IND vs PAK Asia Cup 2022: ಆ ಪದ ಹೇಳೋಕೆ ನಾಚಿಕೊಂಡ ರಾಹುಲ್​ ದ್ರಾವಿಡ್! ವಿಡಿಯೋ ಸಿಕ್ಕಾಪಟ್ಟೆ ವೈರಲ್​​

IND vs PAK Asia Cup 2022: ಭಾರತ-ಪಾಕ್​ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ದ್ರಾವಿಡ್, ಪತ್ರಕರ್ತರು ಕೇಳಿದ ಪಾಕಿಸ್ತಾನದ ಬೌಲಿಂಗ್ ಲೈನ್ ಅಪ್ ಪ್ರಶ್ನೆಗೆ, ಎಲ್ಲರೂ ಒಮ್ಮೆ ನಗುವಂತೆ ಉತ್ತರ ನೀಡಿದ್ದಾರೆ.

ರಾಹುಲ್ ದ್ರಾವಿಡ್

ರಾಹುಲ್ ದ್ರಾವಿಡ್

  • Share this:
ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಇಂದು ಏಷ್ಯಾ ಕಪ್ 2022 (Asia Cup 2022)​ ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಮತ್ತೊಮ್ಮೆ ಮುಖಾಮುಖಿಯಾಲಿವೆ. ಏಷ್ಯಾ ಕಪ್ 2022 ರಲ್ಲಿ, ಎರಡೂ ತಂಡಗಳ ನಡುವೆ ಈಗಾಗಲೇ ಪಂದ್ಯ ನಡೆದಿದ್ದು, ಅದರಲ್ಲಿ ಭಾರತ ಗೆದ್ದಿದೆ. ಹಾರ್ದಿಕ್ ಪಾಂಡ್ಯ ಮತ್ತು ರವೀಂದ್ರ ಜಡೇಜಾ ಅವರ ಆಲ್‌ರೌಂಡ್ ಪ್ರದರ್ಶನದ ಮೂಲಕ ಭಾರತ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು. ಆದರೆ, ಮೊದಲ ಪಂದ್ಯದಲ್ಲಿ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್​ಗಳ ದೌರ್ಬಲ್ಯ ಪಾಕಿಸ್ತಾನದ ವೇಗದ ಬೌಲರ್‌ಗಳ ಮುಂದೆ ಬಯಲಾಗಿದೆ. ಪಾಕ್‌ಗೆ ಪದಾರ್ಪಣೆ ಮಾಡಿದ 19 ವರ್ಷದ ನಸೀಮ್ ಶಾ ಪಾಕ್​ ಪರ ಅದ್ಭುತ ಬೌಲಿಂಗ್ ಮಾಡುವ ಮೂಲಕ ಮಿಂಚಿದ್ದರು. ಇನ್ನು, ಇಂದಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ (Team India) ಮುಖ್ಯ ಕೋಚ್​ ರಾಹುಲ್ ದ್ರಾವಿಡ್ (Rahul Dravid)​ ಪತ್ರಿಕಾಗೋಷ್ಠಿ ನಡೆಸಿರು ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಹಾಗಿದ್ರೆ ವಿಡಿಯೋದಲ್ಲಿ ಅಂತಹದೇನಿದೆ ಎಂದು ನೀವೇ ನೋಡಿ.

4 ಅಕ್ಷರಗಳ ಆ ಒಂದು ಪದ ಹೇಳದ ದ್ರಾವಿಡ್:

ಹೌದು, ಭಾರತ-ಪಾಕ್​ ಪಂದ್ಯಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿದ ದ್ರಾವಿಡ್, ಪತ್ರಕರ್ತರು ಕೇಳಿದ ಪಾಕಿಸ್ತಾನದ ಬೌಲಿಂಗ್ ಲೈನ್ ಅಪ್ ಪ್ರಶ್ನೆಗೆ, ಎಲ್ಲರೂ ಒಮ್ಮೆ ನಗುವಂತೆ ಉತ್ತರ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ‘ನಾನು ಒಂದು ಪದವನ್ನು ಬಳಸಲು ಬಯಸಿದ್ದೆ, ಆದರೆ ಅದನ್ನು ಬಳಸಲು ಸಾಧ್ಯವಿಲ್ಲ. ನನ್ನ ಮನಸ್ಸಿನಲ್ಲಿ ಒಂದು ಮಾತು ಇದೆ, ನನ್ನ ಬಾಯಿಂದ ಹೊರಬರಲಿದೆ, ಆದರೆ ಅದನ್ನು ಬಳಸಲು ಸಾಧ್ಯವಿಲ್ಲ. ನಾನು ಮಾತನಾಡಲು ಪ್ರಯತ್ನಿಸುತ್ತಿರುವ ಪದವು 4 ಅಕ್ಷರಗಳ ಪದವಾಗಿದ್ದು ಅದು 'S' ನೊಂದಿಗೆ ಪ್ರಾರಂಭವಾಗುತ್ತದೆ‘ ಎಂದಿದ್ದಾರೆ. ಇಲ್ಲಿ ದ್ರಾವಿಡ್​ ಅವರು ಪಾಕಿಸ್ತಾನದ ಬೌಲರ್​ಗಳಷ್ಟೇ ನಮ್ಮ ತಂಡದ ಬೌಲರ್​ಗಳೂ ಸಹ ಉತ್ತಮವಾಗಿ ಬೌಲಿಂಗ್ ಮಾಡುತ್ತಾರೆ ಎನ್ನುವುದಕ್ಕೆ S ಅಕ್ಷರದಿಂದ ಬರುವ ಆ 4 ಅಕ್ಷರದ ಪದವನ್ನು ಬಳಸದೇ ಹೇಳಿದ್ದಾರೆ.

ಇದೇ ವೇಳೆ ಭಾರತದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿಯನ್ನು ರಾಹುಲ್ ದ್ರಾವಿಡ್ ಸಮರ್ಥಿಸಿಕೊಂಡಿದ್ದಾರೆ. ಕೊಹ್ಲಿ ಎಷ್ಟು ರನ್ ಗಳಿಸುತ್ತಾರೆ ಎಂಬುದು ಮುಖ್ಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದರು. ಅವರ ಪ್ರಕಾರ ಟಿ20 ಕ್ರಿಕೆಟ್‌ನಲ್ಲಿ ಒಂದು ಸಣ್ಣ ಇನ್ನಿಂಗ್ಸ್ ಕೂಡ ಪಂದ್ಯದ ದಿಕ್ಕನ್ನೇ ಬದಲಿಸುತ್ತದೆ. ಅದೇ ಸಮಯದಲ್ಲಿ, ರಿಷಭ್​ ಪಂತ್ ಬಗ್ಗೆ, ದ್ರಾವಿಡ್ ಅವರು ಟೀಂ ಇಂಡಿಯಾದ ವಿಕೆಟ್ ಕೀಪರ್ ಆಗಿ ಮೊದಲ ಆಯ್ಕೆಯಲ್ಲ ಎಂದು ಹೇಳಿದರು. ಪಿಚ್ ಮತ್ತು ಪರಿಸ್ಥಿತಿಗಳ ಆಧಾರದ ಮೇಲೆ ಆಟಗಾರನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: IND vs PAK Asia Cup 2022: ಇಂದು ಭಾರತ-ಪಾಕ್ ಪಂದ್ಯ​, ಇಲ್ಲಿದೆ ಉಭಯ ತಂಡಗಳ ಪ್ಲೇಯಿಂಗ್ 11

IND vs PAK  ಸಂಭಾವ್ಯ ಪ್ಲೇಯಿಂಗ್ 11:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.

ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ.
Published by:shrikrishna bhat
First published: