Asia Cup 2022: ಏಷ್ಯಾ ಕಪ್​ ವೇಳಾಪಟ್ಟಿ ಪ್ರಕಟ, ಇಂಡೋ-ಪಾಕ್​ ಕದನಕ್ಕೆ ಡೇಟ್ ಫಿಕ್ಸ್

ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿನ ಆಂತರಿಕ ಬಿಕ್ಕಟ್ಟಿನಿಂದ ಟೂರ್ನಿಯನ್ನು ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಹೀಗಾಗಿ ಇಂದು ಏಷ್ಯಾ ಕಪ್​ 2022ರ ವೇಳಾಪಟ್ಟಿ ಬಿಡುಗಡೆ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
 ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಅಲ್ಲಿನ ಆಂತರಿಕ ಬಿಕ್ಕಟ್ಟಿನಿಂದ ಟೂರ್ನಿಯನ್ನು ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಹೀಗಾಗಿ ಇಂದು ಏಷ್ಯಾ ಕಪ್​ 2022ರ ವೇಳಾಪಟ್ಟಿ ಬಿಡುಗಡೆ ಆಗಿದೆ. ಅಲ್ಲದೇ ಭಾರತ-ಪಾಕಿಸ್ತಾನ (IND vs PAK) ಪಂದ್ಯ ಆಗಸ್ಟ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿದೆ. ಈಗಾಗಲೇ ಟೂರ್ನಿಯು ಕೊರೋನಾ ಕಾರಣದಿಂದ 2 ವರ್ಷಗಳ ಕಾಲ ನಡೆದಿರಲಿಲ್ಲ. ಹೀಗಾಘಿ ಈ ಬಾರಿಯ ಟೂರ್ನಿಯ ಮೇಲೆ ಹೆಚ್ಚಿನ ನಿರೀಕ್ಷೆಯಿದೆ. ಅದರಲ್ಲಿಯೂ ಇಂಡೋ ಮತ್ತು ಪಾಕ್​ ಕದನಕ್ಕೆ ಸಹ ಮುಹೂರ್ತ ಫಿಕ್ಸ್ ಆಗಿದ್ದು, ಪಂದ್ಯವು ಆಗಸ್ಟ್ 28ರಂದು ನಡೆಯಲಿದೆ. 

ಏಷ್ಯಾ ಕಪ್ 2022 ವೇಳಾಪಟ್ಟಿ ಪ್ರಕಟ:

ಇನ್ನು, ಇಂದು ಏಷ್ಯಾ ಕಪ್ 2022ರ ವೇಳಾಪಟ್ಟಿ ಪ್ರಕಟವಾಗಿದ್ದು, ಭಾರತ ಮತ್ತು ಪಾಕಿಸ್ತಾನದ ಪಂದ್ಯಕ್ಕೂ ಡೇಟ್​ ಫಿಕ್ಸ್ ಆಗಿದೆ. ಒಟ್ಟು 6 ತಂಡಗಳು ಕಪ್​ಗಾಗಿ ಸೆಣಸಾಡಲಿದ್ದು, ಈ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಟೂರ್ನಿಯು ಆಗಸ್ಟ್  27 ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 11ರಂದು ಫೈನಲ್​ ಪಂದ್ಯ ಜರುಗಲಿದೆ. ಸಂಪೂರ್ಣ ವೇಳಾಪಟ್ಟಿಯನ್ನು ಜಯ್​ ಶಾ ಅವರು ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಏಷ್ಯಾ ಕಪ್ ತಂಡಗಳ ಗ್ರೂಪ್​:

ಗ್ರೂಪ್ A- ಭಾರತ, ಪಾಕಿಸ್ತಾನ, ಕ್ವಾಲಿಫೈಯರ್ ತಂಡ

ಗ್ರೂಪ್B- ಬಾಂಗ್ಲಾದೇಶ, ಅಫ್ಘಾನಿಸ್ತಾನ, ಶ್ರೀಲಂಕಾ

ಏಷ್ಯಾ ಕಪ್ 2022 ವೇಳಾಪಟ್ಟಿ:

ಶ್ರೀಲಂಕಾ vs ಅಫ್ಘಾನಿಸ್ತಾನ - ಆಗಸ್ಟ್ 27
ಭಾರತ vs ಪಾಕಿಸ್ತಾನ - ಆಗಸ್ಟ್ 28
ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಆಗಸ್ಟ್ 30
ಭಾರತ vs ಕ್ವಾಲಿಫೈಯರ್ ತಂಡ - ಆಗಸ್ಟ್ 31
ಶ್ರೀಲಂಕಾ vs ಬಾಂಗ್ಲಾದೇಶ - ಸೆಪ್ಟೆಂಬರ್ 1
ಪಾಕಿಸ್ತಾನ vs ಕ್ವಾಲಿಫೈಯರ್ ತಂಡ - ಸೆಪ್ಟೆಂಬರ್ 2
B1 vs B2 - ಸೆಪ್ಟೆಂಬರ್ 3
A1 vs A2 – ಸೆಪ್ಟೆಂಬರ್ 4
A1 vs B1 – ಸೆಪ್ಟೆಂಬರ್ 6
A2 vs B2 – ಸೆಪ್ಟೆಂಬರ್ 7
A1 vs B2 – ಸೆಪ್ಟೆಂಬರ್ 8
B1 vs A2 - ಸೆಪ್ಟೆಂಬರ್ 9
ಫೈನಲ್ ಪಂದ್ಯ - ಸೆಪ್ಟೆಂಬರ್ 11
ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪ್ರಾರಂಭವಾಗಲಿದೆ.

ಇದನ್ನೂ ಓದಿ: IND vs PAK CWG 2022: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್, ಭಾರತಕ್ಕೆ ಭರ್ಜರಿ ಜಯ

ಏಷ್ಯಾ ಕಪ್ ನಲ್ಲಿ ಭಾರತದ ಸಾಧನೆ:

ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ ನಡೆದ 14 ಆವೃತ್ತಿಗಳಲ್ಲಿ ಭಾರತ 7 ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ಟೀಂ ಇಂಡಿಯಾ  1984, 1988, 1990/91, 1995, 2010, 2016 ಮತ್ತು 2018 ರಲ್ಲಿ ವಿಜೇತರಾಗಿ ಹೊರಹೊಮ್ಮಿತು. ಶ್ರೀಲಂಕಾ ಈವರೆಗೆ 5 ಬಾರಿ ಗೆದ್ದಿದ್ದು, 1986, 1997, 2004, 2008, ಮತ್ತು 2014 ರಲ್ಲಿ ಪಾಕಿಸ್ತಾನ ಗೆದ್ದಿದೆ.

ಇದನ್ನೂ ಓದಿ: IND vs WI: ಟೀಂ ಇಂಡಿಯಾಗೆ ಬಿಗ್​ ಶಾಕ್​, ವಿಂಡೀಸ್​ ವಿರುದ್ಧದ ಟಿ20 ಸರಣಿಗೆ ಸ್ಟಾರ್​ ಆಟಗಾರ ಔಟ್​?

ಭಾರತ - ಪಾಕ್ ಮುಖಾಮುಖಿ:

ಟಿ 20 ವಿಶ್ವಕಪ್​ ಮೊದಲೆ ಈ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗಲಿದೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಸೋತಿರುವ ಟೀಂ ಇಂಡಿಯಾ ಈ ಬಾರಿ ಏಷ್ಯಾಕಪ್​ನಲ್ಲಿ ಪಾಕ್​ ಅನ್ನು ಸೋಲಿಸುವ ಮೂಲಕ ಹಿಂದಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಭಾರತ ತಂಡ ಏಷ್ಯಾಕಪ್​ನಲ್ಲಿ ಪಾಕ್​ ಎದುರು ಹೆಚ್ಚು ಪ್ರಾಬಲ್ಯ ತೋರಿದ್ದು, 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಬೀಗಿದರೆ ಕೇವಲ 4 ಪಂದ್ಯಗಳಲ್ಲಿ ಸೋಲನ್ನಪ್ಪಿದೆ. ಉಳಿದ ಒಂದು ಪಂದ್ಯ ಡ್ರಾ ಅಲ್ಲಿ ಅಂತ್ಯಗೊಂಡಿದೆ.
Published by:shrikrishna bhat
First published: