SL vs BAN Asia Cup 2022: ಬಾಂಗ್ಲಾ ಎದುರು ನಾಗಿನ್​ ಡ್ಯಾನ್ಸ್ ಮಾಡಿ 4 ವರ್ಷದ ಹಿಂದಿನ ಸೇಡು ತೀರಿಸಿಕೊಂಡ ಲಂಕಾ ಪ್ಲೇಯರ್ಸ್

SL vs BAN Asia Cup 2022: ಭಾರತ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೂಪರ್ 4 ಹಂತಕ್ಕೆ ತಲುಪಿದೆ. ಅಲ್ಲದೇ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಲಂಕಾ ಆಟಗಾರರು ನಾಗಿನ್​ ಡ್ಯಾನ್ ಮಾಡಿದ್ದು,​ ಇದೀಗ ಸಖತ್ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕಳೆದ ರಾತ್ರಿ ನಡೆದ ಏಷ್ಯಾ ಕಪ್​ 2022ರ (Asia Cup 2022) ಶ್ರೀಲಂಕಾ ಮತ್ತು ಬಾಂಗ್ಲಾದೇಶ (SL vs BAN) ಪಂದ್ಯದಲ್ಲಿ ಶ್ರೀಲಂಕಾ ತಂಡ ಬಾಂಗ್ಲಾದೇಶವನ್ನು 2 ವಿಕೆಟ್‌ಗಳಿಂದ ಸೋಲಿಸಿತು. ಇದರೊಂದಿಗೆ ತಂಡವು ಟಿ20 ಏಷ್ಯಾಕಪ್ ಸೂಪರ್-4ಗೆ ಸ್ಥಾನ ಪಡೆದಿದೆ. ಪಂದ್ಯದಲ್ಲಿ ಮೊದಲು ಆಡಿದ ಬಾಂಗ್ಲಾದೇಶ 7 ವಿಕೆಟ್‌ಗೆ 183 ರನ್ ಗಳಿಸಿತು. ಉತ್ತರವಾಗಿ ಶ್ರೀಲಂಕಾ 19.2 ಓವರ್‌ಗಳಲ್ಲಿ 8 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಪಂದ್ಯದ ಶ್ರೇಷ್ಠ ಆಟಗಾರ ಕುಸಾಲ್ ಮೆಂಡಿಸ್ 37 ಎಸೆತಗಳಲ್ಲಿ 60 ರನ್ ಗಳಿಸಿದರು. ಜೊತೆಗೆ ನಾಯಕ ದಸುನ್ ಶನಕ 33 ಎಸೆತಗಳಲ್ಲಿ 45 ರನ್ ಗಳಿಸಿ ಉತ್ತಮವಾಗಿ ಆಡಿದರು. ಇದರೊಂದಿಗೆ ಭಾರತ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೂಪರ್ 4 ಹಂತಕ್ಕೆ ತಲುಪಿದೆ. ಅಲ್ಲದೇ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಗೆದ್ದ ಲಂಕಾ ಆಟಗಾರರು ನಾಗಿನ್​ ಡ್ಯಾನ್ಸ್ (Nagin Dance) ಮಾಡಿದ್ದು,​ ಇದೀಗ ಸಖತ್ ವೈರಲ್ ಆಗಿದೆ.

4 ವರ್ಷಗಳ ಹಿಂದಿನ ಸೇಡು ತೀರಿಸಿಕೊಂಡ ಲಂಕಾ:

ಕೊನೆಯ ಓವರ್​ವರೆಗೂ ಪಂದ್ಯ ರೋಚಕತೆಯನ್ನು ಉಳಿಸಿಕೊಂಡಿತ್ತು. ಅದರಂತೆ ಕೊನೆಯ 2 ಎಸೆತ ಬಾಕಿ ಇರುವಾಗ ಲಂಕಾ ತಂಡ ಜಯ ಸಾಧಿಸಿತು. ಬಾಂಗ್ಲಾದ ಬೌಲರ್​ ಕೊನೆಯ ಓವರ್​ನಲ್ಲಿ ನೋ ಬಾಲ್​ ಹಾಕುವ ಮೂಲಕ ಲಂಕಾ ತಂಡಕ್ಕೆ ನೆರವಾದರು. ಈ ಮೂಲಕ ಶ್ರೀಲಂಕಾ ಏಷ್ಯಾ ಕಪ್​ 2022ರ ಸೂಪರ್ 4 ಹಂತಕ್ಕೆ ತಲುಪಿತು. ಅಲ್ಲದೇ ಈ ಪಂದ್ಯದಲ್ಲಿ ಗೆದ್ದ ಲಂಕಾ ತಂಡದ ಆಟಗಾರರು ನಾಗಿನ್ ಡ್ಯಾನ್ಸ್ ಮಾಡುವ ಮೂಲಕ ಇದೀಗ ಚರ್ಚೆಯಲ್ಲಿದ್ದಾರೆ.

ಹೌದು, 2018 ರ ನಿಶಾಸ್ ಟ್ರೋಫಿಯಲ್ಲಿ ಬಾಂಗ್ಲಾದೇಶ ಶ್ರೀಲಂಕಾವನ್ನು ಸೋಲಿಸಿತು. ಇದರಿಂದಾಗಿ ಶ್ರೀಲಂಕಾ ತಂಡ ನಾಕೌಟ್ ತಲುಪಲು ಸಾಧ್ಯವಾಗಲಿಲ್ಲ. ಇದಾದ ಬಳಿಕ ಬಾಂಗ್ಲಾದೇಶದ ಆಟಗಾರರು ನಾಗಿನ್​ ಡ್ಯಾನ್ಸ್ ಮಾಡಿದ್ದರು. ಇದೀಗ ಶ್ರೀಲಂಕಾ ತಂಡದ ಆಟಗಾರರು ಈ ಸೇಡನ್ನು ನಾಗಿನ್ ಡ್ಯಾನ್ಸ್ ಮಾಡುವ ಮೂಲಕ ತೀರಿಸಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸೂಪರ್​ 4 ಹಂತಕ್ಕೆ ಲಂಕಾ:

ಭಾರತ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಸೂಪರ್ 4 ಹಂತಕ್ಕೆ ತಲುಪಿದೆ. ಇನ್ನು, ಇಂದು ಹಾಂಗ್​ ಕಾಂಗ್​ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೂಪರ್​ 4 ಹಂತಕ್ಕೆ 4ನೇ ತಂಡವಾಗಿ ಸೇರ್ಪಡೆಯಾಗಲಿದೆ.

ಇದನ್ನೂ ಓದಿ: Asia Cup 2022 Hong Kong: ಇವೆರಲ್ಲಾ ಅದ್ಭುತ ಕ್ರಿಕೆಟಿಗರು! ಆದ್ರೂ ಜೀವನೋಪಾಯಕ್ಕಾಗಿ ಡೆಲಿವರಿ ಬಾಯ್​ ಕೆಲ್ಸ ಮಾಡ್ತಿದ್ದಾರೆ

ಉಭಯ ತಂಡಗಳು ಆಟಗಾರರು:

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ಅಸಿತ ಫೆರ್ನಾಂಡೋ, ದಿಲ್ಶನ್ ಮಧುಶಂಕ.

ಬಾಂಗ್ಲಾದೇಶ ತಂಡ: ಸಬ್ಬಿರ್ ರೆಹಮಾನ್, ಮೊಸದ್ದೆಕ್ ಹೊಸೈನ್, ಶಕೀಬ್ ಅಲ್ ಹಸನ್ (ನಾಯಕ), ಮುಶ್ಫಿಕರ್ ರಹೀಮ್ (ವಿಕೆಟ್ ಕೀಪರ್), ಮಹಮ್ಮದುಲ್ಲಾ, ಮೆಹಿದಿ ಹಸನ್ ಮಿರಾಜ್, ಅಫೀಫ್ ಹೊಸೈನ್, ಮಹೇದಿ ಹಸನ್, ತಸ್ಕಿನ್ ಅಹ್ಮದ್, ಎಬಾಡೋತ್ ಹೊಸೈನ್, ಮುಸ್ತಫಿಜುರ್ ರಹಮಾನ್.
Published by:shrikrishna bhat
First published: