IND vs PAK: ಈ ಬಾರಿಯೂ ಇರುತ್ತಾ ಮೌಕಾ ಮೌಕಾ? ಡೌಟ್​ ಅಂತಿದ್ದಾರೆ ಅಭಿಮಾನಿಗಳು

ಭಾರತ-ಪಾಕ್ ಪಂದ್ಯ ಎಂದರೆ ಅದೊಂದು ಮಿನಿ ಸಮರವೇ ಆಗಿರುತ್ತದೆ. ಅದರಲ್ಲಿಯೂ ಪಂದ್ಯದ ಕೆಲ ದಿನಗಳ ಮುಂಚಿತವಾಗಿ ಎಲ್ಲಡೆ ಮೌಕಾ ಮೌಕಾ ಎಂಬ ಜಾಹೀರಾತು ಪ್ರಸಾರವಾಗುತ್ತಿತ್ತು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದ ಆಂತರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯನ್ನು ಈಗಾಗಲೇ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರು ವೇಳಾಪಟ್ಟಿಯ ಪ್ರಕಾರ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡವನ್ನು ಎದುರಿಸಲಿದ್ದು, ಭಾರತ ಮತ್ತು ಪಾಕ್ (IND vs PAK) ​ ಪಂದ್ಯವು ಆಗಸ್ಟ್ 28ರಂದು ನಡೆಯಲಿದೆ. ಪ್ರತಿ ಬಾರಿಯಂತೆ ಈ ಸಲವೂ ಮೌಕಾ ಮೌಕಾ (Mauka Mauka) ಹಾಡು ಇದೆಯೇ ಎಂದು ಅಭಿಮಾನಿಗಳು ಕಾದು ನೋಡುತ್ತಿದ್ದಾರೆ.

ಈ ಬಾರಿ ಇದರಲಿದೆಯೇ ಮೌಕಾ ಮೌಕಾ:

ಹೌದು, ಭಾರತ-ಪಾಕ್ ಪಂದ್ಯ ಎಂದರೆ ಅದೊಂದು ಮಿನಿ ಸಮರವೇ ಆಗಿರುತ್ತದೆ. ಅದರಲ್ಲಿಯೂ ಪಂದ್ಯದ ಕೆಲ ದಿನಗಳ ಮುಂಚಿತವಾಗಿ ಎಲ್ಲಡೆ ಮೌಕಾ ಮೌಕಾ ಎಂಬ ಜಾಹೀರಾತು ಪ್ರಸಾರವಾಗುತ್ತಿತ್ತು. ಹೀಗಾಗಿ ಈ ಬಾರಿಯೂ ಅದೇ ರೀತಿ ಏಷ್ಯಾ ಕಪ್​ 2022ರಲ್ಲಿ ಸಹ ಇಂಡೋ-ಪಾಕ್​ ಕದನ ನಡೆಯಲಿದ್ದು, ಮೌಕಾ ಮೌಕಾ ಜಾಹೀರಾತಿ ಇರಲಿದೆಯೇ ಎಂಬ ಅನುಮಾನ ಹಲವರಲ್ಲಿ ಮನೆ ಮಾಡಿದೆ. ಇದಕ್ಕೆ ಉತ್ತರ ಇಲ್ಲದೆ.ಈ ಪಂದ್ಯಕ್ಕಾಗಿ 2 ದೇಶಗಳ ಜನರು ಅದೆಷ್ಟು ಕಾತುರದಿಂದ ಕಾಯುತ್ತಾರೆ ಎಂದು ಹೇಳುವ ಅವಶ್ಯಕತೆ ಇರುವುದಿಲ್ಲ. ಅದೇ ರೀತಿ ಮೌಕಾ ಮೌಕಾ ಹಾಡು ಸಹ ಅಷ್ಟೇ ಫೇಮಸ್​. ಆದರೆ ಈ ಯಶಸ್ವಿ ಮೌಕಾ ಮೌಕಾ ಕ್ಯಾಂಪೇನ್ ಅನ್ನು ನಿಲ್ಲಿಸಲು ಸ್ಟಾರ್​ ಪ್ರಸಾರ ವಾಹಿನಿ ನಿರ್ಧರಿಸಿದೆ. ಇದರಿಂದ ಭಾರತೀಯ ಕ್ರಿಕೆಟ್​ ಪ್ರೇಮಿಗಳಿಗೆ ದೊಡ್ಡ ನಿರಾಸೆಯಾಗಿದೆ.

ಇದನ್ನೂ ಓದಿ: IND vs ZIM: ಭಾರತ-ಜಿಂಬಾಬ್ವೆ ಏಕದಿನ ಸರಣಿ; ವೇಳಾಪಟ್ಟಿ, ಸಂಪೂರ್ಣ ತಂಡದ ಕುರಿತು ಇಲ್ಲಿದೆ ಮಾಹಿತಿ

ಮೌಕಾ ಮೌಕಾ ನಿಲ್ಲಿಸುತ್ತಿರುವುದೇಕೆ?:

2015ರ ಏಕದಿನ ವಿಶ್ವಕಪ್​ ನಿಂದ ಮೌಕಾ ಮೌಕಾ ಎಂಬ ಜಾಹೀರಾತು ಆರಂಭಿಸಲಾಗಿತ್ತು. ಆದರೆ ಈ ಬಾರಿ ಈ ಸೂಪರ್ ಹಿಟ್ ಜಾಹೀರಾತನ್ನು ನಿಲ್ಲಿಸಲು ಸ್ಟಾರ್​ ಸ್ಪೋರ್ಟ್ಸ್ ವಾಹಿನಿ ನಿರ್ಧರಿಸಿದೆಯಂತೆ. ಕಳೆದ ಬಾರಿ ನಡೆದ 2021ರ ಟಿ20 ವಿಶ್ವಕಪ್​ನಲ್ಲಿ ಭಾರತ ತಂಡ ಪಾಖ್ ಎದುರು ಮೊದಲ ಬಾರಿಗೆ ಸೋಲನ್ನಪ್ಪಿತು. ಹೀಗಾಗಿ ಈ ಬಾರಿ ಮೌಕಾ ಮೌಕಾ ಜಾಹೀರಾತು ಮಾಡದಿರಲು ಸ್ಟಾರ್ ವಾಹಿನಿ ನಿರ್ಧರಿಸಿದೆ ಎನ್ನಲಾಗಿದೆ.

ಇದನ್ನೂ ಓದಿ: Asia Cup 2022: ಭಾರತ-ಪಾಕ್​ ಪಂದ್ಯಕ್ಕೆ ಹೇಗಿರಲಿದೆ ಟೀಂ ಇಂಡಿಯಾ ಸಂಭಾವ್ಯ ತಂಡ

ಏಷ್ಯಾ ಕಪ್​ 2022 IND vs PAK ತಂಡ:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.

ಪಾಕಿಸ್ತಾನ್​ ತಂಡ: ಬಾಬರ್ ಆಜಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್, ವಾಸಿಮ್ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ, ಶಾನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್.
Published by:shrikrishna bhat
First published: