IND vs PAK Asia Cup 2022: ಭಾರತ-ಪಾಕ್​ ಕದನ, ಯಾರು ಬಲಿಷ್ಠರು? ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ

IND vs PAK: ಇಂದಿನಿಂದ ಏಷ್ಯಾ ಕಪ್​ 2022 ಆರಂಭವಾಗಲಿದೆ. ನಾಳೆ ಭಾರತ- ಪಾಕಿಸ್ತಾನ (India vs Pakistan) ನಡುವೆ ಹೈವೋಲ್ಟೇಜ್ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

IND vs PAK

IND vs PAK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಯಲಿದೆ. ಕೊರೋನಾ ನಂತರ 2 ವರ್ಷಗಳ ಬಳಿಕ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ. ಇಂದು ಅದ್ಧೂರಿ ಉದ್ಘಾಟನಾ ಪಂದ್ಯದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ (SL vs AFG) ತಂಡಗಳು ಸೆಣಸಾಡಲಿವೆ.  ನಾಳೆ (ಆಗಸ್ಟ್28) ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮುಖಾಮುಖಿ ಆಗಲಿದ್ದು, ಇದೊಂದು ಪಂದ್ಯಕ್ಕಾಗಿ ಕ್ರಿಕೆಟ್​ ಲೋಕವೇ ಕಾತುರದಿಂದ ಕಾದಿದೆ ಎಂದರೂ ತಪ್ಪಾಗಲಾರದು. ಹಾಗಿದ್ದರೆ ಅಂಕಿಅಂಶಗಳ ಪ್ರಕಾರ ಭಾರತ ಮತ್ತು ಪಾಕ್​ ತಂಡಗಳಲ್ಲಿ ಯಾವ ಟೀಂ ಬಲಿಷ್ಠವಾಗಿದೆ. ಪಿಚ್​ ವರದಿ ಹೇಗಿದೆ ಎಂಬ ಅಂಶಗಳನ್ನು ತಿಳಿಯೋಣ ಬನ್ನಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: IND vs PAK: ರಿವೀಲ್ ಆಯ್ತು ಪಾಕ್​ ಎದುರು ಕಣಕ್ಕಿಳಿಯುವ ಟೀಂ ಇಂಡಿಯಾ ಆಟಗಾರರ ಲಿಸ್ಟ್, ಇಲ್ಲಿದೆ ಭಾರತ ತಂಡದ ಪ್ಲೇಯಿಂಗ್ 11

ಆದರೆ ಈ ಮೈದಾನದಲ್ಲಿ ಉಭಯ ತಂಡಗಳು ಸಾಕಷ್ಟು ಪಂದ್ಯಗಳನ್ನು ಆಡಿವೆ. ಪಾಕ್​ ಕಳೆದ ಕೆಲ ವರ್ಷಗಳಿಂದ ಇದೇ ಮೈದಾನದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿದರೆ, ಭಾರತದ ಆಟಗಾರರು ಐಪಿಎಲ್​ನಲ್ಲಿ ಈ ಮೈದಾನದಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಆದರೆ ಹೊಸ ಬೌಲ್​ನಲ್ಲಿ ವೇಗಿಗಳು ಲಾಭ ಪಡೆದುಕೊಳ್ಳಬಹುದಾಗಿದೆ. ಈ ಪಿಚ್​ನಲ್ಲಿ ಚೇಸಿಂಗ್ ಮಾಡಿದ ತಂಡ ಹೆಚ್ಚು ಗೆಲುವು ದಾಖಲಿಸಿದೆ. ಪಿಚ್​ನ ಮೊದಲ ಇನ್ನಿಂಗ್ಸ್ ಸರಾಸರಿ 142 ರನ್ ಅಗಿದೆ. 211 ರನ್ ಗರಿಷ್ಠ ಸ್ಕೋರ್​ ಆಗಿದೆ ಮಳೆಯ ಅಡ್ಡಿ ಪಂದ್ಯಕ್ಕಾಗುವ ಯಾವುದೇ ಸಾಧ್ಯತೆಗಳಿಲ್ಲ.

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುವುದರಿಂದ ಉಭಯ ತಂಡಗಳು ಟಿ20 ಅಲ್ಲಿ ಈವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 6ರಲ್ಲಿ ಭಾರತ ಮತ್ತು ಕೇವಲ 2ರಲ್ಲಿ ಪಾಕ್​ ಗೆದ್ದಿದೆ. ಇನ್ನು, ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 14 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 8 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು.

ಒಟ್ಟಾರೆಯಾಗಿ ಅಂಕಿಅಂಶಗಳ ಪ್ರಕಾರ ಭಾರತ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ ಪಾಕ್​ ಸಹ ಉತ್ತಮ ದಾಖಲೆ ಹೊಂದಿದ್ದು, ಕಳೆದ ಟಿ20 ವಿಶ್ವಕಪ್​ ನಲ್ಲಿ ಭಾರತದ ಪರ ಗೆಲುವು ಕಂಡಿರುವ ವಿಶ್ವಾದಲ್ಲಿ ಕಣಕ್ಕಿಳಿಯುತ್ತಿದೆ. ಹೀಗಾಗಿ ಆ ಸೋಲಿನ ಸಮರವಾಗಿ ನಾಳಿನ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ: Asia Cup 2022: ಕ್ರಿಕೆಟ್ ಪ್ರಿಯರಿಗೆ ಈ ಸಂಡೇ ಸೂಪರ್ ಧಮಾಕಾ! ಭಾರತ-ಪಾಕ್ ಹಣಾಹಣಿಯ ಪಿನ್ ಟು ಪಿನ್ ಡೀಟೇಲ್ಸ್ ಇಲ್ಲಿದೆ

IND vs PAK  ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್

ಪಾಕಿಸ್ತಾನ ತಂಡ: ಬಾಬರ್ ಅಜಮ್ (C), ಮೊಹಮ್ಮದ್ ರಿಜ್ವಾನ್ (WK), ಫಖರ್ ಜಮಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್ (VC), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ.
Published by:shrikrishna bhat
First published: