ಏಷ್ಯಾ ಕಪ್ 2022ರ (Asia cup 2022) 15ನೇ ಆವೃತ್ತಿಯು ಈ ಬಾರಿ ದುಬೈ ನಲ್ಲಿ (Dubai) ನಡೆಯುತ್ತಿದೆ. ಟೂರ್ನಿಯ 2ನೇ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ (India vs Pakistan) ಮ್ಯಾಚ್ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ತಂಡವು ನಿಗದಿತ 19.5 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಭಾರತ ತಂಡಕ್ಕೆ ಕೆಎಲ್ ರಾಹುಲ್ ಮೊದಲ ವಿಕೆಟ್ ಒಪ್ಪಿಸುವ ಮೂಲಕ ಆರಂಭಿಕ ಆಘಾತ ಎದುರಾಯಿತು.
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ಪತನ:
ಹೌದು, ಪಾಕ್ ನೀಡಿದ 147 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಉಂಟಾಯಿತು. ನಸೀಮ್ ಶಾ ಮೊದಲ ಓವರ್ನಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರಿಸ್ ಆಗಮಿಸಿದ ವಿರಾಟ್ ಕೊಹ್ಲಿ ಮೇಲೆ ಇಂದು ಸಾಕಷ್ಟು ನಿರೀಕ್ಷೆಗಳಿದ್ದವು. ಅನೇಕ ದಿನಗಳ ನಂತರ ಕ್ರಿಕೆಟ್ ಮೈದಾನಕ್ಕೆ ಆಗಮಿಸಿದ ಕೊಹ್ಲಿ 34 ಎಸೆತದಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್ ನೆರವಿನಿಂದ 35 ರನ್ ಗಳಸಿ ಮೊಹಮ್ಮದ್ ನವಾಜ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು, ನಾಯಕ ರೋಹಿತ್ ಶರ್ಮಾ 18 ಬೌಲ್ ನಲ್ಲಿ 1 ಸಿಕ್ಸ್ ಸಿಡಿಸಿ ಕೇವಲ 12 ರನ್ ಗಳಿಸಿ ಮೊಹಮ್ಮದ್ ನವಾಜ್ ಅವರಿಗೆ ಔಟ್ ಆದರು. ನಸೀಮ್ ಶಾ ಅವರ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ ಕ್ಲೀನ್ ಬೌಲ್ಡ್ ಆಗುವ ಮೂಲಕ ಭಾರತ ತಂಡದ 4ನೇ ವಿಕೆಟ್ ಪತನವಾಗಿದೆ. ಇದೀಗ ಕ್ರಿಸ್ಗೆ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಗಮಿಸಿದ್ದಾರೆ.
ಇದನ್ನೂ ಓದಿ: Asia Cup 2022 IND vs PAK: ಭಾರತದ ವಿರುದ್ಧ ಕಪ್ಪುಪಟ್ಟಿ ಧರಿಸಿ ಆಡಲಿದೆ ಪಾಕ್ ಟೀಂ, ಸಾಂಪ್ರದಾಯಿಕ ಎದುರಾಳಿಗಳಿಗೆ ಏನಾಯ್ತು?
ನಿಧಾನವಾಗಿ ರನ್ ಹೆಚ್ಚಿಸಿದ ಜಡ್ಡು-ಸೂರ್ಯಕುಮಾರ್:
ಮೂವರು ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳ ವಿಕೆಟ್ ಪತನದ ನಂತರ ರವೀಂದ್ರ ಜಡೇಜಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಜೊತೆಯಾಟ ಆಡಿದರು.
ಇದನ್ನೂ ಓದಿ: India vs Pakistan Asia cup 2022: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್, ಭಾರತದ ಮೊದಲ ವಿಕೆಟ್ ಪತನ
ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್:
ಹೌದು, ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮೊದಲು ಬೌಲಿಂಗ್ ಮಾಡಿದ ಟೀಂ ಇಂಡಿಯಾವು ಭರ್ಜರಿಯಾಗಿ ಬೌಲಿಂಗ್ ಮಾಡಿತು. ಭಾರತಕ್ಕೆ ಮೊದಲ ಬ್ರೇಕ್ ಥ್ರೂ ನೀಡುವ ಮೂಲಕ ಭುವನೇಶ್ವರ್ ಕುಮಾರ್ ಯಶಸ್ವಿಯಾದರು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 4 ಓವರ್ ಮಾಡಿ 25 ರನ್ ನೀಡಿ ಪಾಕ್ನ ಪ್ರಮುಖ 3 ವಿಕೆಟ್ ಪಡೆದರು. ಜೊತೆಗೆ ಭುವನೇಶ್ವರ್ ಕುಮಾರ್ 4 ಓವರ್ ಮಾಡಿ 26 ರನ್ ನೀಡಿ 4 ವಿಕೆಟ್ ಪಡೆದರು. ಉಳಿದಂತೆ ಅರ್ಷದೀಪ್ ಸಿಂಗ್ 2 ಮತ್ತು ಆವೇಶ್ ಖಾನ್ 1 ವಿಕೆಟ್ ಪಡೆದು ಮಿಂಚಿದರು.
IND vs PAK ಪ್ಲೇಯಿಂಗ್ 11:
ಭಾರತ ತಂಡದ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡದ ಪ್ಲೇಯಿಂಗ್ 11: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ರಿಜ್ವಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಕುಶ್ ದಿಲ್ ಶಾ, ಶಾದಾಬ್ ಖಾನ್, ಹರೀಶ್ ರವೂಫ್, ನಸೀಮ್ ಶಾ, ಮೊಹಮ್ಮದ್ ನವಾಜ್, ದಹಾನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ