IND vs PAK: ಭಾರತ-ಪಾಕಿಸ್ತಾನ ಪಂದ್ಯಕ್ಕಾಗಿ ಕಾಯುತ್ತಿದ್ದೀರಾ? ಇಲ್ಲಿದೆ ಮ್ಯಾಚ್​ನ ಫುಲ್​ ಡೀಟೇಲ್ಸ್

Asia Cup 2022: ಟಿ20 ವಿಶ್ವಕಪ್​​ ಬಳಿಕ ಇದೀಗ ಮತ್ತೆ ಭಾರತ ಮತ್ತು ಪಾಕ್ ತಂಡಗಳು ಸೆಣಸಾಡಲಿವೆ. ಈ ಪಂದ್ಯವು ಯಾವಾಗ? ಎಲ್ಲಿ? ಎಷ್ಟು ಗಂಟೆಗೆ ನಡೆಯಲಿದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

IND vs PAK

IND vs PAK

  • Share this:
ಭಾರತ ಮತ್ತು ಪಾಕಿಸ್ತಾನ (IND vs PAK) ಪಂದ್ಯವು ಕೇವಲ ಒಂದು ಆಟವಾಗಿ ಉಳಿದಿಲ್ಲ. ಅದು 2 ದೇಶಗಳ ನಡುವಿನ ಪ್ರತಿಷ್ಠೆಯಾಗಿದೆ. ಹೀಗಾಗಿ ಈ ಪಂದ್ಯದ ಮೇಲೆ ವಿಶ್ವ ಕ್ರಿಕೆಟ್​ ನಲ್ಲಿ (World Cricket)​ ಅಷ್ಟು ಮಹತ್ವ ನೀಡಲಾಗಿದೆ ಎಂದರೂ ತಪ್ಪಾಗಲಾರದು. ಟಿ20 ವಿಶ್ವಕಪ್ (T20 World Cup) ಬಳಿಕ ಭಾರತ ಮತ್ತೊಮ್ಮೆ ಏಷ್ಯಾ ಕಪ್​ನಲ್ಲಿ (Asia Cup) ಪಾಕಿಸ್ತಾನವನ್ನು ಎದುರಿಸಲಿದೆ. ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಭಾರತವನ್ನು ಹೀನಾಯವಾಗಿ ಸೋಲಿಸಿತ್ತು. ಇದೀಗ ಏಷ್ಯಾಕಪ್‌ನಲ್ಲಿ ಸೇಡು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಏಷ್ಯಾ ಕಪ್ ಯುಎಇಯಲ್ಲಿ (UAE) ಆಗಸ್ಟ್ 27ರಿಂದ ಆರಂಭವಾಗಲಿದೆ. ಕ್ರಿಕೆಟ್ ಪ್ರೇಮಿಗಳು ಈ ಪಂದ್ಯವನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಭಾರತ ಮತ್ತು ಪಾಕಿಸ್ತಾನವು ಈ ಮೈದಾನದಲ್ಲಿ ಇದುವರೆಗೆ 9 ಬಾರಿ ಮುಖಾಮುಖಿಯಾಗಿದೆ.  ಇದರಲ್ಲಿ ಭಾರತ 7 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ಕೇವಲ ಎರಡು ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಿದೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ಯಾವಾಗ?:

ಏಷ್ಯಾ ಕಪ್ ಆಗಸ್ಟ್ 27ರಿಂದ ಆರಂಭವಾಗಲಿದೆ. ಭಾರತ ಮತ್ತು ಪಾಕಿಸ್ತಾನ ಪಂದ್ಯ ಆಗಸ್ಟ್ 28ರಂದು ನಡೆಯಲಿದೆ.

ಪಂದ್ಯ ಎಲ್ಲಿ ನಡೆಯಲಿದೆ?:

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ.

ಎಲ್ಲಿ-ಯಾವ ಸಮಯದಲ್ಲಿ ಪಂದ್ಯವನ್ನು ವೀಕ್ಷಿಸಬಹುದು?:

ಇಂಡೋ-ಪಾಕ್ ಪಂದ್ಯ ಯುಎಇಯಲ್ಲಿ ನಡೆಯಲಿದೆ. ಪಂದ್ಯ ಆಗಸ್ಟ್ 28ರಂದು ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ. 7 ಗಂಟೆಗೆ ಟಾಸ್ ನಡೆಯಲಿದೆ.

ಇದನ್ನೂ ಓದಿ: Riyan Parag: ಮಧ್ಯರಾತ್ರಿ ಆ ಮಾಡೆಲ್​ ಟ್ವೀಟ್​ಗೆ ಲೈಕ್​ ಒತ್ತಿದ ಖ್ಯಾತ ಕ್ರಿಕೆಟಿಗ! ನೈಟ್​ ಟೈಮ್​ ಅಲ್ಲಿ ಫುಲ್ ಆ್ಯಕ್ಟೀವ್​ ಈ ಆಟಗಾರ ಅಂತ ಟ್ರೋಲ್​

ಲೈವ್ ಸ್ಟ್ರೀಮಿಂಗ್ ಎಲ್ಲಿ ಪ್ರಸಾರವಾಗಲಿದೆ?:

ಈ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು Disney+Hotstar ನಲ್ಲಿ ವೀಕ್ಷಿಸಬಹುದು.

IND vs PAK  ಹೆಡ್​ ಟು ಹೆಡ್​:

ಈಗಿರುವ ಪರಿಸ್ಥಿತಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳೆರಡೂ ಸಹ ಬಲಿಷ್ಠವಾಗಿದೆ. ಆದರೆ ಕೇವಲ ಏಷ್ಯಾ ಕಪ್​ ವಿಷಯವನ್ನು ನೋಡುವುದಾದರೆ, ಈವರಗೆ ಭಾರತ-ಪಾಕ್ 14 ಬಾರಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ 8 ಬಾರಿ ಗೆದ್ದಿದೆ. ಪಾಕಿಸ್ತಾನ ಗೆದ್ದಿದ್ದು ಕೇವಲ 5 ಬಾರಿ ಮಾತ್ರ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಈ ಅಂಕಿಅಂಶದ ಪ್ರಕಾರ ಟೀಂ ಇಂಡಿಯಾ ಬಲಿಷ್ಠವಾಗಿದೆ. ಆದರೆ ಕಳೆದ ಟಿ20 ವಿಶ್ವಕಪ್​ ನಲ್ಲಿ ಪಾಕ್ ಇಂಡಿಯಾ ಎದುರು ಗೆಲುವು ಸಾಧಿಸಿರುವುದರಿಂದ ಈ ಪಂದ್ಯದ ಮೇಲಿನ ನಿರೀಕ್ಷೆ ಇದೀಗ ದುಪ್ಪಟ್ಟಾಗಿದೆ.

ಇನ್ನೂ ಫೈನಲ್​ನಲ್ಲಿ ಮುಖಾಮುಖಿ ಆಗದ ಭಾರತ-ಪಾಕ್:

ಕಳೆದ 14 ಏಷ್ಯಾಕಪ್​ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಫೈನಲ್​ನಲ್ಲಿ ಮುಖಾಮುಖಿಯಾಗಿಲ್ಲ. ಅಚ್ಚರಿ ಆದರೂ ಇದು ಸತ್ಯ. ಈವರೆಗೂ ಭಾರತ ಮತ್ತು ಪಾಕ್​ ಫೈನಲ್​ನಲ್ಲಿ ಮುಖಾಮುಖಿ ಆಗಲಿಲ್ಲ. ಏನಾದರೂ ಈ ಬಾರಿ 2 ತಂಡಗಳು ಫೈನಲ್​ ನಲ್ಲಿ ಎದುರಾದರೆ, ಕ್ರಿಕೆಟ್​ ಪ್ರೇಮಿಗಳ ನಿರೀಕ್ಷೆಗೆ ಮಿತಿ ಇಲ್ಲದಂತಾಗುತ್ತದೆ. ಭಾರತ ಈವರೆಗೆ ಶ್ರೀಲಂಕಾ ಮತ್ತು ಬಾಂಗ್ಲಾದೇಶ ತಂಡಗಳನ್ನು ಫೈನಲ್​ ಪಂದ್ಯದಲ್ಲಿ ಎದುರಿಸಿದೆ.

ಇದನ್ನೂ ಓದಿ: Virat Kohli: ಏಷ್ಯಾ ಕಪ್​ನಲ್ಲಿ ಗೋಲ್ಡ್‌ ಬ್ಯಾಟ್ ಬಳಸ್ತಾರಂತೆ ಕೊಹ್ಲಿ, ಇದರ ಬೆಲೆ ಕೇಳಿದ್ರೆ ದಂಗಾಗ್ತೀರಾ

ಪಾಕ್​ ಎದುರು ಕಣಕ್ಕಿಳಿಯಲಿರುವ ಟೀಂ ಇಂಡಿಯಾ ಸಂಭಾವ್ಯ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್.
Published by:shrikrishna bhat
First published: