IND vs SL Asia Cup 2022: ಇಂದು ಭಾರತ-ಶ್ರೀಲಂಕಾ ಪಂದ್ಯ, ಇಲ್ಲಿದೆ ಉಭಯ ತಂಡಗಳ ಹೆಡ್​ ಟು ಹೆಡ್​

IND vs SL: ಇಂದು ಏಷ್ಯಾ ಕಪ್ 2022ರ (Asia Cup 2022)​ ಸೂಪರ್ 4 ಹಂತದ 3ನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಸೆಣಸಾಡಲಿವೆ.

IND vs SL

IND vs SL

  • Share this:
ಇಂದು ಏಷ್ಯಾ ಕಪ್ 2022ರ (Asia Cup 2022)​ ಸೂಪರ್ 4 ಹಂತದ 3ನೇ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ (IND vs SL) ತಂಡಗಳು ಸೆಣಸಾಡಲಿವೆ. ಈಗಾಗಲೇ ಸೂಪರ್​ 4 ಹಂತದಲ್ಲಿ ಶ್ರೀಲಂಕಾ (Sri Lanka) ತಂಡವು ಅಫ್ಘಾನ್​  ತಂಡದ ವಿರುದ್ಧ ಗೆದ್ದಿದೆ. ಅಲ್ಲದೇ ಇತ್ತ ಪಾಕಿಸ್ತಾನ ತಂಡದ ವಿರುದ್ಧ ಭಾರತವು ಸೋಲನ್ನು ಅನುಭವಿಸಿದೆ. ಹೀಗಾಗಿ ಇಂದಿನ ಪಂದ್ಯವು ಟೀಂ ಇಂಡಿಯಾ (Team India) ತಂಡಕ್ಕೆ ಅತ್ಯಂತ ಮಹತ್ವದ್ದಾಗಿದ್ದು, ಇಂದಿನ ಗೆಲುವು ಭಾರತ ಫೈನಲ್​​ ಹಾದಿಗೆ ಸಹಾಯವಾಗಲಿದೆ. ಕಳೆದ ಪಂದ್ಯದ ಕೆಲ ಕೊರೆತೆಗಳನ್ನು ಇಲ್ಲಿ ಸರಿಯಾಗಿ ನಿವಾರಿಸಿಕೊಳ್ಳುವ ಮೂಲಕ ಪಂದ್ಯವನ್ನು ಗೆಲ್ಲಬೇಕಿದೆ. ಇದರಿಂದಾಗಿ ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ ಕೆಲ ಬದಲಾವಣೆ ಮಾಡುವ ಸಾಧ್ಯತೆ ಇದ್ದು, ತಂಡಕ್ಕೆ ಮತ್ತೆ ಆವೇಶ್​ ಖಾನ್​ ಮರಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಭಾರತ ಮತ್ತು  ಶ್ರೀಲಂಕಾ​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚಿನ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ.

ಇದನ್ನೂ ಓದಿ: Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

IND vs SL ಹೆಡ್​ ಟು ಹೆಡ್​:

ಟಿ20 ಪಂದ್ಯದಲ್ಲಿ ಮುಖಾಮುಖಿ - 29
ಭಾರತ ತಂಡದ ಗೆಲುವು - 22
ಶ್ರೀಲಂಕಾ ತಂಡದ ಗೆಲುವು - 7

ಏಷ್ಯಾಕಪ್‌ನಲ್ಲಿ ಭಾರತ vs ಶ್ರೀಲಂಕಾ
ಭಾರತ ತಂಡದ ಗೆಲುವು - 10
ಶ್ರೀಲಂಕಾ ತಂಡದ ಗೆಲುವು - 10

ದುಬೈ ಕ್ರೀಡಾಂಗಣದ  T20 ಅಂಕಿಅಂಶಗಳು:

ಒಟ್ಟು ಪಂದ್ಯಗಳು- 78
35 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಗೆದ್ದಿದೆ
42 ಪಂದ್ಯಗಳಲ್ಲಿ ಮೊದಲು ಬೌಲಿಂಗ್ ಮಾಡಿದ ತಂಡ ಗೆದ್ದಿದೆ
ಸರಾಸರಿ 1 ನೇ ಇನ್ಸ್ ಸ್ಕೋರ್‌ಗಳು 142
ಸರಾಸರಿ 2ನೇ ಇನ್ಸ್ ಸ್ಕೋರ್ 126

ಶ್ರೀಲಂಕಾ ಪರ ಯಾರು ಹೆಚ್ಚು ರನ್ ಗಳಿಸಿದವರು: ದಸುನ್ ಶನಕ / ಕುಸಲ್ ಮೆಂಡಿಸ್
ಶ್ರೀಲಂಕಾ ಪರ ಯಾರು ಹೆಚ್ಚು ವಿಕೆಟ್‌ಗಳನ್ನು ಪಡೆದವರು: ವನಿಂದು ಹಸರಂಗಾ / ಅಸಿತ ಫೆರ್ನಾಂಡೋ
ಭಾರತಕ್ಕಾಗಿ ಯಾರು ಹೆಚ್ಚು ರನ್ ಗಳಿಸುದವರು: ವಿರಾಟ್ ಕೋಹ್ಲಿ / ರೋಹಿತ್ ಶರ್ಮಾ
ಭಾರತ ಪರ ಯಾರು ಹೆಚ್ಚು ವಿಕೆಟ್‌ಗಳನ್ನು ಪಡೆದವರು: ಭುವನೇಶ್ವರ್ ಕುಮಾರ್ / ಹಾರ್ದಿಕ್ ಪಾಂಡ್ಯ.

ಇದನ್ನೂ ಓದಿ: MS Dhoni: ಧೋನಿ ಅಭಿಮಾನಿಗಳಿಗೆ ಭರ್ಜರಿ ಗುಡ್​ ನ್ಯೂಸ್​ ನೀಡಿದ ಚೆನ್ನೈ ಸೂಪರ್​ ಕಿಂಗ್ಸ್

IND vs SL ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್/ಆವೇಶ್​ ಖಾನ್​.

ಶ್ರೀಲಂಕಾ ತಂಡ: ದನುಷ್ಕ ಗುಣತಿಲಕ, ಪತುಮ್‌ ನಿಸಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್‌ ಶನಕ (ನಾಯಕ), ವಾನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.
Published by:shrikrishna bhat
First published: