IND vs HK Asia Cup 2022: ಇಂದು ಭಾರತ-ಹಾಂಗ್​​ಕಾಂಗ್​ ಪಂದ್ಯ, ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs HK Asia Cup 2022: ಏಷ್ಯಾ ಕಪ್​ 2022ರಲ್ಲಿ ಇಂದು ಭಾರತ ಮತ್ತು ಹಾಂಗ್​​ಕಾಂಗ್​ ತಂಡಗಳು ಸೆಣಸಾಡಲಿವೆ. ಈಗಾಗಲೇ ಟೂರ್ನಿಯಲ್ಲಿ ಬಲಿಷ್ಠ ಪಾಕ್ ತಂಡವನ್ನು ಸೋಲಿಸಿರುವ ಇಂಡಿಯಾ ಇಂದು ಹಾಂಗ್​​ಕಾಂಗ್ ತಂಡದೊಂದಿಗೆ ಗೆದ್ದಲ್ಲಿ ಸೂಪರ್​ 4 ಹಂತಕ್ಕೆ ತಲುಪಲಿದೆ.

IND vs HK

IND vs HK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಕೊರೋನಾ ನಂತರ 2 ವರ್ಷಗಳ ಬಳಿಕ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ.  ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಹಾಂಗ್​​ಕಾಂಗ್​ (India Vs Hong Kong)  ತಂಡಗಳು ಸೆಣಸಾಡಲಿವೆ. ಇಂದಿನ ಪಂದ್ಯವನ್ನು ಗೆಲ್ಲುವ ಮೂಲಕ ಭಾರತ ತಂಡವು ಸೂಪರ್​ 4 ಹಂತಕ್ಕೆ ಏರಲು ಹವಣಿಸುತ್ತಿದೆ. ಈಗಾಗಲೇ ಅಫ್ಘಾನಿಸ್ತಾನ ತಂಡವು ಮೊದಲ ತಂಡವಾಗಿ ಸೂಪರ್​ 4 ಹಂತಕ್ಕೆ ಏರಿದೆ. ಇತ್ತ ಹಾಂಗ್​​ಕಾಂಗ್​ ತಂಡವು ಟೂರ್ನಿಲ್ಲಿ ಮೊದಲ ಪಂದ್ಯವಾಡಲಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ? ಪಂದ್ಯವು ಎಲ್ಲಿ ನಡೆಯಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ 4ನೇ ಪಂದ್ಯದಲ್ಲಿ ಭಾರತ ಮತ್ತು ಹಾಂಗ್​​ಕಾಂಗ್​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Asia Cup 2022: ಈ ಇಬ್ಬರು ಆಟಗಾರರ ಮೇಲೆ ದ್ರಾವಿಡ್​ಗೆ ಏಕೆ ಅಷ್ಟು ನಂಬಿಕೆ? ಪಂತ್ ಕೈ ಬಿಡಲು ಕಾರಣವೇನು?

IND vs HK ಹೆಡ್​ ಟು ಹೆಡ್​:

ಇನ್ನು, ಭಾರತ ಮತ್ತು ಹಾಂಗ್​​ಕಾಂಗ್ ತಂಡಗಳು ಈವರೆಗೆ ಏಕೈಕ ಏಕದಿನ ಪಂದ್ಯವಾಡಿದೆ. 2008 ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 256 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದು ಈವರೆಗಿನ ಹೆಚ್ಚಿನ ಅಂತರದಲ್ಲಿ ಗೆದ್ದ ಪಂದ್ಯವಾಗಿದೆ.

ಮತ್ತೊಮ್ಮೆ ಭಾರತ-ಪಾಕ್ ಪಂದ್ಯ:

ಹೌದು, ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡವು ತಮ್ಮ ಮೊದಲ ಪಂದ್ಯದಲ್ಲಿ ಸೆಣಸಾಡಿದವು. ಆ ಪಂದ್ಯದಲ್ಲಿ ಭಾರತವು 5 ವಿಕೆಟ್​ಗಳಿಂದ ಗೆದ್ದು ಬೀಗಿತ್ತು. ಆದರೆ ಇದೀಗ ಈ 2 ತಂಡಗಳು ಮತ್ತೊಮ್ಮೆ ಏಷ್ಯಾ ಕಪ್​ ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಈ ಎರಡೂ ತಂಡಗಳು ಸೂಪರ್ 4 ಹಂತಕ್ಕೆ ತಲುಪುವುದು ಖಚಿತವಾಗಿದೆ. ಹೀಗಾಗಿ ಇಂಡೋ-ಪಾಕ್​ ಮತ್ತೊಮ್ಮೆ ಮುಖಾಮುಖಿಯಾಗುವುದು ಖಂಡಿತ ಎನ್ನಲಾಗಿದೆ.

ಇದನ್ನೂ ಓದಿ: IND vs PAK Asia Cup 2022: ಈ ವಾರ ಮತ್ತೆ ಭಾರತ-ಪಾಕ್​ ಮುಖಾಮುಖಿ, ಕುತೂಹಲ ಹೆಚ್ಚಿಸಿದ ಏಷ್ಯಾ ಕಪ್​ ಟೂರ್ನಿ

IND vs HK ಸಂಭಾವ್ಯ ತಂಡ:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್.

ಹಾಂಗ್​​ಕಾಂಗ್ ತಂಡ: ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ, ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ.
Published by:shrikrishna bhat
First published: