Asia Cup 2022: ಏಷ್ಯಾ ಕಪ್​ ಸೂಪರ್ 4​ ವೇಳಾಪಟ್ಟಿ, ಮತ್ತೊಮ್ಮೆ ಭಾರತ-ಪಾಕ್ ಹಣಾಹಣಿಗೆ ಡೇಟ್​ ಫಿಕ್ಸ್?

Asia Cup 2022: ಏಷ್ಯಾ ಕಪ್​ 2022ರಲ್ಲಿ ಸೂಪರ್ 4 ಮಾದರಿಯು ರೌಂಡ್​ ರಾಬಿನ್​ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಯಾವುದೇ ಗುಂಪುಗಳಾಗಿ ಪಂದ್ಯ ನಡೆಯುವುದಿಲ್ಲ. ಪ್ರತಿಯೊಂದು ತಂಡವೂ ಉಳಿದ 3 ತಂಡಗಳ ಜೊತೆ ಸೆಣೆಸಬೇಕಾಗುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಈಗಾಗಲೇ ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಅಂತಿಮ ಹಂತ ತಲುಪಿದೆ. ಸೆಪ್ಟೆಂಬರ್​ 3ರಿಂದ ಏಷ್ಯಾ ಕಪ್​ 2022ರ ಸೂಪರ್ 4 ಹಂತ ಆರಂಭವಾಗಲಿದೆ. ಅಫ್ಘಾನಿಸ್ತಾನ, ಭಾರತ ತಂಡಗಳು  (Team India) ಈಗಾಗಲೇ ಸೂಪರ್ 4 ಹಂತಕ್ಕೆ ತಲುಪಿದೆ. ಹೀಗಾಗಿ ಉಳಿದ 2 ತಂಡಗಳು ಯಾವವು ಸೂಪರ್ 4 ಹಂತಕ್ಕೆ ತಲುಪಲಿದೆ ಎಂದು ನಾಳೆ ನಿರ್ಧಾರವಾಗಲಿದೆ. ಇಂದು ಬಾಂಗ್ಲಾದೇಶ್ vs ಶ್ರೀಲಂಕಾ ಸೆಣಸಾಡಿದರೆ, ನಾಳೆ ಪಾಕಿಸ್ತಾನ ಮತ್ತು ಹಾಂಗ್​ ಕಾಂಗ್​ ತಂಡಗಳು ಸೂಪರ್ 4 ಹಂತಕ್ಕೇರಲು ಸೆಣಸಾಡಲಿವೆ. ಈ 2 ಪಂದ್ಯಗಳಲ್ಲಿ ಗೆದ್ದ ತಂಡ ಮುಂದಿನ ಹಂತಕ್ಕೆ ತಲುಪಲಿದೆ.

ಏಷ್ಯಾ ಕಪ್​ 2022 ಸೂಪರ್ 4 ವೇಳಾಪಟ್ಟಿ:

ಸೆಪ್ಟೆಂಬರ್ 3 - ಅಫ್ಘಾನಿಸ್ತಾನ್ vs B2- ಶಾರ್ಜಾ
ಸೆಪ್ಟೆಂಬರ್ 4 – ಭಾರತ vs A2- ದುಬೈ
ಸೆಪ್ಟೆಂಬರ್ 6 – ಭಾರತ vs ಅಫ್ಘಾನಿಸ್ತಾನ್ – ದುಬೈ
ಸೆಪ್ಟೆಂಬರ್ 7 – A2 vs B2- ದುಬೈ
ಸೆಪ್ಟೆಂಬರ್ 8 – ಭಾರತ vs B2- ದುಬೈ
ಸೆಪ್ಟೆಂಬರ್ 9 – B1 vs- A2- ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ (ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ)

A2 ತಂಡವಾಗಿ ಸೂಪರ್ 4 ಹಂತಕ್ಕೇರಲು ಪಾಕಿಸ್ತಾನ ಮತ್ತು ಹಾಂಗ್​ ಕಾಂಗ್​ ತಂಡಗಳು ಕಾದಾಡಲಿವೆ. ಅದರಂತೆ B2 ತಂಡವಾಗಿ ಸೂಪರ್​ 4 ಗಂತಕ್ಕೆ ತಲುಪಲು ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೆಣಸಾಡಲಿವೆ.

ಇದನ್ನೂ ಓದಿ: Shikhar Dhawan: ಧವನ್ ಬಾಡಿ ನೋಡಿ ಬೋಲ್ಡ್ ಆದ ಲೇಡಿ ಫ್ಯಾನ್ಸ್, ಯಾವ್​ ಸಿನಿಮಾ ಹೀರೋಗೂ ಕಮ್ಮಿ ಇಲ್ಲಾ ಗಬ್ಬರ್ ಸಿಂಗ್

ರೌಂಡ್​ ರಾಬಿನ್​ ಮಾದರಿಯಲ್ಲಿ ಸೂಪರ್ 4:

ಇನ್ನು, ಏಷ್ಯಾ ಕಪ್​ 2022ರಲ್ಲಿ ಸೂಪರ್ 4 ಮಾದರಿಯು ರೌಂಡ್​ ರಾಬಿನ್​ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ ಯಾವುದೇ ಗುಂಪುಗಳಾಗಿ ಪಂದ್ಯ ನಡೆಯುವುದಿಲ್ಲ. ಪ್ರತಿಯೊಂದು ತಂಡವೂ ಉಳಿದ 3 ತಂಡಗಳ ಜೊತೆ ಸೆಣೆಸಬೇಕಾಗುತ್ತದೆ. ಇದರಲ್ಲಿ ಟಾಪ್​ 2 ತಂಡವು ಫೈನಲ್​ ಹಂತಕ್ಕೆ ತಲುಪುತ್ತವೆ.

ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಮೂಖಾಮುಖಿ:

ಹೌದು, ಈಗಾಗಲೇ ಲೀಗ್​ ಹಂತದಲ್ಲಿ ಒಮ್ಮೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಿವೆ. ಇದರಲ್ಲಿ ಟೀಂ ಇಂಡಿಯಾ ತಂಡವು ಪಾಕ್​ ವಿರುದ್ಧ 5 ವಿಕೆಟ್​ ಗಳಿಂದ ಗೆದ್ದು ಬೀಗಿತು. ಹೀಗಾಗಿ ಟಿ20 ವಿಶ್ವಕಪ್​ನಲ್ಲಿನ ಸೋಲಿನ ಸೇಡನ್ನು ತೀರಿಸಿಕೊಂಡಿತು. ಆದರೆ ಇದೀಗ ಮತ್ತೊಮ್ಮೆ ಪಾಕ್​ ಎದುರು ಸೆಣಸಾಡಲಿದೆ. ಹೌದು, ಸೂಪರ್ 4 ಹಂತದಲ್ಲಿ ಭಾರತ ಮತ್ತು ಪಾಕ್​ ಮುಖಾಮುಖಿ ಆಗುವ ಸಾಧ್ಯತೆ ಇದೆ. ಈ ಪಂದ್ಯವು ಸೆ.04ರಂದು ಅಂದರೆ ಭಾನುವಾರದಂದು ಪಂದ್ಯ ನಡೆಯಬಹುದು.

ಇದನ್ನೂ ಓದಿ: Rishabh Pant: ಊರ್ವಶಿ ರೌಟೇಲಾಗಾಗಿ ಹುಡುಕಾಟ, ರಿಷಭ್ ಪಂತ್​ ಕಾಲೆಳೆದ ಚಹಾಲ್​-ರೋಹಿತ್​

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.

ಏಷ್ಯಾ ಕಪ್​ ಸೂಪರ್​ 4:

ಇನ್ನು, ಸೂಪರ್​ 4 ಏಷ್ಯಾ ಕಪ್​ ಹಂತವು ದುಬೈ ಮತ್ತು ಶಾರ್ಜಾದಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯ ಆರಂಭವಾಗಲಿದೆ. ಅಲ್ಲದೇ  ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.
Published by:shrikrishna bhat
First published: