Asia Cup 2022: ಭಾರತ ಮತ್ತು ಪಾಕಿಸ್ತಾನ ತಂಡಗಳು ಪ್ರಕಟ, ಹೇಗಿರಲಿದೆ ಹೈವೋಲ್ಟೇಜ್ ಕದನ?

ಭಾರತ ಮತ್ತು ಪಾಕ್ (IND vs PAK) ​ ಪಂದ್ಯವು ಆಗಸ್ಟ್ 28ರಂದು ನಡೆಯಲಿದ್ದು, ಇದೀಗ ಪಾಕಿಸ್ತಾನ ಸಹ ಏಷ್ಯಾ ಕಪ್​ಗೆ ತನ್ನ ತಂಡವನ್ನು ಪ್ರಕಟಿಸಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದ ಆಂತರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯನ್ನು ಈಗಾಗಲೇ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರು ವೇಳಾಪಟ್ಟಿಯ ಪ್ರಕಾರ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡವನ್ನು ಎದುರಿಸಲಿದೆ. ಭಾರತ ಮತ್ತು ಪಾಕ್ (IND vs PAK) ​ ಪಂದ್ಯವು ಆಗಸ್ಟ್ 28ರಂದು ನಡೆಯಲಿದ್ದು, ಇದೀಗ ಪಾಕಿಸ್ತಾನ ಸಹ ಏಷ್ಯಾ ಕಪ್​ಗೆ ತನ್ನ ತಂಡವನ್ನು ಪ್ರಕಟಿಸಿದೆ.

ಏಷ್ಯಾ ಕಪ್​ಗಾಗಿ ಪಾಕ್​ ತಂಡ ಪ್ರಕಟ:

ಹೌದು, ಈಗಾಗಲೇ ಏಷ್ಯಾ ಕಪ್​ 2022ಗಾಗಿ ಎಲ್ಲಾ ದೇಶಗಳು ತಮ್ಮ ತಂಡಗಳನ್ನು ಪ್ರಕಟಿಸುತ್ತಿದೆ. ಇದರ ಬೆನ್ನಲ್ಲೇ ಇದೀಗ ಪಾಕಿಸ್ತಾನ್​ ಕ್ರಿಕೆಟ್​ ಸಂಸ್ಥೆ ಸಹ ಏಷ್ಯಾ ಕಪ್​ 2022ಗಾಗಿ ಪಾಕ್ ತಂಡವನ್ನು ಪ್ರಕಟಿಸಿದೆ.

ಪಾಕಿಸ್ತಾನ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.

ಇದನ್ನೂ ಓದಿ: Asia Cup 2022: ಭಾರತ-ಪಾಕ್​ ಪಂದ್ಯಕ್ಕೆ ಹೇಗಿರಲಿದೆ ಟೀಂ ಇಂಡಿಯಾ ಸಂಭಾವ್ಯ ತಂಡ

ಭಾರತ-ಪಾಕ್ ಭರ್ಜರಿ ಪೈಟ್​:

ಈಗಾಗಲೇ ಭಾರತ ತಂಡವನ್ನು ಏಷ್ಯಾ ಕಪ್​ಗಾಗಿ ಪ್ರಕಟಿಸಲಾಗಿದೆ. ಇದರ ನಡುವೆ ಇದೀಗ ಪಾಕ್ ತಂಡವನ್ನೂ ಪ್ರಕಟಿಸಲಾಗಿದ್ದು, ಭಾರತ ಮತ್ತು ಪಾಕಿಸ್ತಾನದ ನಡುವಣ ಬಿಗ್​ ಪೈಟ್​ ನಡೆಯುವುದಂತೂ ಪಕ್ಕಾ ಎನ್ನಲಾಗುತ್ತಿದೆ. ಉಭಯ ತಂಡಗಳೆರಡೂ ಸಖತ್​ ಬಲಿಷ್ಠವಾಗಿದ್ದು, ಆಗಸ್ಟ್ 28ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ದುಬೈನಲ್ಲಿ ನಡೆಯಲಿರುವ ಮೊದಲ ಪಂದ್ಯವು ನಡೆಯಲಿದ್ದು, ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್​ ಅಭಿಮಾನಿಗಳು ಕಾತುರರಾಗಿ ಕುಳಿತಿದ್ದಾರೆ. ಈಗಾಗಲೇ ಎಲ್ಲಡೆ ಏಷ್ಯಾ ಕಪ್​ 2022ರ ಮೇಲೆ ನಿರೀಕ್ಷೆ ಹೆಚ್ಚಿದೆ. ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಉಪ ನಾಯಕರನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ.

ಹೇಗಿರಲಿದೆ ಹೈವೋಲ್ಟೇಜ್ ಕದನ?

ಈ ಬಾರಿ ಟೀಂ ಇಂಡಿಯಾವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಕಳೆದ ಬಾರಿ ವಿರಾಟ್ ಕೊಹ್ಲಿ ಮುನ್ನಡೆಸಿದ್ದರು. ಇದಲ್ಲದೇ ಜಸ್​ಪ್ರೀತ್ ಬುಮ್ರಾ ತಂಡದಿಂದ ದೂರವುಳಿದಿದ್ದು, ಟೀಂ ಇಂಡಿಯಾದ ಪ್ಲೇಯಿಂಗ್ 11ಲ್ಲಿ ಮಹತ್ವದ ಬದಲಾವಣೆಗಳಾಗಿದೆ. ಆದರೆ ಪಾಕ್ ಪರ ಶೊಯೇಬ್ ಮಲಿಕ್ ಹಾಗೂ ವೇಗಿ ಹಸನ್ ಅಲಿ ಏಷ್ಯಾ ಕಪ್ 2022ರರಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಉಳಿದಂತೆ ವಿಶ್ವಕಪ್​ ತಂಡವೇ ಈ ಬಾರಿ ಕಣಕ್ಕಿಳಿಯುತ್ತಿದ್ದು, ಪಾಕ್​ ತಂಡವೂ ಸಹ ಭಾರತಕ್ಕೆ ಭರ್ಜರಿ ಪೈಪೋಟಿ ನೀಡುವ ಸಾಧ್ಯತೆ ಇದೆ. ಅಲ್ಲದೇ ಕಳೆದ ಕೊನೆಯ ಪಂದ್ಯವನ್ನು ಗೆದ್ದಿರುವ ಮಕಾರಣ ಹೆಚ್ಚು ಉತ್ಸಾಹದಲ್ಲಿ ಟೀಂ ಇಂಡಿಯಾವಿದೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ನಲ್ಲಿ ಸ್ಟಾರ್​ ಆಲ್​ರೌಂಡರ್​ಗಿಲ್ಲ ಸ್ಥಾನ, ಆದರೆ ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ

ಏಷ್ಯಾ ಕಪ್​ 2022ಗೆ ಆಯ್ಕೆ ಆಗಿರುವ ಟೀಂ ಇಂಡಿಯಾ ಆಟಗಾರರು:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: