Asia Cup 2022 SL vs AFG: ಶ್ರೀಲಂಕಾ ಎದುರು ಅಫ್ಘಾನಿಸ್ತಾನ​ ತಂಡಕ್ಕೆ ಸುಲಭ ಜಯ, ಟೂರ್ನಿಯಲ್ಲಿ ಗೆಲುವಿನ ಆರಂಭ

Asia Cup 2022: ಶ್ರೀಲಂಕಾ ತಂಡವು 19.4 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 105 ರನ್ ಗಳ ಗುರಿ ನಿಡತು. ಈ ಮೊತ್ತ ಬೆನ್ನಟ್ಟಿದ ಅಫ್ಘಾನ್​ ತಂಡ ಕೇವಲ 2 ವಿಕೆಟ್​ ನಷ್ಟಕ್ಕೆ 10.1 ಓವರ್​ ಗಳಲ್ಲಿ 106 ರನ್ ಗಳಿಸಿ ಗೆಲುವಿನ ಶುಭಾರಂಭ ಮಾಡಿದೆ.

ಅಫ್ಘಾನ್ ತಂಡಕ್ಕೆ ಸುಲಭ ಜಯ

ಅಫ್ಘಾನ್ ತಂಡಕ್ಕೆ ಸುಲಭ ಜಯ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಇನ್ನು, ಇಂದು ನಡೆದ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (SL vs AFG) ತಂಡಗಳು ಸೆಣಸಾಡಿದವು. ಮೊದಲ ಪಂದ್ಯದಲ್ಲಿಯೇ ಶ್ರೀಲಂಕಾ ತಂಡಕ್ಕೆ ಅಫ್ಘನ್​ ಹುಲಿಗಳು ಠಕ್ಕರ್​ ನೀಡಿದ್ದು, ಗೆಲುವಿನೊಂದಿಗೆ ಟೂರ್ನಿಯನ್ನು ಆರಂಭಿಸಿದೆ. ಟಾಸ್​ ಗೆದ್ದ ಅಫ್ಘಾನ್​ ತಂಡವು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟ್​ ಮಾಡಿದ ಶ್ರೀಲಂಕಾ ತಂಡವು 19.4 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 105 ರನ್ ಗಳ ಗುರಿ ನೀಡಿತು. ಈ ಮೊತ್ತ ಬೆನ್ನಟ್ಟಿದ ಅಫ್ಘನ್​ ತಂಡ ಕೇವಲ 2 ವಿಕೆಟ್​ ನಷ್ಟಕ್ಕೆ 10.1 ಓವರ್​ ಗಳಲ್ಲಿ 106 ರನ್ ಗಳಿಸಿ ಗೆಲುವಿನ ಶುಭಾರಂಭ ಮಾಡಿದೆ.

ಅಫ್ಘಾನ್​ ದಾಳಿಗೆ ತತ್ತರಿಸಿದ ಶ್ರೀಲಂಕಾ: 

ಹೌದು, ಉದ್ಘಾಟನಾ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಲಂಕಾ ಎದುರು ಸುಲಭವಾಗಿ ಗೆದ್ದು ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಲಂಕಾ ಪಡೆ ಅಫ್ಘಾನ್​ ಬೌಲಿಂಗ್ ದಾಳಿಗೆ ತತ್ತರಿಸಿತು. ಲಂಕಾ ತಂಡವು 19.4 ಓವರ್​ ಗಳಲ್ಲಿ ತನ್ನೆಲ್ಲಾ ವಿಕೆಟ್​ ಕಳೆದುಕೊಂಡು ಕೇವಲ 105 ರನ್ ಗಳ ಗುರಿ ನೀಡಿತು. ಶ್ರೀಲಂಕಾ ಪರ ಪಾತುಂ ನಿಸ್ಸಾಂಕ 3 ರನ್, ಕುಸಲ್ ಮೆಂಡಿಸ್ 2 ರನ್, ಚರಿತ್ ಅಸಲಂಕ ಶೂನ್ಯ, ದನುಷ್ಕ ಗುಣತಿಲಕ 17 ರನ್, ಭಾನುಕ ರಾಜಪಕ್ಸೆ 38 ರನ್, ವನಿಂದು ಹಸರಂಗ 0 ರನ್, ನಾಯಕ ದಸುನ್ ಶನಕ ಶೂನ್ಯ, ಚಾಮಿಕ ಕರುಣಾರತ್ನೆ 31 ರನ್, ಮಹೀಶ್ ತೀಕ್ಷಣ 0 ರನ್, ಮತೀಶ ಪತಿರಣ 5 ರನ್ ಮತ್ತು ಅಂತಿಮವಾಗಿ ದಿಲ್ಶನ್ ಮಧುಶಂಕ 1 ರನ್ ಗಳಿಸದರು.

ಮಿಂಚಿನ ಬೌಲಿಂಗ್​ ದಾಳಿ ಮಾಡಿದ ಅಫ್ಘನ್:

ಇನ್ನು, ಶ್ರೀಲಂಕಾ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕುವಲ್ಲಿ ಅಫ್ಘನ್ ತಂಡದ ಬೌಲರ್​ಗಳು ಯಶಸ್ವಿಯಾದರು. ಅಫ್ಘಾನಿಸ್ತಾನದ ಪರ ಫಜಲ್ಹಕ್ ಫಾರೂಕಿ 3.4 ಓವರ್ ಅಲ್ಲಿ 1 ಓವರ್ ಮೇಡಿನ್​ ಮಾಡಿ 11 ರನ್ ನೀಡಿ ಲಂಕಾದ ಪ್ರಮುಖ 3 ವಿಕೆಟ್​ ಉರುಳಿಸಿದರು. ಉಳಿದಂತೆ ಮುಜೀಬ್ ಉರ್ ರಹಮಾನ್ ಮತ್ತು ನಾಯಕ ಮೊಹಮ್ಮದ್ ನಬಿ ತಲಾ 2 ವಿಕೆಟ್​ ಪಡೆದರೆ ನವೀನ್-ಉಲ್-ಹಕ್ 1 ವಿಕೆಟ್​ ಪಡೆದು ಮಿಂಚಿದರು.

ಉತ್ತಮವಾಗಿ ಬ್ಯಾಟಿಂಗ್​ ಮಾಡಿದ ಅಫ್ಘನ್​ ಹುಲಿಗಳು:

ಅಲ್ಪ ಮೊತ್ತ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡವು ಕೇಔಲ 2 ವಿಕೆಟ್ ಕಳೆದುಕೊಂಡು 8 ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಇನ್ನು, ಹಜರತುಲ್ಲಾ ಝಜೈ 37 ರನ್, ರಹಮಾನುಲ್ಲಾ ಗುರ್ಬಾಜ್ 40 ರನ್ ಮತ್ತು ಇಬ್ರಾಹಿಂ 15 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖಪಾತ್ರ ನಿರ್ವಹಿಸಿದರು.

ಇದನ್ನೂ ಓದಿ: IND vs PAK Asia Cup 2022: ಭಾರತ-ಪಾಕ್​ ಪಂದ್ಯದ ಪ್ಲೇಯಿಂಗ್​ 11 ಹೆಸರಿಸಿದ ಟೀಂ ಇಂಡಿಯಾದ ಮಾಜಿ ಆಟಗಾರ, ಯಾರಿಗೆಲ್ಲ ಸ್ಥಾನ ನೋಡಿ

SL vs AFG ತಂಡಗಳ ಪ್ಲೇಯಿಂಗ್ 11:

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪಾತುಂ ನಿಸ್ಸಾಂಕ, ಕುಸಲ್ ಮೆಂಡಿಸ್, ಚರಿತ್ ಅಸಲಂಕ, ಭಾನುಕ ರಾಜಪಕ್ಸೆ, ದಸುನ್ ಶನಕ(ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ್ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ

ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಝದ್ರಾನ್, ಕರೀಂ ಜನತ್, ನಜೀಬುಲ್ಲಾ ಜದ್ರಾನ್, ಮೊಹಮ್ಮದ್ ನಬಿ (ನಾಯಕ), ರಶೀದ್ ಖಾನ್, ಅಜ್ಮತುಲ್ಲಾ ಒಮರ್ಜಾಯ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ
Published by:shrikrishna bhat
First published: