India vs Pakistan Asia Cup 2022: ಭರ್ಜರಿ ಬ್ಯಾಟಿಂಗ್​ ಮಾಡಿದ ಕೊಹ್ಲಿ, ಪಾಕ್​ ತಂಡಕ್ಕೆ ಬೃಹತ್​ ಟಾರ್ಗೆಟ್​ ನೀಡಿದ ಟೀಂ ಇಂಡಿಯಾ

India vs Pakistan Asia Cup 2022: ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ 182 ರನ್​ಗಳ ಟಾರ್ಗೆಟ್​ ನೀಡಿದೆ. 

ವಿರಾಟ್​ ಕೊಹ್ಲಿ

ವಿರಾಟ್​ ಕೊಹ್ಲಿ

  • Share this:
ಏಷ್ಯಾ ಕಪ್​ 2022ರ (Asia Cup 2022) ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಸೆಣಸಾಡುತ್ತಿವೆ. ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನದ ನಾಯಕ ಬಾಬರ್​ ಅಜಂ(Babar Azam) ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ 182 ರನ್​ಗಳ ಟಾರ್ಗೆಟ್​ ನೀಡಿದೆ.  ಭಾರತದ ಪರ ಆರಂಭಿಕ ಆಟಗಾರರು ಉತ್ತಮವಾಗಿ ರನ್​ ಕಲೆಹಾಕಿದರು. ಜೊತೆಗೆ ವಿರಾಟ್ ಕೊಹ್ಲಿ ( Virat Kohli) ಮತ್ತೊಮ್ಮೆ ಅರ್ಧಶತಕ ಸಿಡಿಸುವ ಮೂಲಕ ಪಂದ್ಯದ ಗತಿಯನ್ನು ಬದಲಿಸಿದರು.

ಆಕರ್ಷಕ ಬ್ಯಾಟಿಂಗ್​ ಮಾಡಿದ ಕೊಹ್ಲಿ:

ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತು. ಭಾರತದ ಪರ ಆರಂಭಿಕರಾಗಿ ರೋಹಿತ್​ ಮತ್ತು ರಾಹುಲ್​ ಉತ್ತಮವಾಗಿ ಬ್ಯಾಟ್​ ಬೀಸಿದರು. ರೋಹಿತ್ ​20 ಬೌಲ್​ಗೆ 2 ಸಿಕ್ಸ್ 1 ಪೋರ್​ ನೆರವಿನಿಂದ 28 ರನ್, ಕೆಎಲ್ ರಾಹುಲ್​ 16 ಬೌಲ್​ಗೆ 2 ಸಿಕ್ಸ್ ಮತ್ತು 3 ಬೌಂಡರಿ ನೆರವಿನಿಂದ 28 ರನ್ ಗಳಿಸಿಸಿದರು. ಉಳಿದಂತೆ ಸೂರ್ಯ ಕುಮಾರ್​ ಯಾದವ್​ 13 ರನ್, ರಿಷಭ್ ಪಂತ್​ 2 ಫೊರ್​ ಸಿಡಿಸಿ 14 ರನ್, ಹಾರ್ದಿಕ್​ ಪಾಂಡ್ಯ 0 ರನ್​, ದೀಪಕ್​ ಹೂಡಾ 16 ರನ್ ಮತ್ತು ಆಕರ್ಷಕ ಅರ್ಧಶತಕ ಸಿಡಿಸಿದ ಕೊಹ್ಲಿ 60 ರನ್​ ಗಳಿಸಿ ಮಿಂಚಿದರು.

ಪಾಕಿಸ್ತಾನದ ಪರ ಸಂಘಟಿತ ಬೌಲಿಂಗ್ ದಾಳಿ:

ಪಾಕಿಸ್ತಾನದ ಪರ ಮೊಹಮ್ಮದ್ ನವಾಜ್ 4 ಓವರ್​ ಮಾಡಿ 25 ರನ್​ ನೀಡಿ 1 ವಿಕೆಟ್​ ಪಡೆದರು. ಉಳಿದಂತೆ ಶಾದಾಬ್ ಖಾನ್ 4 ಓವರ್​ಗೆ 31 ರನ್​ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ನಸೀಮ್​ ಶಾ, ಮೊಹಮ್ಮದ್ ಹಸೀನ್​ ಮತ್ತು ಹಾರೀಸ್​ ರೂಫ್​ ತಲಾ 1 ವಿಕೆಟ್​ ಪಡೆಯುವ ಮೂಲಕ ಪಡೆದು ಟೀಂ ಇಂಡಿಯಾ ರನ್​ ವೇಗಕ್ಕೆ ಕಡಿವಾಣ ಹಾಕಿದರು.

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.  ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 9 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಒಟ್ಟಾರೆಯಾಗಿ ಅಂಕಿಅಂಶಗಳ ಪ್ರಕಾರ ಭಾರತ ತಂಡ ಹೆಚ್ಚು ಬಲಿಷ್ಠವಾಗಿದೆ.

ಇದನ್ನೂ ಓದಿ: Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

IND vs PAK ತಂಡ:

ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌, ರವಿ ಬಿಷ್ಣೋಯ್‌.

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ.
Published by:shrikrishna bhat
First published: