Asia Cup 2022: ಪಾಕಿಸ್ತಾನ ತಂಡಕ್ಕೆ ಭರ್ಜರಿ ಜಯ, ಮತ್ತೆ ಭಾರತ-ಪಾಕ್ ಕದನಕ್ಕೆ ಮುಹೂರ್ತ​ ಫಿಕ್ಸ್

IND vs PAK: ಇಂದಿನ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಪಾಕ್​ ತಂಡ ಸೂಪರ್ 4 ಹಂತಕ್ಕೆ ತಲುಪಿದೆ. ಇದರಿಂದಾಗಿ ಇಲ್ಲಿ ಮತ್ತೊಮ್ಮೆ ಪಾಕ್​ ತಂಡವು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ.

IND vs PAK

IND vs PAK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಇಂದು ಟೂರ್ನಿಯ ಲೀಗ್​ ಹಂತದ ಕೊನೆಯ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಹಾಂಗ್​ ಕಾಂಗ್​ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಮೊದಲು ಟಾಸ್​ ಗೆದ್ದ ಹಾಂಗ್​ ಕಾಂಗ್​ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಹೀಗಾಗಿ ಟಾಸ್​ ಸೋತ ಪಾಕ್ ಮೊದಲು ಬ್ಯಾಟಿಂಗ್​ ಮಾಡಿ ನಿಗದಿತ 20 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 193 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಮೊತ್ತವನ್ನು ಬೆನ್ನಟ್ಟಿದ ಹಾಂಗ್​ ಕಾಂಗ್​  10.4 ಓವರ್​ಗಳಿಗೆ 10 ವಿಕೆಟ್​ ಗಳನ್ನು ಕಳೆದುಕೊಂಡು ಕೇವಲ 38 ರನ್ ಗಳಿಸುವ ಮೂಲಕ 155 ರನ್​ಗಳಿಂದ ಸೋಲನ್ನಪ್ಪಿತು ಈ ಮೂಲಕ ಪಾಕಿಸ್ತಾನವು 4ನೇ ತಂಡವಾಗಿ ಸೂಪರ್ 4 (Super 4) ಹಂತಕ್ಕೆ ತಲುಪಿದೆ. ಇದರಿಂದಾಗಿ ಏಷ್ಯಾ ಕಪ್​ನಲ್ಲಿ ಮತ್ತೊಮ್ಮೆ ಭಾರತ -ಪಾಕ್ (IND vs PAK)​ ಹಣಾಹಣಿ ನಡೆಯಲಿದೆ.

ನಾಳೆಯಿಂದ ಸೂಪರ್​ 4 ಹಂತ ಆರಂಭ:

ಏಷ್ಯಾ ಕಪ್​ 2022ರ ಲೀಗ್​ ಹಂತ ಮುಗಿದಿದ್ದು, ನಾಳೆಯಿಂದ ಸೂಪರ್​ 4 ಹಂತ ಆರಂಭವಾಗಲಿದೆ. ಸೂಪರ್ 4ರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ಹೀಗಾಗಿ ಈ ಬಾರಿ ಮತ್ತೊಮ್ಮೆ ಏಷ್ಯಾ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ.

ಭಾರತ-ಪಾಕ್​ ಕದನಕ್ಕೆ ಡೇಟ್​ ಫಿಕ್ಸ್:

ಹೌದು, ಇಂದಿನ ಪಂದ್ಯವನ್ನು ಭರ್ಜರಿಯಾಗಿ ಗೆಲ್ಲುವ ಮೂಲಕ ಪಾಕ್​ ತಂಡ ಸೂಪರ್ 4 ಹಂತಕ್ಕೆ ತಲುಪಿದೆ. ಇದರಿಂದಾಗಿ ಇಲ್ಲಿ ಮತ್ತೊಮ್ಮೆ ಪಾಕ್​ ತಂಡವು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ. ಇದೇ ರವಿವಾರದಂದು (ಸೆ.04) ಇಂಡೋ-ಪಾಕ್​ ಕದನ ನಡೆಯಲಿದೆ. ಕ್ರಿಕೆಟ್​ ಅಭಿಮಾನಿಗಳಿಗೆ ಇದು ಭರ್ಜರಿ ಹಬ್ಬವಾಗಿರಲಿದೆ. ಒಂದು ವಾರದಲ್ಲಿ 2 ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ನೋಡಬಹುದಾಗಿದ್ದು, ಕಳೆದ ಪಂದ್ಯದ ಸೇಡನ್ನು ತೀರಿಸಿಕೊಳ್ಳಲು ಪಾಕ್ ಸಿದ್ಧವಾಗಿದ್ದರೆ, ಇತ್ತ ಟೀಂ ಇಂಡಿಯಾ ಇದೇ ಲಯವನ್ನು ಮುಂದುವರೆಸಿಕೊಂಡು ಹೋಗುವ ಉತ್ಸಾಹದಲ್ಲಿದೆ.

ಇದನ್ನೂ ಓದಿ: Asia Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಷ್ಯಾ ಕಪ್​ನಿಂದ ಜಡೇಜಾ ಔಟ್​!

ಏಷ್ಯಾ ಕಪ್​ 2022 ಸೂಪರ್ 4 ವೇಳಾಪಟ್ಟಿ:

ಸೆಪ್ಟೆಂಬರ್ 3 - ಅಫ್ಘಾನಿಸ್ತಾನ್ vs ಶ್ರೀಲಂಕಾ- ಶಾರ್ಜಾ
ಸೆಪ್ಟೆಂಬರ್ 4 – ಭಾರತ vs ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 6 – ಭಾರತ vs ಅಫ್ಘಾನಿಸ್ತಾನ್ – ದುಬೈ
ಸೆಪ್ಟೆಂಬರ್ 7 – ಪಾಕಿಸ್ತಾನ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 8 – ಭಾರತ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 9 – ಶ್ರೀಲಂಕಾ vs- ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ (ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ)

ಏಷ್ಯಾ ಕಪ್​ನಿಂದ ಜಡೇಜಾ ಹೊರಕ್ಕೆ:

ಹೌದು, ಭಾರತ ತಂಡಕ್ಕೆ ಕಳೆದ ಕೆಲ ದಿನಗಳಿಂದ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಸಾಲು ಸಾಲು ಸ್ಟಾರ್​ ಆಟಗಾರರು ಗಾಯದ ಸಮಸ್ಯೆಯಿಂದ ಮಹತ್ವದ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಈಗಾಗಲೇ ಬುಮ್ರಾ ಏಷ್ಯಾ ಕಪ್​ನಿಂದ ಹೊರಗುಳಿದಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್​ ಆಲ್​ ರೌಂಡರ್​ ಆದ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಏಷ್ಯಾ ಕಪ್​ 2022ರಿಂದ ಔಟ್​ ಆಗಿದ್ದಾರೆ. ಈ ಕುರಿತು ಸ್ವತಃ ಬಿಸಿಸಿಐ ಟ್ವೀಟ್​ ಮಾಡಿದೆ.

ಇದನ್ನೂ ಓದಿ: T20 World Cup: ಟಿ20 ವಿಶ್ವಕಪ್​ಗೆ ಇಂಗ್ಲೆಂಡ್​ ತಂಡ ಪ್ರಕಟ, ಆದ್ರೆ ಸ್ಟಾರ್​ ಬೌಲರ್​ಗಿಲ್ಲ ಸ್ಥಾನ!

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ಅಕ್ಷರ್​ ಪಟೇಲ್.
Published by:shrikrishna bhat
First published: