IND vs PAK: ಭಾರತ-ಪಾಕ್​ ಪಂದ್ಯದ ಕಿರಿಕ್​ಗಳಿವು, ಎಂದಿಗೂ ಮರೆಯಲಾಗದ ರೋಚಕ ಕ್ಷಣಗಳು

ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆದಾಗ ಮೈದಾನದಲ್ಲಿ ಜಗಳಗಳು, ಮಾತಿನ ಚಕಮಕಿಗಳು ಸಾಮಾನ್ಯವಾಗಿರುತ್ತದೆ. ಅದೇ ರೀತಿ ಭಾರತ ಮತ್ತು ಪಾಕ್ ಎದುರಾದಾಗ ನಡೆದ ಟಾಪ್​ ಕಿರಿಕ್​ಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

IND vs PAK

IND vs PAK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾ ಬದಲಿಗೆ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರು ವೇಳಾಪಟ್ಟಿಯ ಪ್ರಕಾರ ಭಾರತ ಆಗಸ್ಟ್ 28ರಂದು ಮೊದಲ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡವನ್ನು ಎದುರಿಸಲಿದೆ. ಆದರೆ ಪ್ರತಿ ಬಾರಿ ಈ ಎರಡು ದೇಶಗಳು ಕ್ರಿಕೆಟ್​ ನಲ್ಲಿ ಮುಖಾಮುಖಿ ಆದಾಗ ಮೈದಾನದಲ್ಲಿಯೇ ಜಗಳಗಳು, ಮಾತಿನ  ಚಕಮಕಿಗಳು ಸಾಮಾನ್ಯವಾಗಿರುತ್ತದೆ. ಅದೇ ರೀತಿಯಲ್ಲಿ ಭಾರತ ಮತ್ತು ಪಾಕ್ ಎದುರಾದಾಗ ನಡೆದ ಟಾಪ್​ ಕಿರಿಕ್​ಗಳು ಯಾವವು ಎಂಬುದನ್ನು ನೋಡೋಣ ಬನ್ನಿ.

ವೆಂಕಟೇಶ್ ಪ್ರಸಾದ್ vs  ಅಮೀರ್ ಸೊಹೈಲ್:

1996 ಐಸಿಸಿ ವಿಶ್ವಕಪ್ ಬೆಂಗಳೂರಿನಲ್ಲಿ ನಡೆದಿತ್ತು. ಈ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಮೊದಲು ಬ್ಯಾಟ್ ಮಾಡಿತು. ಟೀಂ ಇಂಡಿಯಾ ಬೌಲರ್ ವೆಂಕಟೇಶ್ ಪ್ರಸಾದ್ ಎಸೆದ 15ನೇ ಓವರ್ ನಲ್ಲಿ ಪಾಕಿಸ್ತಾನದ ಬ್ಯಾಟ್ಸ್ ಮನ್ ಅಮೀರ್ ಸೊಹೈಲ್ ಬೌಂಡರಿ ಬಾರಿಸಿದರು. ಆಗ ವೆಂಕಟೇಶ್ ಪ್ರಸಾದ್ ಗೆ ಸನ್ನೆಗಳ ಮೂಲಕ ಚಮಕ್​ ನೀಡಿದರು. ಆದರೆ ಇದಕ್ಕೆ ವೆಂಕಟೇಶ್ ಪ್ರಸಾದ್ ಮಾತಿನ ಬದಲು ಕೈಯಿಂದಲೇ ಪ್ರತಿಕ್ರಿಯಿಸಿದರು. ಮುಂದಿನ ಎಸೆತದಲ್ಲಿ ಸೊಹೈಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಈ ಹೋರಾಟ ಕ್ರಿಕೆಟ್ ಇತಿಹಾಸದಲ್ಲಿ ಅವಿಸ್ಮರಣೀಯ ಎಂದರೂ ತಪ್ಪಾಗಲಾರದು.

ಗೌತಮ್ ಗಂಭೀರ್ vs ಶಾಹಿದ್ ಅಫ್ರಿದಿ:

2007 ರಲ್ಲಿ ಕಾನ್ಪುರದಲ್ಲಿ ಐದು ಪಂದ್ಯಗಳ ಸರಣಿಯ ಮೂರನೇ ODI ನಲ್ಲಿ ಗೌತಮ್ ಗಂಭೀರ್ ಮತ್ತು ಶಾಹಿದ್ ಅಫ್ರಿದಿ ಮುಖಾಮುಖಿಯಾದರು. ಬ್ಯಾಟ್ಸ್‌ಮನ್ ಗಂಭೀರ್ ಸಿಂಗಲ್ ತೆಗೆದುಕೊಳ್ಳುವಾಗ ಪಿಚ್‌ನಲ್ಲಿ ಬೌಲರ್ ಆಫ್ರಿದಿಗೆ ಡಿಕ್ಕಿ ಹೊಡೆದರು. ನಂತರ ಇಬ್ಬರೂ ತೀವ್ರ ವಾಗ್ವಾಳಿ ನಡೆಸಿದ್ದರು.

ಗಂಭೀರ್​ ಮತ್ತು ಅಫ್ರಿದಿ


 ಗೌತಮ್ ಗಂಭೀರ್ vs ಕಮ್ರಾನ್ ಅಕ್ಮಲ್:

2010ರ ಏಷ್ಯಾ ಕಪ್ ಪಂದ್ಯದಲ್ಲಿ ಪಾಕಿಸ್ಥಾನದ ವಿಕೆಟ್ ಕೀಪರ್ ಕಮ್ರಾನ್ ಅಕ್ಮಲ್ ಅವರು ಪಾನೀಯ ವಿರಾಮದ ಸಮಯದಲ್ಲಿ ಜಗಳವಾಡಿದರು. ಅಫ್ರಿದಿ ಮತ್ತು ಸಯೀದ್ ಅಜ್ಮಲ್ ಅವರ ಸ್ಪಿನ್ ಅನ್ನು ಗಂಭೀರ್ ನಿಭಾಯಿಸುತ್ತಿದ್ದಂತೆ, ಕೀಪರ್ ಜೋರಾಗಿ ಮನವಿ ಮಾಡಿದರು, ಅವರು ಈ ಹಿಂದೆಯೂ ಪದೇ ಪದೇ ಮನವಿ ಮಾಡಿದ್ದರು. ವಿರಾಮದ ವೇಳೆ ಗೌತಮ್ ಗಂಭೀರ್ ಮತ್ತು ಕಮ್ರಾನ್ ಅಕ್ಮಲ್ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಅಂಪೈರ್‌ಗಳು, ಪಾಕಿಸ್ತಾನ ತಂಡ ಮತ್ತು ಮಹೇಂದ್ರ ಸಿಂಗ್ ಧೋನಿ ಇವರಿರನ್ನೂ ಸಮಾಧಾನಪಡಿಸಿದರು.

ಗಂಭೀರ್ vs ಕಮ್ರಾನ್ ಅಕ್ಮಲ್


ಹರ್ಭಜನ್ ಸಿಂಗ್ Vs ಶೋಯೆಬ್ ಅಖ್ತರ್:

2010ರ ಏಷ್ಯಾಕಪ್‌ನಲ್ಲಿ ಅದೇ ಪಂದ್ಯದಲ್ಲಿ ಮತ್ತೊಮ್ಮೆ ಶೋಯೆಬ್ ಅಖ್ತರ್ ಅವರ ಬೌಲಿಂಗ್‌ನಲ್ಲಿ ಹರ್ಭಜನ್ ಸಿಂಗ್ ಬೃಹತ್ ಸಿಕ್ಸರ್ ಸಿಡಿಸಿದರು. ಶೋಯೆಬ್ ಬೌನ್ಸರ್ ಎಸೆಯುತ್ತಿದ್ದರೆ ಭಜ್ಜಿ ಬೌಂಡರಿ ಬಾರಿಸುತ್ತಿದ್ದರು. ಇದು ಇಬ್ಬರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು. ಇದಲ್ಲದೇ 2021 T20 ವಿಶ್ವಕಪ್ ಹರ್ಭಜನ್ ಸಿಂಗ್ ಮತ್ತು ಮೊಹಮ್ಮದ್ ಅಮೀರ್  ನಡುವೆ ಟ್ವಿಟರ್​ನಲ್ಲಿ ಮಾತಿನ ಸಮರ ನಡೆದಿತ್ತು.

ಹರ್ಭಜನ್ ಸಿಂಗ್ Vs ಶೋಯೆಬ್ ಅಖ್ತರ್


ಇದನ್ನೂ ಓದಿ: Riyan Parag: ಮಧ್ಯರಾತ್ರಿ ಆ ಮಾಡೆಲ್​ ಟ್ವೀಟ್​ಗೆ ಲೈಕ್​ ಒತ್ತಿದ ಖ್ಯಾತ ಕ್ರಿಕೆಟಿಗ! ನೈಟ್​ ಟೈಮ್​ ಅಲ್ಲಿ ಫುಲ್ ಆ್ಯಕ್ಟೀವ್​ ಈ ಆಟಗಾರ ಅಂತ ಟ್ರೋಲ್​

ಪಾಕ್​ ಎದುರು ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.
Published by:shrikrishna bhat
First published: