ASIA CUP 2022: ಏಷ್ಯಾ ಕಪ್ ಪ್ರೋಮೋ ರಿಲೀಸ್, ಭಾರತ-ಪಾಕ್ ಮುಖಾಮುಖಿಗೆ ಡೇಟ್​ ಫಿಕ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಈಗಾಗಲೇ ಏಷ್ಯಾ ಕಪ್​ಗಾಗಿ ಬರದ ಸಿದ್ಧತೆಗಳು ನಡೆಯುತ್ತಿದೆ. ಇದರ ನಡುವೆ ಏಷ್ಯಾ ಕಪ್ 2022ರ ಹೊಸ ಪ್ರೋಮೋ ರಿಲೀಸ್ ಆಗಿದೆ. ನಂಬರ್ ಒನ್ ಮೈ ಇಂಡಿಯಾ ಎಂಬ ಪ್ರೋಮೋವನ್ನು ಸ್ಟಾರ್​ ಸ್ಪೋರ್ಟ್ಸ್​  ಬಿಡುಗಡೆ ಮಾಡಿದೆ. 

  • Share this:

ಶ್ರೀಲಂಕಾ (Sri Lanka) ದೇಶದಲ್ಲಿನ ಆಂತರಿಕ ಸಮಸ್ಯೆಯಿಂದಾಗಿ ಈ ಬಾರಿ ಲಂಕಾದಲ್ಲಿ ನಡೆಯ ಬೇಕಿದ್ದ ಏಷ್ಯಾಕಪ್ 2022 (Asia Cup 2022) ಟೂರ್ನಿಯು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ನಡೆಯಲಿದೆ.   ಟೂರ್ನಿಯು ಆಗಸ್ಟ್ 27ರಿಂದ ಸಪ್ಟೆಂಬರ್ 11ರ ವರೆಗೆ ನಡೆಯಲಿದೆ. ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ,  ಅಫ್ಘಾನಿಸ್ತಾನ ಮತ್ತು ಕ್ವಾಲಿಪೈಯರ್ ಆಗುವ ಒಂದು ತಂಡಗಳ ನಡುವೆ ಟೂರ್ನಿ ನಡೆಯಲಿದೆ. ಕೊರೋನಾ ಕಾರಣದಿಂದ 2 ವರ್ಷಗಳ ಕಾಲ ನಡಯದಿದ್ದ ಈ ಟೂರ್ನಿಯ ಮೇಲೆ ಇದೀಗ ಅಭಿಮಾನಿಗಳು ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅಲ್ಲದೇ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳ ನಡುವಿನ ಹಣಾಹಣಿಗಾಗಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾದಿದ್ದು, ಇದೀಗ ಏಷ್ಯಾ ಕಪ್ 2022ರ ಹೊಸ ಪ್ರೋಮೋ ವನ್ನು ಬಿಡುಗಡೆ ಮಾಡಲಾಗಿದೆ.


ಏಷ್ಯಾ ಕಪ್ ಪ್ರೋಮೋ ಬಿಡುಗಡೆ:


ಹೌದು, ಈಗಾಗಲೇ ಏಷ್ಯಾ ಕಪ್​ಗಾಗಿ ಬರದ ಸಿದ್ಧತೆಗಳು ನಡೆಯುತ್ತಿದೆ. ಇದರ ನಡುವೆ ಏಷ್ಯಾ ಕಪ್ 2022ರ ಹೊಸ ಪ್ರೋಮೋ ರಿಲೀಸ್ ಆಗಿದೆ. ನಂಬರ್ ಒನ್ ಮೈ ಇಂಡಿಯಾ ಎಂಬ ಪ್ರೋಮೋವನ್ನು ಸ್ಟಾರ್​ ಸ್ಪೋರ್ಟ್ಸ್​  ಬಿಡುಗಡೆ ಮಾಡಿದೆ. ಪ್ರೋಮೋದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರವೀಂದ್ರ ಜಡೇಜಾ ಸೇರಿದಂತೆ ಪಾಕ್​ ಆಟಗಾರರು ಕಾಣಿಸಿಕೊಂಡಿದ್ದಾರೆ.ಟೂರ್ನಿಯ ವೇಳಾಪಟ್ಟಿ:


27 ಆಗಸ್ಟ್ 2022: ಶ್ರೀಲಂಕಾ VS ಬಾಂಗ್ಲಾದೇಶ
28 ಆಗಸ್ಟ್ 2022: ಭಾರತ VS ಪಾಕಿಸ್ತಾನ
29 ಆಗಸ್ಟ್ 2022: ಬಾಂಗ್ಲಾದೇಶ VS ಅಫ್ಘಾನಿಸ್ತಾನ
30 ಆಗಸ್ಟ್ 2022: ಪಾಕಿಸ್ತಾನ VS ಕ್ವಾಲಿಫೈಯರ್ ತಂಡ
1 ಸೆಪ್ಟೆಂಬರ್ 2022: ಶ್ರೀಲಂಕಾ VS ಅಫ್ಘಾನಿಸ್ತಾನ
2 ಸೆಪ್ಟೆಂಬರ್ 2022: ಭಾರತ VS ಕ್ವಾಲಿಫೈಯರ್ ತಂಡ


ಇದನ್ನೂ ಓದಿ: IND vs WI: ಟೀಂ ಇಂಡಿಯಾದ ರೋಚಕ ಗೆಲುವಿಗೆ ಇವರೇ ಕಾರಣ, ಕೊನೆ ಓವರ್​ನಲ್ಲಿ ಮ್ಯಾಜಿಕ್ ಮಾಡಿದ ಸಿರಾಜ್


4 ಸೆಪ್ಟೆಂಬರ್ 2022: ಗುಂಪು A ವಿಜೇತ vs ಗುಂಪು B ರನ್ನರ್ ಅಪ್
5 ಸೆಪ್ಟೆಂಬರ್ 2022: ಗ್ರೂಪ್ B ವಿನ್ನರ್ vs ಗ್ರೂಪ್ A ರನ್ನರ್ ಅಪ್
6 ಸೆಪ್ಟೆಂಬರ್ 2022: ಗುಂಪು A ವಿಜೇತ vs ಗುಂಪು A ರನ್ನರ್ ಅಪ್
7 ಸೆಪ್ಟೆಂಬರ್ 2022: ಗುಂಪು B ವಿಜೇತ vs ಗುಂಪು B ರನ್ನರ್ ಅಪ್
8 ಸೆಪ್ಟೆಂಬರ್ 2022: ಗುಂಪು A ವಿಜೇತ vs ಗುಂಪು B ವಿಜೇತ
9 ಸೆಪ್ಟೆಂಬರ್ 2022: ಗ್ರೂಪ್ A ರನ್ನರ್ ಅಪ್ ವಿರುದ್ಧ ಗ್ರೂಪ್ B ರನ್ನರ್ ಅಪ್
11 ಸೆಪ್ಟೆಂಬರ್ 2022: TBD VS TBD - AIS ಕಪ್ 2022 ಫೈನಲ್


ಭಾರತ - ಪಾಕ್ ಮುಖಾಮುಖಿ:


ಟಿ 20 ವಿಶ್ವಕಪ್​ ಮೊದಲೆ ಈ ಬಾರಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗಲಿದೆ. ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ಎದುರು ಸೋತಿರುವ ಟೀಂ ಇಂಡಿಯಾ ಈ ಬಾರಿ ಏಷ್ಯಾಕಪ್​ನಲ್ಲಿ ಪಾಕ್​ ಅನ್ನು ಸೋಲಿಸುವ ಮೂಲಕ ಹಿಂದಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಈವರೆಗಿನ ಅಂಕಿ ಅಂಶಗಳ ಪ್ರಕಾರ ಭಾರತ ತಂಡ ಏಷ್ಯಾಕಪ್​ನಲ್ಲಿ ಪಾಕ್​ ಎದುರು ಹೆಚ್ಚು ಪ್ರಾಬಲ್ಯ ತೋರಿದ್ದು, 12 ಪಂದ್ಯಗಳಲ್ಲಿ 7 ಪಂದ್ಯಗಳನ್ನು ಗೆದ್ದು ಬೀಗಿದರೆ ಕೇವಲ 4 ಪಂದ್ಯಗಳಲ್ಲಿ ಸೋಲನ್ನಪ್ಪಿದೆ. ಉಳಿದ ಒಂದು ಪಂದ್ಯ ಡ್ರಾ ಅಲ್ಲಿ ಅಂತ್ಯಗೊಂಡಿದೆ.


ಇದನ್ನೂ ಓದಿ: Suresh Raina: ರೈನಾ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮತ್ತೆ ಎಂಟ್ರಿ ಕೊಡ್ತಾರಾ ಮಿಸ್ಟರ್ ಐಪಿಎಲ್?


ಏಷ್ಯಾ ಕಪ್ ನಲ್ಲಿ ಭಾರತದ ಸಾಧನೆ:


ಏಷ್ಯಾಕಪ್ ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಭಾರತ ಅತ್ಯಂತ ಯಶಸ್ವಿ ತಂಡವಾಗಿದೆ. ಇದುವರೆಗೆ ನಡೆದ 14 ಆವೃತ್ತಿಗಳಲ್ಲಿ ಭಾರತ 7 ಪ್ರಶಸ್ತಿ ಗೆದ್ದು ದಾಖಲೆ ಬರೆದಿದೆ. ಟೀಂ ಇಂಡಿಯಾ  1984, 1988, 1990/91, 1995, 2010, 2016 ಮತ್ತು 2018 ರಲ್ಲಿ ವಿಜೇತರಾಗಿ ಹೊರಹೊಮ್ಮಿತು. ಶ್ರೀಲಂಕಾ ಈವರೆಗೆ 5 ಬಾರಿ ಗೆದ್ದಿದ್ದು, 1986, 1997, 2004, 2008, ಮತ್ತು 2014 ರಲ್ಲಿ ಪಾಕಿಸ್ತಾನ ಗೆದ್ದಿದೆ.

top videos
    First published: