India vs Pakistan Asia cup 2022: ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್​, ಭಾರತದ ಮೊದಲ ವಿಕೆಟ್​ ಪತನ

India vs Pakistan Asia cup 2022: ಪಾಕ್​ ತಂಡವು ನಿಗದಿತ 19.5 ಓವರ್​ ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 147 ರನ್ ಗಳಸಿತು. ಈ ಮೂಲಕ ಮಹತ್ವದ ಪಂದ್ಯದಲ್ಲಿ ಪಾಕ್​ ಬ್ಯಾಟ್ಸ್​ಮನ್​ ಗಳನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾದ ಬೌಲರ್​ ಗಳು ಯಶಸ್ವಿಯಾದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್​ 2022ರ (Asia cup 2022) 15ನೇ ಆವೃತ್ತಿಯು ಈ ಬಾರಿ ದುಬೈ ನಲ್ಲಿ (Dubai) ನಡೆಯುತ್ತಿದೆ. ಟೂರ್ನಿಯ 2ನೇ ಪಂದ್ಯವಾದ ಭಾರತ ಮತ್ತು ಪಾಕಿಸ್ತಾನ (India vs Pakistan) ಮ್ಯಾಚ್​ ದುಬೈ ಅಂತರಾಷ್ಟ್ರೀಯ ಮೈದಾನದಲ್ಲಿ ನಡೆಯುತ್ತಿದೆ. ಟಾಸ್​ ಗೆದ್ದ ಭಾರತ ತಂಡದ ನಾಯಕ ರೋಹಿತ್​ ಶರ್ಮಾ (Rohit Sharma) ಅವರು ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಆರಂಭಿಸಿದ ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ ಉಂಟಾಯಿತು. ಅಂತಿಮವಾಗಿ ಪಾಕ್​ ತಂಡವು ನಿಗದಿತ 19.5 ಓವರ್​ ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 147 ರನ್ ಗಳಸಿತು. ಈ ಮೂಲಕ ಮಹತ್ವದ ಪಂದ್ಯದಲ್ಲಿ ಪಾಕ್​ ಬ್ಯಾಟ್ಸ್​ಮನ್​ ಗಳನ್ನು ಕಟ್ಟಿಹಾಕುವಲ್ಲಿ ಟೀಂ ಇಂಡಿಯಾದ ಬೌಲರ್​ ಗಳು ಯಶಸ್ವಿಯಾದರು. ಅದರಲ್ಲಿಯೂ ಆಲ್​ ರೌಂಡರ್​ ಆದ ಹಾರ್ದಿಕ್​ ಪಾಂಡ್ಯ ಮತ್ತು ಭುವನೇಶ್ವರ್ ಕುಮಾರ್ ದಾಳಿಗೆ ಪಾಕಿಸ್ತಾನ ಉತ್ತರವಿಲ್ಲದೆ ಪೆವಿಲಿಯನ್ ಪರೇಡ್​ ನಡೆಸಿದರು.​

ಭಾರತದ ಮೊದಲ ವಿಕೆಟ್​ ಪತನ:

ಇನ್ನು, ಪಾಕ್​ ನೀಡಿದ 147 ರನ್​ಗಳ ಟಾರ್ಗೆಟ್​ ಬೆನ್ನಟ್ಟಿರುವ ಟೀಂ ಇಂಡಿಯಾಗೆ ಆರಂಭಿಕ ಆಘಾತ ಉಂಟಾಗಿದೆ. ಭಾರತದ ಪರ ಓಪನರ್ ಆಗಿ ಕಣಕ್ಕಿಳಿದ ಕೆಎಲ್ ರಾಹುಲ್​ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಮೂಡಿಸಿದರು.

ಪಾಕ್​ಗೆ ಆಸರೆಯಾದ ರಿಜ್ವಾನ್:

ಇನ್ನು, ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು ನಿಗದಿತ 19.5 ಓವರ್​ ಗಳಲ್ಲಿ 10 ವಿಕೆಟ್​ ನಷ್ಟಕ್ಕೆ 147 ರನ್ ಗಳಸಿತು. ಪಾಕ್​ ಪರ ಮೊಹಮ್ಮದ್ ರಿಜ್ವಾನ್ 4 ಫೋರ್​ ಮತ್ತು 1 ಸಿಕ್ಸ್ ನೆರವಿನಿಂದ 43 ರನ್​ ಗಳಿಸಿ ತಂಡಕ್ಕೆ ಆಸರೆಯಾದರು. ಉಳಿದಂತೆ ಯಾವೊಬ್ಬ ಆಟಗಾರರೂ ಸಹ ಅಷ್ಟಾಗಿ ಭಾರತೀಯ ಬೌಲರ್​ ಗಳ ದಾಳಿಗೆ ಉತ್ತರಿಸಲಾಗದೇ ಔಟ್​ ಆಗಿ ಹೋದರು. ನಾಯಕ ಬಾಬರ್ ಅಜಮ್ 10 ರನ್, ಫಖರ್ ಜಮಾನ್ 10 ರನ್, ಇಫ್ತಿಕರ್ ಅಹ್ಮದ್ 28 ರನ್, ಕುಶ್ ದಿಲ್ ಶಾ 2 ರನ್, ಆಸಿಫ್ ಅಲಿ 9 ರನ್, ಮೊಹಮ್ಮದ್ ನವಾಜ್ 1 ರನ್, ನಸೀಮ್ ಶಾ ಶೂನ್ಯ, ಶಾದಾಬ್ ಖಾನ್ 10 ರನ್, ಹಾರೀಸ್ ರವೂಫ್ 13  ರನ್ ಮತ್ತು ದಹಾನಿ 16 ರನ್ ಗಳಿಸಿದರು.





ಟೀಂ ಇಂಡಿಯಾ ದಾಳಿಗೆ ತತ್ತರಿಸಿದ ಪಾಕ್​:

ಹೌದು, ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಮೊದಲು ಬೌಲಿಂಗ್​ ಮಾಡಿದ ಟೀಂ ಇಂಡಿಯಾವು ಭರ್ಜರಿಯಾಗಿ ಬೌಲಿಂಗ್ ಮಾಡಿತು. ಭಾರತಕ್ಕೆ ಮೊದಲ ಬ್ರೇಕ್​ ಥ್ರೂ ನೀಡುವ ಮೂಲಕ ಭುವನೇಶ್ವರ್ ಕುಮಾರ್ ಯಶಸ್ವಿಯಾದರು. ಟೀಂ ಇಂಡಿಯಾ ಪರ ಹಾರ್ದಿಕ್ ಪಾಂಡ್ಯ 4 ಓವರ್ ಮಾಡಿ 25 ರನ್ ನೀಡಿ ಪಾಕ್​ನ ಪ್ರಮುಖ 3 ವಿಕೆಟ್​ ಪಡೆದರು. ಜೊತೆಗೆ ಭುವನೇಶ್ವರ್ ಕುಮಾರ್​ 4 ಓವರ್​ ಮಾಡಿ 26 ರನ್ ನೀಡಿ 4 ವಿಕೆಟ್​ ಪಡೆದರು. ಉಳಿದಂತೆ ಅರ್ಷದೀಪ್​ ಸಿಂಗ್ 2​​ ಮತ್ತು ಆವೇಶ್​ ಖಾನ್​ 1 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: IND vs PAK: ಟೀಂ ಇಂಡಿಯಾ ಗೆಲುವಿಗಾಗಿ ಕ್ರಿಕೆಟ್ ಭಕ್ತರ ಪೂಜೆ, ಗೆದ್ದು ಬಾ ಭಾರತ ಅಂತ ಮಂದಿರ-ಮಸೀದಿಗಳಲ್ಲಿ ಪ್ರಾರ್ಥನೆ!

IND vs PAK ಪ್ಲೇಯಿಂಗ್​ 11:

ಭಾರತ ತಂಡದ ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.

ಪಾಕಿಸ್ತಾನ ತಂಡದ ಪ್ಲೇಯಿಂಗ್​ 11: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ರಿಜ್ವಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಕುಶ್ ದಿಲ್ ಶಾ, ಶಾದಾಬ್ ಖಾನ್, ಹರೀಶ್ ರವೂಫ್, ನಸೀಮ್ ಶಾ, ಮೊಹಮ್ಮದ್ ನವಾಜ್, ದಹಾನಿ.
Published by:shrikrishna bhat
First published: