Asia Cup 2022 IND vs PAK: ಭಾರತದ ವಿರುದ್ಧ ಕಪ್ಪುಪಟ್ಟಿ ಧರಿಸಿ ಆಡಲಿದೆ ಪಾಕ್ ಟೀಂ, ಸಾಂಪ್ರದಾಯಿಕ ಎದುರಾಳಿಗಳಿಗೆ ಏನಾಯ್ತು?

IND vs PAK: ಇಂದು ನಡೆಯಲಿರುವ ಭಾರತ-ಪಾಕಿಸ್ತಾನ ಪಂದ್ಯಕ್ಕೆ ಇನ್ನೇನು ಕೆಲ ಗಂಟೆಗಳು ಮಾತ್ರ ಬಾಕಿ ಉಳಿದಿವೆ. ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದ ವಿರುದ್ಧದ ಮ್ಯಾಚ್​ನಲ್ಲಿ ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿಯಲಿದೆ.

ಪಾಕಿಸ್ತಾನ ತಂಡ

ಪಾಕಿಸ್ತಾನ ತಂಡ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಯುಎಇ (UAE) ಅಲ್ಲಿ ಅದ್ಧೂರಿ ಆರಂಭವಾಗಿದೆ. ಇದರ ನಡುವೆ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೌದು, ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮುಖಾಮುಖಿ ಆಗಲಿದೆ. ಈಗಾಗಲೇ ಪಂದ್ಯದ ಸಂಪೂರ್ಣ ಟಿಕೆಟ್​ಗಳು ಮಾರಾಟವಾಗಿದ್ದು, ಈ ಒಂದು ಮ್ಯಾಚ್​ಗಾಗಿ ಕ್ರಿಕೆಟ್​ ಲೋಕವೇ ಕಾತುರತೆಯಿಂದ ಕಾದುಕುಳಿತಿದೆ. ಆದರೆ ಇದರ ನಡುವೆ ಪಾಕಿಸ್ತಾನ ಕ್ರಿಕೆಟ್ ತಂಡವು ಭಾರತದ ವಿರುದ್ಧ ಇಂದಿನ ಪಂದ್ಯದಲ್ಲಿಕಪ್ಪುಪಟ್ಟಿ (Black Arm Bands) ಧರಿಸಿ ಕಣಕ್ಕಿಳಿಯಲಿದೆ. ಹೌದು, ಒಂದು ವಿಶೇಷ ಕಾರಣಕ್ಕಾಗಿ ಪಾಕ್​ ಆಟಗಾರರು ಈ ರೀತಿ ಪಟ್ಟಿ ಧರಿಸಿ ಆಡಲಿದ್ದಾರೆ.

ಕಪ್ಪುಪಟ್ಟಿ ಧರಿಸಿ ಕಣಕ್ಕಿಳಿಯಲಿರುವ ಪಾಕ್​ ಆಟಗಾರರು:

ಹೌದು, ಇಂದು ನಡೆಯಲಿರುವ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಆಟಗಾರರು ಕಪ್ಪುಪಟ್ಟಿ ಧರಿಸಿ ಆಡಲಿದ್ದಾರೆ. ಆದರೆ ಇದರ ಹಿಂದೆ ಒಂದು ವಿಶೇಷ ಕಾರಣವಿದೆ. ಸದ್ಯ ಪಾಕಿಸ್ತಾನದಲ್ಲಿ ಪ್ರವಾಹದ ಪರಿಸ್ಥಿತಿ ಎದುರಾಗಿದೆ. ಇದರಿಂದ ಸಾವಿರಾರು ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೀಗಾಗಿ ಪ್ರವಾಹದಿಂದ ನಲುಗಿ ಹೋಗಿರುವ ಜನರಿಗೆ ಬೆಂಬಲ ಸೂಚಿಸುವ ಸಲುವಾಗಿ ಪಾಕ್​ ಆಟಗಾರರು ತಮ್ಮ ಜೆರ್ಸಿ ತೋಳಿಗೆ ಕಪ್ಪು ಬ್ಯಾಂಡ್​ಗಳನ್ನು ಧರಿಸಲಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ದೇಶಾದ್ಯಂತ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದವರಿಗೆ ತಮ್ಮ ಬೆಂಬಲ ಸೂಚಿಸಲು ಪಾಕ್​ ಆಟಗಾರರು ಭಾರತ ವಿರುದ್ದದ ಪಂದ್ಯದಲ್ಲಿ ಕಪ್ಪುಪಟ್ಟಿ ಧರಿಸಲಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್​ ಮಂಡಳಿ ಅಧಿಕೃತವಾಗಿ ತಿಳಿಸಿದೆ.

ಪ್ರವಾಹಕ್ಕೆ ನಲುಗಿದೆ ಪಾಕ್​:

ಇನ್ನು, ಪಾಕಿಸ್ತಾನದಲ್ಲಿ ಮಾನ್ಸೂನ್ ಪ್ರವಾಹವನ್ನು ಎದುರಿಸಲು ಪಾಕಿಸ್ತಾನ ಸರ್ಕಾರವು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಜೊತೆಗೆ ನಾಲ್ಕು ದಶಲಕ್ಷಕ್ಕೂ ಹೆಚ್ಚು ಜನರ ಮೇಲೆ ಪ್ರವಾಹ  ಪರಿಣಾಮ ಬೀರಿದೆ ಎಂದು ಹೇಳಿದೆ. ಜೂನ್‌ನಲ್ಲಿ ಆರಂಭವಾದ ಮುಂಗಾರು ಮಳೆಯ ಪರಿಣಾಮವಾಗಿ ಕಳೆದ 24 ಗಂಟೆಗಳಲ್ಲಿ900 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆ (ಎನ್‌ಡಿಎಂಎ) ತಿಳಿಸಿದೆ.

ಇದನ್ನೂ ಓದಿ: Asia Cup 202 IND vs PAK: ಭಾರತ-ಪಾಕಿಸ್ತಾನ ಪಂದ್ಯ ನೋಡಿದ್ರೆ ಬೀಳುತ್ತೆ ದಂಡ, ಇದೆಂತಾ ರೂಲ್ಸ್ ಗುರು!

ಭಾರತ-ಪಾಕ್​ ಪಂದ್ಯ ನೋಡಿದ್ರೆ ಬೀಳುತ್ತೆ ದಂಡ:

ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಗುಂಪಿನಲ್ಲಿ ನೋಡದಂತೆ ಶ್ರೀನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಆಡಳಿತ ಮಂಡಳಿ ವಿವಾದಾತ್ಮಕ ಆದೇಶವೊಂದನ್ನು ಹೊರಡಿಸಿದೆ. ಹಾಸ್ಟೆಲ್ ಕೊಠಡಿಗಳಲ್ಲಿ ಗುಂಪುಗಳಲ್ಲಿ ಪಂದ್ಯವನ್ನು ವೀಕ್ಷಿಸಿದ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ಪಂದ್ಯದ ಕುರಿತು ಪೋಸ್ಟ್ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ನಿಯಮಗಳನ್ನು ಉಲ್ಲಂಘಿಸಿದವರನ್ನು ಹಾಸ್ಟೆಲ್‌ನಿಂದ ಹೊರಹಾಕಲಾಗುವುದರ ಜೊತೆ ರೂ. 5 ಸಾವಿರ ದಂಡ ವಿಧಿಸುವುದಾಗಿ ಎನ್ ಐಟಿ ಆಡಳಿತ ಮಂಡಳಿ ತಿಳಿಸಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: IND vs PAK Asia Cup 2022: ಇಂಡೋ-ಪಾಕ್​ ಕದನದಲ್ಲಿ ಗೆಲುವು ಯಾರಿಗೆ? ಭವಿಷ್ಯ ನುಡಿದ ಗೂಗಲ್​

IND vs PAK  ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್

ಪಾಕಿಸ್ತಾನ ತಂಡ: ಬಾಬರ್ ಅಜಮ್ (C), ಮೊಹಮ್ಮದ್ ರಿಜ್ವಾನ್ (WK), ಫಖರ್ ಜಮಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್ (VC), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ.
Published by:shrikrishna bhat
First published: