IND vs PAK Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ, ತಂಡದ ಪ್ರಮುಖ ಬೌಲರ್ ಅನುಮಾನ!

IND vs PAK Asia Cup 2022: ಏಷ್ಯಾ ಕಪ್​ 2022ರಲ್ಲಿ ಇಂದು ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಆದರೆ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾದ ಪ್ರಮುಖ ಬೌಲರ್​ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್​ 2022ರ (Asia Cup 2022) ಲೀಗ್​ ಹಂತ ಈಗಾಗಲೇ ಮುಗಿದಿದೆ. ಭಾರತ ಸೇರಿದಂತೆ ಟೂರ್ನಿಯ ಪ್ರಮುಖ 4 ತಂಡಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 4 (Super 4) ಹಂತಕ್ಕೆ ತಲುಪಿದೆ. ಇದರ ಭಾಗವಾಗಿ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮತ್ತೊಮ್ಮೆ ಸೆಣಸಾಡಲಿವೆ. ಆದರೆ ಪಂದ್ಯಕ್ಕೂ ಮುನ್ನ ಈಗಾಗಲೇ ಉಭಯ ತಂಡಗಳಿಗೆ ಸ್ಟಾರ್​ ಆಟಗಾರರ ಅಲಭ್ಯತೆ ಕಾಡುತ್ತಿದೆ. ಇದರ ನಡುವೆ ಟೀಂ ಇಂಡಿಯಾಗೆ ಮತ್ತೊಂದು ಆಘಾತ ಉಂಟಾಗಿದ್ದು, ತಂಡದ ಪ್ರಮುಖ ಬೌಲರ್​ ಒಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ.

ಅನಾರೋಗ್ಯಕ್ಕೆ ತುತ್ತಾದ ಆವೇಶ್ ಖಾನ್:

ಹೌದು, ಟೀಂ ಇಂಡಿಯಾದ ವೇಗದ ಬೌಲರ್​ ಆದ ಆವೇಶ್​ ಖಾನ್​ ಅನಾರೋಗ್ಯಕ್ಕೆ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಇವರು ಶನಿವಾರದ ಅಭ್ಯಾಸಗಳಿಗೂ ಬರಲಿಲ್ಲ. ಹೀಗಾಗಿ ಆವೇಶ್​ ಖಾನ್​ ಸಂಪೂರ್ಣವಾಗಿ ಚೇತರಿಸಿಕೊಂಡರೆ ಮಾತ್ರ ಪಾಕ್​ ವಿರುದ್ಧದ ಪಂದ್ಯಕ್ಕೆ ಲಭ್ಯರಿರುತ್ತಾರೆ ಎಂದು ಭಾರತ ತಂಡದ ಪ್ರಮುಖ ಕೋಚ್​ ರಾಹುಲ್ ದ್ರಾವಿಡ್​ ಸ್ಪಷ್ಟಪಡಿಸಿದ್ದಾರೆ.

ಇದರಿಂದಾಗಿ ಅವರನ್ನು ಇಂದಿನ ಪಂದ್ಯದಿಂದ ಅವರನ್ನು ಕೈಬಿಡುವ ಸಾಧ್ಯತೆ ಹೆಚ್ಚಿದೆ. ಅಲ್ಲದೇ ಇದರಿಂದಾಗಿ ತಂಡದಲ್ಲಿ ಪ್ರಮುಖ 2 ಬದಲಾವಣೆಗಳು ಆಗುವುದಂತೂ ಖಂಡಿತ ಎನ್ನಲಾಗಿದೆ. ಈಗಾಗಲೇ ಜಡೇಜಾ ಬದಲಿಗೆ ಮತ್ತೋರ್ವ ಆಟಗಾರರನ್ನು ಕಣಕ್ಕಿಳಸಬೇಕಾಗಿರುವಾಗ, ಆವೇಶ್​ ಖಾನ್​ ಬದಲಿಗೂ ಬೇರೆ ಆಟಗಾರನನ್ನು ಕಣಕ್ಕಿಳಿಸಬೇಕಾಗಿದೆ. ಆವೇಶ್​ ಬದಲಿಗೆ ಅಶ್ವೀನ್​ ಅವರು ಆಡಬಹುದಾಗಿದೆ. ಹೀಗಾಗಿ ಒಟ್ಟು 6 ಬೌಲರ್​ಗಳ ಜೊತೆ ಟೀಂ ಇಂಡಿಯಾ ಇಂದು ಪಾಕ್​ ವಿರುದ್ಧ ಸೆಣಸಲಿದೆ.

ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.  ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 9 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಒಟ್ಟಾರೆಯಾಗಿ ಅಂಕಿಅಂಶಗಳ ಪ್ರಕಾರ ಭಾರತ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ ಪಾಕ್​ ಸಹ ಉತ್ತಮ ದಾಖಲೆ ಹೊಂದಿದ್ದು,  ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ನಾಳೆ ಕಣಕ್ಕಿಳಿಯಲಿದೆ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಭಾರತ ಮತ್ತು ಪಾಕ್​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಇದನ್ನೂ ಓದಿ: Virat Kohli: ಮಾಸ್ಕ್ ಹಾಕಿಕೊಂಡು ಅಭ್ಯಾಸ ಮಾಡಿದ ಕೊಹ್ಲಿ, ಇದನ್ನು ಯಾಕೆ ಬಳಸುತ್ತಾರೆ ಗೊತ್ತಾ?

ಏಷ್ಯಾ ಕಪ್​ಗಾಗಿ ಭಾರತ ತಂಡ:

ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್‌ ಪಾಂಡ್ಯ, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಅವೇಶ್‌ ಖಾನ್‌, ಯುಜ್ವೇಂದ್ರ ಚಹಲ್‌, ಆರ್‌ ಅಶ್ವಿನ್‌, ರವಿ ಬಿಷ್ಣೋಯ್‌.
Published by:shrikrishna bhat
First published: