Virat Kohli: ಪಾಕ್​ ಆಟಗಾರನ ಆಸೆ ಈಡೇರಿಸಿದ ಕೊಹ್ಲಿ, ವಿಶೇಷ ಉಡುಗೊರೆ ನೀಡಿದ ವಿಡಿಯೋ ವೈರಲ್

Virat Kohli: ವಿರಾಟ್ ಕೊಹ್ಲಿ ಅಭಿಮಾನಿಗಳು ಪ್ರಪಂಚದಾದ್ಯಂತ ಇದ್ದಾರೆ. ಅದಕ್ಕಾಗಿಯೇ ಭಾರತ ವಿರುದ್ಧದ ಪಂದ್ಯದ ನಂತರ, ಪಾಕಿಸ್ತಾನದ ಆಟಗಾರರೊಬ್ಬರು ಕೊಹ್ಲಿಯನ್ನು ಭೇಟಿ ಮಾಡಿ ವಿಶೇಷ ಉಡುಗೊರೆಯನ್ನು ಪಡೆದಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಭಾರತ ಮತ್ತು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಗಳು ಮುಖಾಮುಖಿಯಾದಾಗಲೆಲ್ಲಾ ಪಂದ್ಯವು ವಿಶೇಷವಾಗಿರುತ್ತದೆ. ಎರಡೂ ತಂಡಗಳ ಆಟಗಾರರು ಸೋಲು-ಗೆಲುವಿಗಾಗಿ ಭರ್ಜರಿ ಪೈಪೋಟಿ ನಡೆಸುತ್ತದೆ. ಆದರೆ ಮೊದಲಿನ ಹಾಗೆ ಭಾರತ-ಪಾಕ್​ (IND vs PAK) ಪಂದ್ಯದ ನಡುವೆ ಜಗಳಗಳು ನಡೆಯುವ ಬದಲು ಉತ್ತಮ ಸ್ನೇಹಪೂರ್ವಕ ಮಾತುಗಳು ನಡೆಯುವುದನ್ನು ಕಳೆದ ಕೆಲ ಪಂದ್ಯಗಳಿಂದ ನೋಡುತ್ತಿದ್ದೇವೆ. ಅದರ ಭಾಗವಾಗಿ ಏಷ್ಯಾ ಕಪ್-2022 (Asia Cup 2022) ಪ್ರಾರಂಭವಾಗುವ ಮೊದಲೇ, ಭಾರತ ಮತ್ತು ಪಾಕಿಸ್ತಾನದ ಆಟಗಾರರ ಭೇಟಿಯ ಚಿತ್ರಗಳು ಮತ್ತು ವೀಡಿಯೊಗಳನ್ನು ವೈರಲ್ (Viral) ಆಗಿದ್ದವು. ಇದರಲ್ಲಿ 2 ದೇಶಗಳ ಆಟಗಾರರು ಪರಸ್ಪರ ಆತ್ಮೀಯವಾಗಿ ಭೇಟಿಯಾಗಿದ್ದರು. ಭಾರತ-ಪಾಕಿಸ್ತಾನ ಪಂದ್ಯದ ನಂತರ ಒಂದು ವಿಶೇಷ ವಿಡಿಯೋ ವೈರಲ್ ಆಗುತ್ತಿದ್ದು, ಅದರಲ್ಲಿ ಪಾಕ್ ಆಟಗಾರನ ಆಸೆಯನ್ನು ವಿರಾಟ್ ಕೊಹ್ಲಿ (Virat Kohli) ಈಡೇರಿಸಿದ್ದಾರೆ. ಬಿಸಿಸಿಐ (BCCI) ತನ್ನ ವಿಡಿಯೋವನ್ನು ಶೇರ್ ಮಾಡಿದೆ.

ಪಾಕ್ ಆಟಗಾರನ ಆಸೆ ಈಡೇರಿಸಿದ ಕೊಹ್ಲಿ:

ಏಷ್ಯಾಕಪ್ 2022ರ ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಭಾರತ ತಂಡವು 5 ವಿಕೆಟ್​ಗಳ ಗೆಲುವನ್ನು ಸಾಧಿಸಿದೆ. ಹಾರ್ದಿಕ್ ಪಾಂಡ್ಯ ಸಿಕ್ಸರ್ ಬಾರಿಸಿ ಭಾರತಕ್ಕೆ ಜಯ ತಂದುಕೊಟ್ಟಿದ್ದರು. ಆದರೆ, ಪಂದ್ಯ ಮುಗಿದ ತಕ್ಷಣ, ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರೌಫ್ ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರೌಫ್ ಕೊಹ್ಲಿ ಜೊತೆ  ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್ ಖಾತೆಯಿಂದ ಹಂಚಿಕೊಂಡಿದೆ.





ಇದರೊಂದಿಗೆ, ಬಿಸಿಸಿಐ, 'ಪಂದ್ಯ ಮುಗಿದಿರಬಹುದು, ಆದರೆ, ಇಂತಹ ಕ್ಷಣಗಳು ಯಾವಾಗಲೂ ಇರುತ್ತದೆ‘ ಎಂದು ಬರೆದುಕೊಂಡಿದೆ. ವಿರಾಟ್ ಕೊಹ್ಲಿ ಪಾಕಿಸ್ತಾನದ ಬೌಲರ್ ಹ್ಯಾರಿಸ್ ರೌಫ್ ಅವರಿಗೆ ತಮ್ಮ ಸಹಿ ಮಾಡಿದ ಜೆರ್ಸಿಯನ್ನು ನೀಡಿದರು. ಇನ್ನು, ಪಾಕಿಸ್ತಾನದಲ್ಲೂ ವಿರಾಟ್ ಕೊಹ್ಲಿ ಅಭಿಮಾನಿಗಳ ಸಂಖ್ಯೆ ಕಡಿಮೆಯೇನಿಲ್ಲ. ಅದರಲ್ಲೂ ಪಾಕಿಸ್ತಾನಿ ಆಟಗಾರರ ಕುಟುಂಬಗಳಿಗೂ ಕೊಹ್ಲಿ ಎಂದರೆ ತುಂಬಾ ಇಷ್ಟ.

ಇದನ್ನೂ ಓದಿ: Asia Cup 2022: ಪಾಕ್​ ವಿರುದ್ಧ ಭಾರತ ಗೆಲ್ಲಲು ಈ ಇಬ್ಬರು ಆಟಗಾರರು ಪ್ರಮುಖ ಕಾರಣವಂತೆ, ಯಾರವರು?

ಬಾಬರ್ ಮತ್ತು ಶಾಹೀನ್ ಅವರನ್ನು ಭೇಟಿ ಮಾಡಿದ್ದ ಕೊಹ್ಲಿ:

ಇನ್ನು, ಶಾಹೀನ್ ಅಫ್ರಿದಿ ಗಾಯದ ಸಮಸ್ಯೆಯಿಂದ ಈ ಬಾರಿಯ ಏಷ್ಯಾಕಪ್‌ನಲ್ಲಿ ಆಡುತ್ತಿಲ್ಲ. ಆದರೆ, ಅವರು ತಂಡದೊಂದಿಗೆ ಬಂದಿದ್ದಾರೆ. ಪಂದ್ಯದ ಮೊದಲು ಅಭ್ಯಾಸದ ಸಮಯದಲ್ಲಿ, ಭಾರತ ತಂಡವು ಮೈದಾನಕ್ಕೆ ಹೋಗುತ್ತಿದ್ದಾಗ, ಶಾಹೀನ್​ ಅವರು ಕೊಹ್ಲಿ ಅವರನ್ನು ಭೇಟಿ ಮಾಡಿದ್ದಾರೆ. ಜೊತೆಗೆ ಬಾಬರ್ ಅಜಂ ಜೊತೆ ಕೊಹ್ಲಿ ಸಂಭಾಷಣೆಯ ವಿಡಿಯೋ ಕೂಡ ವೈರಲ್ ಆಗಿತ್ತು. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಪಾಕ್ ನಾಯಕನನ್ನು ಭೇಟಿ ಮಾಡಿದ್ದರು.

ಇದನ್ನೂ ಓದಿ: India vs Pakistan Asia cup 2022: ಪಾಕ್‌ ವಿರುದ್ಧ ಭಾರತಕ್ಕೆ ರೋಚಕ ಜಯ, T-20 ವಿಶ್ವಕಪ್ ಸೋಲಿನ ಸೇಡು ತೀರಿಸಿಕೊಂಡ ಟೀಂ ಇಂಡಿಯಾ

ನಾಳೆ ಹಾಂಕ್​ಕಾಂಗ್​ ಜೊತೆ ಸೆಣಸಲಿದೆ ಭಾರತ:

ಏಷ್ಯಾ ಕಪ್​ 2022ರಲ್ಲಿ ನಾಳೆ ಭಾರತ ಮತ್ತು ಹಾಂಕ್​ಕಾಂಗ್​ ತಂಡಗಳು ಮುಖಾಮುಖಿಯಾಗಲಿದೆ. ಈಗಾಗಳೇ ಪಾಕ್​ ವಿರುದ್ದ ಗೆದ್ದಿರುವ ಭಾರತ ತಂಡ ನಾಳೆಯ ಪಮದ್ಯ ಗೆದ್ದಲ್ಲಿ ಸೂಪರ್ 4 ಹಂತಕ್ಕೆ ತಲುಪಲಿದೆ.
Published by:shrikrishna bhat
First published: