Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಭರ್ಜರಿ ತಯಾರಿ! ವೇಳಾಪಟ್ಟಿಯಲ್ಲಿ ಬದಲಾವಣೆ, ಇಲ್ಲಿದೆ ಡೀಟೆಲ್ಸ್

Asia Cup 2022: ಏಷ್ಯಾ ಕಪ್​ 2022 ನಾಳೆಯಿಂದ ದುಬೈನಲ್ಲಿ ಆರಂಭವಾಗಲಿದೆ. ಟೂರ್ನಿಯಲ್ಲಿ ಭಾರತ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28ರಂದು ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಹಾಂಕ್​ಕಾಂಗ್​ ತಂಡ ಟೂರ್ನಿಗೆ ಎಂಟ್ರಿ ಕೊಟ್ಟಿದ್ದು, ಇಲ್ಲಿದೆ ನೋಡಿ ಸಂಪೂರ್ಣ ವೇಳಾಪಟ್ಟಿಯಲ್ಲಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಈಗಾಗಲೇ ಟೀಂ ಇಂಡಿಯಾ ದುಬೈಗೆ ತೆರಳಿದ್ದು, ಏಷ್ಯಾ ಕಪ್​ಗಾಗಿ ಭರ್ಜರಿ ತಯಾರಿ ಆರಂಭಿಸಿದೆ. ಇದರ ನಡುವೆ ಏಷ್ಯಾ ಕಪ್​ ಟೂರ್ನಿಗೆ ಅಂತಿಮ ತಂಡವಾಗಿ ಹಾಂಕ್​ಕಾಂಗ್​ ಎಂಟ್ರಿ ನೀಡಿದ್ದು, ಏಷ್ಯಾ ಕಪ್​ 2022ರ ವೇಳಾಪಟ್ಟಿ ಇದೀಗ ಸಂಪೂರ್ಣವಾಗಿದೆ. ಇನ್ನು,  ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಭಾರತ ತಂಡವನ್ನು ಪ್ರಕಟಿಸಿದ್ದು, ರೋಹಿತ್​ ಶರ್ಮಾ (Rohit Sharma) ಅವರನ್ನು ತಂಡದ ನಾಯಕರನ್ನಾಗಿ ಮತ್ತು ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. 

ಏಷ್ಯಾ ಕಪ್ ತಂಡಗಳ ಗ್ರೂಪ್​:

ಗ್ರೂಪ್ A ತಂಡಗಳು- ಭಾರತ, ಪಾಕಿಸ್ತಾನ, ಹಾಂಗ್​ ಕಾಂಗ್
ಗ್ರೂಪ್ B ತಂಡಗಳು- ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ

ಏಷ್ಯಾ ಕಪ್​ 2022 ಸಂಪೂರ್ಣ ವೇಳಾಪಟ್ಟಿ:

ಶ್ರೀಲಂಕಾ vs ಅಫ್ಘಾನಿಸ್ತಾನ - ಆಗಸ್ಟ್ 27, ದುಬೈ
ಭಾರತ vs ಪಾಕಿಸ್ತಾನ - ಆಗಸ್ಟ್ 28, ದುಬೈ
ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಆಗಸ್ಟ್ 30, ಶಾರ್ಜಾ
ಭಾರತ vs ಹಾಂಗ್​ ಕಾಂಗ್ - ಆಗಸ್ಟ್ 31, ದುಬೈ
ಶ್ರೀಲಂಕಾ vs ಬಾಂಗ್ಲಾದೇಶ - ಸೆಪ್ಟೆಂಬರ್ 1, ದುಬೈ
ಪಾಕಿಸ್ತಾನ vs ಹಾಂಗ್​ ಕಾಂಗ್ - ಸೆಪ್ಟೆಂಬರ್ 2, ಶಾರ್ಜಾ

ಗ್ರೂಪ್​ ಹಂತದಲ್ಲಿ 4 ತಂಡಗಳು ಸೂಪರ್​-4ಗೆ ಅರ್ಹತೆ ಪಡೆಯಲಿದೆ.

ಸೂಪರ್- 4 ವೇಳಾಪಟ್ಟಿ:

B1 vs B2 - ಸೆಪ್ಟೆಂಬರ್ 3, ಶಾರ್ಜಾ
A1 vs A2 - ಸೆಪ್ಟೆಂಬರ್ 4, ದುಬೈ
A1 vs B1 - ಸೆಪ್ಟೆಂಬರ್ 6, ದುಬೈ
A2 vs B2 - ಸೆಪ್ಟೆಂಬರ್ 7, ದುಬೈ
A1 vs B2 - ಸೆಪ್ಟೆಂಬರ್ 8, ದುಬೈ
B1 vs A2 - ಸೆಪ್ಟೆಂಬರ್ 9, ದುಬೈ
ಫೈನಲ್ ಪಂದ್ಯ - ಸೆಪ್ಟೆಂಬರ್ 11, ದುಬೈ

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೂ ಮುನ್ನ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಯುವ ವೇಗಿ

ಭಾರತ-ಪಾಕ್ ಪಂದ್ಯ ಸೂಪರ್​ ಸಂಡೇ:

ಏಷ್ಯಾ ಕಪ್ ಆಗಸ್ಟ್ 27ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಗಸ್ಟ್ 28ರಂದು ನಡೆಯಲಿದೆ. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದ್ದು, ಯುಎಇಯಲ್ಲಿ ನಡೆಯಲಿದೆ. ಪಂದ್ಯ ಆಗಸ್ಟ್ 28ರಂದು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ನಡೆಯಲಿದೆ. ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney+Hotstar ನಲ್ಲಿ ವೀಕ್ಷಿಸಬಹುದು.

ಭರ್ಜರಿ ಅಭ್ಯಾಸದಲ್ಲಿ ಟೀಂ ಇಂಡಿಯಾ:

ಈಗಾಗಲೇ ದುಬೈಗೆ ತೆರಳಿರುವ ಭಾರತ ತಂಡ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್​ ಟಿ20 ಟೂರ್ನಿಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ರಾಹುಲ್​ ದ್ರಾವಿಡ್​ ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವ ಹಿನ್ನಲೆ ಅವರ ಬದಲಾಗಿ ಭಾರತ ತಂಡಕ್ಕೆ ಹೊಸ ಕೊಚ್ ಆಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್​ಗೆ​ ಎಂಟ್ರಿ ಕೊಟ್ಟ ಹಾಂಗ್​ ಕಾಂಗ್, ಫೈನಲ್ 6 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

ಏಷ್ಯಾ ಕಪ್​ 2022 ಭಾರತ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್
Published by:shrikrishna bhat
First published: