ಏಷ್ಯಾ ಕಪ್ 2022ರ (Asia cup 2022) 15ನೇ ಆವೃತ್ತಿಯ 2ನೇ ಪಂದ್ಯದಲ್ಲಿ 10 ತಿಂಗಳಗಳ ನಂತರ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆದವು. ಹೀಗಾಗಿ ಅಭಿಮಾನಿಗಳಲ್ಲಿ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಇಂದಿನ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಪಾಕ್ ತಂಡವು ನಿಗದಿತ 19.5 ಓವರ್ ಗಳಲ್ಲಿ 10 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದದ ಟೀಂ ಇಂಡಿಯಾ 19.4 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 148 ರನ್ ಗಳಿಸುವ ಮೂಲಕ ರೋಚಕ ಜಯ ದಾಖಲಿಸಿತು. ಈ ಮೂಲಕ ಟಿ20 ವಿಶ್ವಕಪ್ನಲ್ಲಾದ ಸೋಲಿಗೆ ಭಾರತ ತಂಡ ಸೇಡನ್ನು ತೀರಿಸಿಕೊಂಡಿದೆ.
ಸಿಕ್ಸ್ ಮೂಲಕ ಗೆಲುವಿನ ದಡ ಸೇರಿಸಿದ ಪಾಂಡ್ಯ:
ಪಾಕ್ ನೀಡಿದ 147 ರನ್ ಗಳ ಟಾರ್ಗೆಟ್ ಬೆನ್ನಟ್ಟಿದ ಟೀಂ ಇಂಡಿಯಾಗೆ ಆರಂಭಿಕ ಆಘಾತ ಉಂಟಾಯಿತು. ನಸೀಮ್ ಶಾ ಮೊದಲ ಓವರ್ನಲ್ಲಿ ಕೆಎಲ್ ರಾಹುಲ್ ಕ್ಲೀನ್ ಬೌಲ್ಡ್ ಆಗುವ ಮೂಲಕ ನಿರಾಸೆ ಮೂಡಿಸಿದರು. ಬಳಿಕ ಕ್ರಿಸ್ಗೆ ಆಗಮಿಸಿದ ವಿರಾಟ್ ಕೊಹ್ಲಿ 34 ಎಸೆತದಲ್ಲಿ 3 ಬೌಂಡರಿ ಮತ್ತು 1 ಸಿಕ್ಸ್ ನೆರವಿನಿಂದ 35 ರನ್ ಗಳಸಿ ಮೊಹಮ್ಮದ್ ನವಾಜ್ ಅವರಿಗೆ ವಿಕೆಟ್ ಒಪ್ಪಿಸಿದರು. ಇನ್ನು, ನಾಯಕ ರೋಹಿತ್ ಶರ್ಮಾ 18 ಬೌಲ್ ನಲ್ಲಿ 1 ಸಿಕ್ಸ್ ಸಿಡಿಸಿ ಕೇವಲ 12 ರನ್ ಗಳಿಸಿ ಮೊಹಮ್ಮದ್ ನವಾಜ್ ಅವರಿಗೆ ಔಟ್ ಆದರು. ನಸೀಮ್ ಶಾ ಅವರ ಓವರ್ ನಲ್ಲಿ ಸೂರ್ಯಕುಮಾರ್ ಯಾದವ್ 18 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು. ಉಳಿದಂತೆ ರವೀಂದ್ರ ಜಡೇಜಾ 35 ರನ್, ಹಾರ್ದಿಕ್ ಪಾಂಡ್ಯ 33 ರನ್ ಮತ್ತು ದಿನೇಶ್ ಕಾರ್ತಿಕ್ 1 ರನ್ ಗಳಿಸುವ ಮೂಲಕ ಭಾರತವನ್ನು ಗೆಲುವಿನ ದಡ ಸೇರಿಸಿದರು,
WHAT. A. WIN!#TeamIndia clinch a thriller against Pakistan. Win by 5 wickets 👏👏
Scorecard - https://t.co/o3hJ6VNfwF #INDvPAK #AsiaCup2022 pic.twitter.com/p4pLDi3y09
— BCCI (@BCCI) August 28, 2022
ಇನ್ನು, ಪಾಕಿಸ್ತಾನ ಪರ ಬೌಲರ್ ಗಳು ಸಂಘಟಿತ ಬೌಲಿಂಗ್ ದಾಳಿ ನಡೆಸಿದರು. ಪಾಕ್ ಪರ ನಸೀಮ್ ಶಾ 4 ಓವರ್ ಮಾಡಿ 27 ರನ್ ನೀಡಿ ಪ್ರಮುಖ 2 ವಿಕೆಟ್ ಪಡೆದರು. ಇವರಿಗೆ ಉತ್ತಮ ಸಾಥ್ ನೀಡಿದ ಮೊಹಮ್ಮದ್ ನವಾಜ್ 4 ಓವರ್ ಮಾಡಿ 3 ವಿಕೆಟ್ ಪಡೆದರು. ಆದರೆ ಉಳಿದ ಯಾವೊಬ್ಬ ಬೌಲರ್ ಸಹ ಭಾರತೀಯ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ. ಪರಿಣಾಮವಾಗಿ ಪಾಕ್ ಭಾರತದ ವಿರುದ್ಧ ಸೋಲನ್ನಪ್ಪಿತು.
IND vs PAK ಪ್ಲೇಯಿಂಗ್ 11:
ಭಾರತ ತಂಡದ ಪ್ಲೇಯಿಂಗ್ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.
ಪಾಕಿಸ್ತಾನ ತಂಡದ ಪ್ಲೇಯಿಂಗ್ 11: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ರಿಜ್ವಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಕುಶ್ ದಿಲ್ ಶಾ, ಶಾದಾಬ್ ಖಾನ್, ಹರೀಶ್ ರವೂಫ್, ನಸೀಮ್ ಶಾ, ಮೊಹಮ್ಮದ್ ನವಾಜ್, ದಹಾನಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ