Asia Cup 2022 SL vs AFG: ಏಷ್ಯಾ ಕಪ್​ 2022ಗೆ ಇಂದು ಚಾಲನೆ, ಶ್ರೀಲಂಕಾ-ಅಫ್ಘಾನಿಸ್ತಾನ ಮುಖಾಮುಖಿ

Asia Cup 2022 SL vs AFG: ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಇಂದು ಅದ್ಧೂರಿ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (SL vs AFG) ತಂಡಗಳು ಸೆಣಸಾಡಲಿವೆ. 

SL vs AFG

SL vs AFG

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಯಲಿದೆ. ಕೊರೋನಾ ನಂತರ 2 ವರ್ಷಗಳ ಬಳಿಕ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ. ಇಂದು ಅದ್ಧೂರಿ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (SL vs AFG) ತಂಡಗಳು ಸೆಣಸಾಡಲಿವೆ.  ಶ್ರೀಲಂಕಾವನ್ನು ತಂಡಕ್ಕೆ ದಸುನ್‌ ಶನಕ (Dasun Shanaka) ನಾಯಕರಾದರೆ, ಮೊಹಮ್ಮದ್‌ ನಬಿ ಅಫ್ಘಾನ್ ತಂಡದ ನಾಯಕನಾಗಿದ್ದಾರೆ. ಉಭಯ ತಂಡಗಳು ಇಂದಿನ ಪಂದ್ಯದ ಮೂಲಕ ಏಷ್ಯಾ ಕಪ್​ ನಲ್ಲಿ ಗೆಲುವಿನ ಖಾತೆ ತೆರೆಯಲು ಹವಣಿಸುತ್ತಿದ್ದಾರೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ ಎಂದು ನೋಡೋಣ ಬನ್ನಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಡಲಿವೆ. ಈ ಪಂದ್ಯವು  ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ವರದಿ:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Pro Kabaddi League: ಕಬಡ್ಡಿ ಪ್ರಿಯರಿಗೆ ಗುಡ್‌ ನ್ಯೂಸ್‌, 9ನೇ ಸೀಸನ್​ ಪ್ರೊ ಕಬಡ್ಡಿ ಲೀಗ್‌ ವೇಳಾಪಟ್ಟಿ ಪ್ರಕಟ

SL vs AGF ಸಂಭಾವ್ಯ ಪ್ಲೇಯಿಂಗ್ 11:

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪಾತುಮ್ ನಿಸ್ಸಾಂಕ, ಚರಿತ್ ಅಸಲಂಕಾ, ಭಾನುಕ ರಾಜಪಕ್ಸೆ, ಕುಸಾಲ್ ಮೆಂಡಿಸ್ (ವಿಕೆಟ್ ಕೀಪರ್), ದಸುನ್ ಶನಕ (ನಾಯಕ), ವನಿಂದು ಹಸರಂಗ, ಚಮಿಕಾ ಕರುಣಾರತ್ನೆ, ಮಹೇಶ್ ತೀಕ್ಷಣ, ಅಸಿತ ಫೆರ್ನಾಂಡೊ, ದಿಲ್ಶನ್ ಮಧುಶಂಕ.

ಅಫ್ಘಾನಿಸ್ತಾನ ತಂಡ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ಉಸ್ಮಾನ್ ಘನಿ, ನಜಿಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್ , ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್.

ಇದನ್ನೂ ಓದಿ: Sara Tendulkar: ಸಾರಾ-ಶುಭಮನ್​ ಗಿಲ್​ ಬ್ರೇಕಪ್​? ವೈರಲ್ ಆಯ್ತು ಇನ್ಸ್ಟಾಗ್ರಾಂ ಫೋಸ್ಟ್

ಏಷ್ಯಾ ಕಪ್​ 2022 ಸಂಪೂರ್ಣ ವೇಳಾಪಟ್ಟಿ:

ಶ್ರೀಲಂಕಾ vs ಅಫ್ಘಾನಿಸ್ತಾನ - ಆಗಸ್ಟ್ 27, ದುಬೈ
ಭಾರತ vs ಪಾಕಿಸ್ತಾನ - ಆಗಸ್ಟ್ 28, ದುಬೈ
ಬಾಂಗ್ಲಾದೇಶ vs ಅಫ್ಘಾನಿಸ್ತಾನ - ಆಗಸ್ಟ್ 30, ಶಾರ್ಜಾ
ಭಾರತ vs ಹಾಂಗ್​ ಕಾಂಗ್ - ಆಗಸ್ಟ್ 31, ದುಬೈ
ಶ್ರೀಲಂಕಾ vs ಬಾಂಗ್ಲಾದೇಶ - ಸೆಪ್ಟೆಂಬರ್ 1, ದುಬೈ
ಪಾಕಿಸ್ತಾನ vs ಹಾಂಗ್​ ಕಾಂಗ್ - ಸೆಪ್ಟೆಂಬರ್ 2, ಶಾರ್ಜಾ

ಗ್ರೂಪ್​ ಹಂತದಲ್ಲಿ 4 ತಂಡಗಳು ಸೂಪರ್​-4ಗೆ ಅರ್ಹತೆ ಪಡೆಯಲಿದೆ.

ಸೂಪರ್- 4 ವೇಳಾಪಟ್ಟಿ:

B1 vs B2 - ಸೆಪ್ಟೆಂಬರ್ 3, ಶಾರ್ಜಾ
A1 vs A2 - ಸೆಪ್ಟೆಂಬರ್ 4, ದುಬೈ
A1 vs B1 - ಸೆಪ್ಟೆಂಬರ್ 6, ದುಬೈ
A2 vs B2 - ಸೆಪ್ಟೆಂಬರ್ 7, ದುಬೈ
A1 vs B2 - ಸೆಪ್ಟೆಂಬರ್ 8, ದುಬೈ
B1 vs A2 - ಸೆಪ್ಟೆಂಬರ್ 9, ದುಬೈ
ಫೈನಲ್ ಪಂದ್ಯ - ಸೆಪ್ಟೆಂಬರ್ 11, ದುಬೈ
Published by:shrikrishna bhat
First published: