ್ದಾರೆ. ಆದರೆ ವಿರಾಟ್ ಕೊಹ್ಲಿ ಕೆಲ ದಿನಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲು ಸಾಧ್ಯವಾಗುತ್ತಿಲ್ಲ. ಇತ್ತೀಚೆಗೆ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಿಂದ ಅವರಿಗೆ ವಿಶ್ರಾಂತಿ ನೀಡಲಾಗಿತ್ತು. ಆದರೆ ಇದೀಗ ಕೊಹ್ಲಿ ಏಷ್ಯಾ ಕಪ್​ನ ಮೊದಲ ಪಂದ್ಯ ಪಾಕ್​ ವಿರುದ್ಧವೇ ಶತಕ ಸಿಡಿಸಲಿದ್ದಾರೆ.

ಪಾಕ್​ ವಿರುದ್ಧ ಶತಕ ಸಿಡಿಸಲಿರುವ ಕೊಹ್ಲಿ:

ಹೌದು, ಏಷ್ಯಾ ಕಪ್​ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಕೊಹ್ಲಿ ಶತಕ ಸಿಡಿಸಲಿದ್ದಾರೆ. ಇದು ಹೇಗೆಂದು ಅಚ್ಚರಿಪಡಬೇಡಿ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಗುಂಪು ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಟೂರ್ನಿಯು ಆಗಸ್ಟ್ 27 ರಿಂದ ಪ್ರಾರಂಭವಾಗುತ್ತಿದೆ. ಪಾಕಿಸ್ತಾನ ವಿರುದ್ಧದ ಟಿ20 ಪಂದ್ಯದಲ್ಲಿ ಕೊಹ್ಲಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಶತಕ ಸಿಡಿಸಲಿದ್ದಾರೆ. ಹೌದು, ಕೊಹ್ಲಿ ಪಾಕ್​ ವಿರುದ್ಧ ಮೈದಾನಕ್ಕೆ ಇಳಿಯುತ್ತಿದ್ದಂತೆ ತಮ್ಮ 100ನೇ ಟಿ20 ಅಂತಾರಾಷ್ಟ್ರೀಯ ಪಂದ್ಯ ಆಡಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ನಾಯಕ ರೋಹಿತ್ ಶರ್ಮಾ 132 ಟಿ20 ಅಂತಾರಾಷ್ಟ್ರೀಯ ಪಂದ್ಯಗಳ ವಿರುದ್ಧ ಅತಿ ಹೆಚ್ಚು ಪಂದ್ಯಗಳನ್ನು ಆಡಿದ್ದಾರೆ.

ಕೊಹ್ಲಿ ಟಿ20 ಸಾಧನೆಗಳು:

33 ವರ್ಷದ ವಿರಾಟ್ ಕೊಹ್ಲಿ 99 ಟಿ20 ಪಂದ್ಯಗಳಲ್ಲಿ 91 ಇನ್ನಿಂಗ್ಸ್‌ಗಳಲ್ಲಿ 50 ಸರಾಸರಿಯಲ್ಲಿ 3308 ರನ್ ಗಳಿಸಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದವರಲ್ಲಿ ವಿರಾಟ್​ಮೂರನೇ ಸ್ಥಾನದಲ್ಲಿದ್ದಾರೆ. ಅವರು 30 ಅರ್ಧಶತಕಗಳನ್ನು ಗಳಿಸಿದ್ದಾರೆ. ಆದರೆ ಈವರೆಗೂ ಕೊಹ್ಲಿ ಅಂತರಾಷ್ಟ್ರೀಯ ಪಂದ್ಯದ;ಲ್ಲಿ ಶತಕ ಸಿಡಿಸಲಿಲ್ಲ. ಅವರ ಒಟ್ಟಾರೆ T20 ವೃತ್ತಿಜೀವನದಲ್ಲಿ 344 ಪಂದ್ಯಗಳ 327 ಇನ್ನಿಂಗ್ಸ್‌ಗಳಲ್ಲಿ 40 ರ ಸರಾಸರಿಯಲ್ಲಿ 10626 ರನ್ ಗಳಿಸಿದ್ದಾರೆ. 5 ಶತಕ ಮತ್ತು 78 ಅರ್ಧ ಶತಕ ಗಳಿಸಿದ್ದಾರೆ. ಅಂದರೆ 83 ಬಾರಿ 50ಕ್ಕೂ ಹೆಚ್ಚು ರನ್ ಗಳ ಇನ್ನಿಂಗ್ಸ್ ಆಡಿದ್ದಾರೆ. 113 ರನ್‌ಗಳ ಅತ್ಯುತ್ತಮ ಇನ್ನಿಂಗ್ಸ್ ಅವರದ್ದಾಗಿದೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಪಕ್ರಟ, ಕನ್ನಡಿಗನಿಗೆ ಉಪ ನಾಯಕನ ಪಟ್ಟ

ಪಾಕ್​​ ವಿರುದ್ಧ ಕೊಹ್ಲಿ ಅಬ್ಬರ:

ಹೌದು, ಕೊಹ್ಲಿ ಪಾಕಿಸ್ತಾನದ ವಿರುದ್ಧ ಈವರೆಗೂ ಉತ್ತಮ ಪ್ರದರ್ಶನವನ್ನೇ ನೀಡುತ್ತಾ ಬಂದಿದ್ದಾರೆ. ವಿರಾಟ್ ಕೊಹ್ಲಿ ಪಾಕ್​ ವಿರುದ್ಧ 7 ಪಂದ್ಯಗಳಲ್ಲಿ 78ರ ಸರಾಸರಿಯಲ್ಲಿ 311 ರನ್ ಗಳಿಸಿದ್ದಾರೆ. ಇದರಲ್ಲಿ 3 ಅರ್ಧಶತಕ ಸಹ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 118 ಆಗಿದೆ. ಇತರ ಯಾವುದೇ ಭಾರತೀಯರು ಪಾಖ್​ ವಿರುದ್ಧ ಟಿ20 ಅಲ್ಲಿ 200 ರನ್ ಗಡಿ ತಲುಪಲು ಸಾಧ್ಯವಾಗಲಿಲ್ಲ. ಮಾಜಿ ಅನುಭವಿ ಆಟಗಾರ ಯುವರಾಜ್ ಸಿಂಗ್ 8 ಪಂದ್ಯಗಳಲ್ಲಿ 155 ರನ್ ಮತ್ತು ಗೌತಮ್ ಗಂಭೀರ್ 5 ಪಂದ್ಯಗಳಲ್ಲಿ 139 ರನ್ ಗಳಿಸಿದ್ದಾರೆ. ಬೇರೆ ಯಾರೂ ಕೂಡ 100 ರನ್ ತಲುಪಲು ಸಾಧ್ಯವಾಗಲಿಲ್ಲ. ರೋಹಿತ್ 8 ಪಂದ್ಯಗಳ 7 ಇನ್ನಿಂಗ್ಸ್‌ಗಳಲ್ಲಿ 70 ರನ್ ಗಳಿಸಿದ್ದಾರೆ.

ಇದನ್ನೂ ಓದಿ: Rohit Sharma: ಟೀಂ ಇಂಡಿಯಾ ಟಿ20 ನಾಯಕತ್ವಕ್ಕಾಗಿ ರೋಹಿತ್​ ಜೊತೆ ಸ್ಪರ್ಧಿಗಿಳಿದ್ದಿದ್ದಾರೆ ಯುವ ಆಟಗಾರ

ಏಷ್ಯಾ ಕಪ್​ಗೆ ಟೀಂ ಇಂಡಿಯಾ:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: