Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಜಾಲಿ ಮೂಡ್​ನಲ್ಲಿ ರೋಹಿತ್​ ಪಡೆ, ವಿಡಿಯೋ ವೈರಲ್

Asia cup 2022: ಇಂದಿನಿಂದ ಏಷ್ಯಾ ಕಪ್​ 2022ರ ಸೂಪರ್ 4 ಹಂತ ಆರಂಭವಾಗಲಿದೆ, ನಾಳೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಇದಕ್ಕೂ ಮೊದಲು ಟೀಂ ಇಂಡಿಯಾ ಸಖತ್ ಜಾಲಿ ಮೂಡ್​ನಲ್ಲಿದೆ.

ಭಾರತ ತಂಡ

ಭಾರತ ತಂಡ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಲೀಗ್​ ಹಂತವು ಮುಗಿದಿದ್ದು, ಇಂದಿನಿಂದ ಸೂಪರ್ 4 (Super 4) ಹಂತದ ಪಂದ್ಯಗಳು ನಡೆಯಲಿವೆ.  ಸೂಪರ್ 4ರಲ್ಲಿ ಭಾರತ, ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಸೆಣಸಾಡಲಿವೆ. ಹೀಗಾಗಿ ಈ ಬಾರಿ ಮತ್ತೊಮ್ಮೆ ಏಷ್ಯಾ ಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿ ಆಗಲಿದೆ. ಇದಕ್ಕೂ ಮುನ್ನ ಟೀಂ ಇಂಡಿಯಾ (Team India) ಆಟಗಾರರು ಕಳೆದ ದಿನ ದುಬೈನ ಸಮುದ್ರ ತೀರದಲ್ಲಿ ಸಖತ್​ ಎಂಜಾಯ್ ಮಾಡಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ (BCCI) ಹಂಚಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸಖತ್ ಜಾಲಿ ಮೂಡ್​ನಲ್ಲಿ ಟೀಂ ಇಂಡಿಯಾ ಆಟಗಾರರು:

ನಾಳಿನ ಪಾಕಿಸ್ತಾನ ಪಂದ್ಯಕ್ಕೂ ಮೊದಲು ಟೀಂ ಇಂಡಿಯಾದ ಆಟಗಾರರು ಸಖತ್​ ಎಂಜಾಯ್ ಮಾಡುತ್ತಿದ್ದಾರೆ. ದುಬೈನ ಬೀಚ್​ನಲ್ಲಿ ಆಟಗಾರರು ರಿಲ್ಯಾಕ್ಸ್ ಮೂಡ್ ನಲ್ಲಿದ್ದು, ಬೀಚ್​ ವಾಲಿಬಾಲ್​ ಸೇರಿದಂತೆ ಅನೇಕ ಆಟಗಳನ್ನು ಆಡುವ ಮೂಲಕ ಟೂರ್ನಿಯ ನಡುವೆ ರಿಲ್ಯಾಕ್ಸ್ ಆಗಿದ್ದಾರೆ.

ಇನ್ನು, ಫಾರ್ಮ್​ಗೆ ಮರಳಿರುವ ವಿರಾಟ್ ಕೊಹ್ಲಿ ಸರ್ಫಿಂಗ್ ಮಾಡಿದರೆ, ರೋಹಿತ್​ ಶರ್ಮಾ ಬೋಟಿಂಗ್,  ಚಹಾಲ್ ಹಾಗೂ ಅಶ್ವಿನ್ ಆಕ್ವಾ ಸೈಕಲಿಂಗ್ ಮಾಡುವ ಮೂಲಕ ಎಂಜಾಯ್ ಮಾಡಿದ್ದಾರೆ. ಅಲ್ಲದೇ ಬೀಚ್​ನಲ್ಲಿ ವಾಲಿಬಾಲ್​ ಆಡುವ ಮೂಲಕ ಸಂಪೂರ್ಣ ತಂಡದ ಪ್ಲೇಯರ್ಸ್​ ಸಖತ್ ಎಂಜಾಯ್ ಮಾಡಿದ್ದಾರೆ. ಇದರ ವಿಡಿಯೋವನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, When Team India  hit U.N.W.I.N.D ಎಂದು ಬರೆದುಕೊಂಡಿದೆ.

ಇದನ್ನೂ ಓದಿ: Asia Cup 2022 Super 4: ಇಂದಿನಿಂದ ಏಷ್ಯಾ ಕಪ್​ ಸೂಪರ್​ 4 ಆರಂಭ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಏಷ್ಯಾ ಕಪ್​ 2022 ಸೂಪರ್ 4 ವೇಳಾಪಟ್ಟಿ:

ಸೆಪ್ಟೆಂಬರ್ 3 - ಅಫ್ಘಾನಿಸ್ತಾನ್ vs ಶ್ರೀಲಂಕಾ- ಶಾರ್ಜಾ
ಸೆಪ್ಟೆಂಬರ್ 4 – ಭಾರತ vs ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 6 – ಭಾರತ vs ಶ್ರೀಲಂಕಾ – ದುಬೈ
ಸೆಪ್ಟೆಂಬರ್ 7 – ಪಾಕಿಸ್ತಾನ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 8 – ಭಾರತ vs ಅಫ್ಘಾನಿಸ್ತಾನ್- ದುಬೈ
ಸೆಪ್ಟೆಂಬರ್ 9 – ಶ್ರೀಲಂಕಾ vs- ಪಾಕಿಸ್ತಾನ- ದುಬೈ
ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ (ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ರಾತ್ರಿ 7:30ಕ್ಕೆ ಪಂದ್ಯ ಆರಂಭವಾಗಲಿದೆ)

ಮತ್ತೊಮ್ಮೆ ಇಂಡೋ-ಪಾಕ್ ಕದನ:

ಇನ್ನು,  ಮತ್ತೊಮ್ಮೆ ಪಾಕ್​ ತಂಡವು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ. ನಾಳೆ (ಸೆ.04) ಇಂಡೋ-ಪಾಕ್​ ಕದನ ನಡೆಯಲಿದೆ. ಕ್ರಿಕೆಟ್​ ಅಭಿಮಾನಿಗಳಿಗೆ ಇದು ಭರ್ಜರಿ ಹಬ್ಬವಾಗಿರಲಿದೆ. ಒಂದು ವಾರದಲ್ಲಿ 2 ಬಾರಿ ಭಾರತ ಮತ್ತು ಪಾಕಿಸ್ತಾನ ಪಂದ್ಯಗಳನ್ನು ನೋಡಬಹುದಾಗಿದೆ. ಪಂದ್ಯವು  ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಆರಂಭವಾಗಲಿದೆ. ಅಲ್ಲದೇ  ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಇದನ್ನೂ ಓದಿ: Asia Cup 2022: ಪಾಕಿಸ್ತಾನ ತಂಡಕ್ಕೆ ಭರ್ಜರಿ ಜಯ, ಮತ್ತೆ ಭಾರತ-ಪಾಕ್ ಕದನಕ್ಕೆ ಮುಹೂರ್ತ​ ಫಿಕ್ಸ್

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ಅಕ್ಷರ್​ ಪಟೇಲ್.
Published by:shrikrishna bhat
First published: