PAK vs SL Asia Cup 2022: ಹಸರಂಗ ದಾಳಿಗೆ ತತ್ತರಿಸಿದ ಪಾಕ್​, 6ನೇ ಬಾರಿ ಏಷ್ಯಾ ಕಪ್‌ ಗೆದ್ದ ಶ್ರೀಲಂಕಾ!

PAK vs SL Asia Cup 2022: ಪಾಕಿಸ್ತಾನ ತಂಡವು ನಿಗದಿತ 20 ಓವರ್​ಗಳಲ್ಲಿ 10 ವಿಕೆಟ್​ ಕಳೆದುಕೊಂಡು 147 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಶ್ರೀಲಂಕಾ ತಂಡವು ಏಷ್ಯಾ ಕಪ್​ 2022ರ ಟ್ರೋಪಿಯನ್ನು ಮುಡಿಸಗೇರಿಸಿಕೊಂಡಿತು. ಜೊತೆಗೆ ಇದು ಲಂಕಾ ಪಾಲಿಗೆ 6ನೇ ಬಾರಿ ಏಷ್ಯಾ ಕಪ್​ ಪ್ರಶಸ್ತಿಯಾಗಿದೆ.

ಏಷ್ಯಾ ಕಪ್​ ಗೆದ್ದ ಶ್ರೀಲಂಕಾ

ಏಷ್ಯಾ ಕಪ್​ ಗೆದ್ದ ಶ್ರೀಲಂಕಾ

  • Share this:
ಏಷ್ಯಾ ಕಪ್​ 2022ರ (Asia Cup 2022) 15ನೇ ಆವೃತ್ತಿಯ ಫೈನಲ್​ ಪಂದ್ಯ ಇಂದು ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ (PAK vs SL) ತಂಡಗಳು ಸೆಣಸಾಡಿದವು. ಟಾಸ್​ ಗೆದ್ದ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 170 ರನ್​ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು ನಿಗದಿತ 20 ಓವರ್​ಗಳಲ್ಲಿ 10 ವಿಕೆಟ್​ ಕಳೆದುಕೊಂಡು 147 ರನ್​ಗಳಿಂದ ಸೋಲನ್ನಪ್ಪಿತು. ಈ ಮೂಲಕ ಶ್ರೀಲಂಕಾ (Sri Lanka) ತಂಡವು ಏಷ್ಯಾ ಕಪ್​ 2022ರ ಟ್ರೋಪಿಯನ್ನು ಮುಡಿಸಗೇರಿಸಿಕೊಂಡಿತು. ಜೊತೆಗೆ ಇದು ಲಂಕಾ ಪಾಲಿಗೆ 6ನೇ ಬಾರಿ ಏಷ್ಯಾ ಕಪ್​ ಪ್ರಶಸ್ತಿಯಾಗಿದೆ.

ಅದ್ಭುತ ಬ್ಯಾಟಿಂಗ್ ಮಾಡಿದ ಭನುಕಾ ರಾಜಪಕ್ಷ:

ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ನಿಗದಿತ 20 ಓವರ್​ ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 170 ರನ್​ ಗಳಿಸಿತು. ಲಂಕಾ ಪರ ಉತ್ತಮ ಬ್ಯಾಟಿಂಗ್​ ಮಾಡಿದ ಭನುಕಾ ರಾಜಪಕ್ಷ 45 ಎಸೆತದಲ್ಲಿ 6 ಪೋರ್​ ಮತ್ತು 3 ಸಿಕ್ಸ್ ಗಳ ನೆರವಿನಿಂದ ಬರೋಬ್ಬರಿ 71 ರನ್ ಗಳಿಸಿ ಮಿಂಚಿದರು. ಉಳಿದಂತೆ ಪಥುಮ್‌ ನಿಸಾಂಕ 8 ರನ್, ಕುಸಲ್ ಮೆಂಡಿಸ್ ಶೂನ್ಯ, ಧನಂಜಯ್​ ದಿ ಸೆಲ್ವಾ 28 ರನ್, ದನುಷ್ಕ ಗುಣತಿಲಕ 1 ರನ್, ದಸುನ್‌ ಶನಕ 2 ರನ್ ಮತ್ತು ವನಿಂದು ಹಸರಂಗ ಕೊನೆಯಲ್ಲಿ 5 ಪೋರ್​ ಮತ್ತು 1 ಸಿಕ್ಸ್ ಸಿಡಿಸಿ 36 ರನ್ ಗಳಿಸಿದರು.





ಹ್ಯಾರಿಸ್ ರೌಫ್ ಏಕಾಂಗಿ ಹೋರಾಟ:

ಟಾಸ್​ ಗೆದ್ದು ಮೊದಲು ಬೌಲಿಂಗ್ ಮಾಡಿದ ಪಾಕಿಸ್ತಾನ ತಂಡದ ಬೌಲರ್​ ಗಳು ಮೊದ ಮೊದಲು ಉತ್ತಮ ದಾಳಿ ನಡೆಸಿದರೂ ಅಂತಿಮವಾಗಿ ದಾರಾಳವಾಗಿ ರನ್ ಬಿಟ್ಟುಕೊಟ್ಟರು. ಪಾಕ್​ ಪರ ಹ್ಯಾರಿಸ್ ರೌಫ್ 4 ಓವರ್ ಮಾಡಿ 29 ರನ್​ ಗೆ 3 ವಿಕೆಟ್​ ಪಡೆದರು. ಉಳಿದಂತೆ ನಸೀಮ್​ ಶಾ, ಶಾಭಾಜ್ ಖಾನ್ ಮತ್ತು ಇಫ್ತಿಕಾರ್ ಅಹ್ಮದ್ ತಲಾ 1 ವಿಕೆಟ್​ ಪಡೆಯಲಷ್ಟೇ ಶಕ್ತರಾದರು.

ಇದನ್ನೂ ಓದಿ: Veda Krishnamurthy: ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ವೇದಾ ಕೃಷ್ಣಮೂರ್ತಿ, ಲೇಡಿ ಕ್ರಿಕೆಟರ್‌ಗೆ ಬೋಲ್ಡ್ ಆದ ಕರುನಾಡ ಆಟಗಾರ!

ಫೈನಲ್​ ಪಂದ್ಯದಲ್ಲಿಯೂ ಕೈಕೊಟ್ಟ ನಾಯಕ ಬಾಬರ್:

ಹೌದ, ಲಂಕಾ ನೀಡಿದ 170 ರನ್​ಗಳ ಟಾರ್ಗೆಟ್​ ಬೆನ್ನಟ್ಟಿದ ಪಾಕ್​ ತಂಡಕ್ಕೆ ಎಂದಿನಂತೆ ಆರಂಭಿಕ ಆಘಾತ ಉಂಟಾಯಿತು. ನಾಯಕ ಬಾಬರ್ ಅಜಂ ಕೇವಲ 5 ರನ್​ ಗಳಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಆದರೆ ಮೊಹಮ್ಮದ್ ರಿಜ್ವಾನ್ 55 ರನ್​ ಗಳಿಸಿ ಒಂದು ಸಮಯದ ವರೆಗೆ ತಂಡವು ಗೆಲುವಿನತ್ತ ಸೇರಿಸಲು ಏಕಾಂಗಿಯಾಗಿ ಹೋರಾಡಿದರು. ಆದರೆ ಅವರ ವಿಕೆಟ್​ ಪತನದ ನಂತರ ಬಾಲಂಗೋಚಿಗಳಂತೆ ಒಬ್ಬರ ಹಿಂದೆ ಒಬ್ಬರಂತೆ ಪೆವೆಲಿಯನ್ ಪರೇಡ್​ ನಡೆಸಿದರು.

ಪಾಕ್​ ಪರ ಉಳಿದಂತೆ ಫಖರ್ ಜಮಾನ್ ಶೂನ್ಯ, ಇಫ್ತಿಕಾರ್ ಅಹ್ಮದ್ 32 ರನ್, ಮೊಹಮ್ಮದ್ ನವಾಜ್ 6 ರನ್, ಕುಶ್ದಿಲ್ ಶಾ 2 ರನ್, ಆಸಿಫ್ ಅಲಿ 0 ರನ್, ಶದಾಬ್ ಖಾನ್ 8 ರನ್, ಹ್ಯಾರಿಸ್ ರೌಫ್ 13 ರನ್ ಮತ್ತು ನಸೀಮ್ ಶಾ 4 ರನ್, ಮೊಹಮ್ಮದ್ ಹಸ್ನೈನ್ 8 ರನ್​ ಗಳಿಸಿದರು.

ಇದನ್ನೂ ಓದಿ: Team India: ಬುಮ್ರಾ-ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆ, ಒಬ್ಬರು ಇನ್​ ಒಬ್ಬರು ಔಟ್​!

ಪಂದ್ಯದ ಗತಿಯನ್ನೇ ಬದಲಿಸಿದ ಹಸರಂಗ:

ಇನ್ನು, ಪಾಕ್​ ತಂಡದ ಬ್ಯಾಟ್ಸ್​ಮನ್​ಗಳನ್ನು ಇನ್ನಿಲ್ಲದಂತರೆ ಕಾಡಿದ ಲಂಕಾ ಬೌಲರ್​ಗಳು ಅಂತಿಮವಾಗಿ ತಂಡಕ್ಕೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು. ಅದರಂತೆ ಒಂದೇ ಓವರ್​ನಲ್ಲಿ 3 ವಿಕೆಟ್​ ಪಡೆಯುವ ಮೂಲಕ ಹಸರಂಗ ಪಂದ್ಯದ ಗತಿಯನ್ನೇ ಬದಲಿಸಿದರು. ಹಸರಂಗ 3 ವಿಕೆಟ್ ಪಡೆದು ಮಿಂಚಿದರೆ, ಯುವ ಬೌಲರ್ ಪ್ರಮೋದ್​ 4 ವಿಕೆಟ್​ ಪಡೆದು ಅಬ್ಬರಿಸಿದರು. ಉಳಿದಂತೆ ಕರುಣರತ್ನೆ 2 ಮತ್ತು ಮಹೇಶ್​ 1 ವಿಕೆಟ್​ ಪಡೆದು ಗೆಲುವಿನಲ್ಲಿ ಪಾತ್ರರಾದರು.
Published by:shrikrishna bhat
First published: