IND vs PAK Asia Cup 2022: ಟಾಸ್​ ಗೆದ್ದ ಟೀಂ ಪಾಕಿಸ್ತಾನ, ತಂಡದಲ್ಲಿ ಮಹತ್ವದ ಬದಲಾವಣೆ; ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

IND vs PAK: ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಈಗಾಗಳೇ ಟಾಸ್​ ಗೆದ್ದಿರುವ ಪಾಕ್​ ಬೌಲಿಂಗ್​ ಆಯ್ದುಕೊಂಡಿದೆ.

IND vs PAK

IND vs PAK

  • Share this:
ಏಷ್ಯಾ ಕಪ್​ 2022ರ (Asia Cup 2022) ಲೀಗ್​ ಹಂತ ಈಗಾಗಲೇ ಮುಗಿದಿದೆ. ಭಾರತ ಸೇರಿದಂತೆ ಟೂರ್ನಿಯ ಪ್ರಮುಖ 4 ತಂಡಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳು ಸೂಪರ್ 4 (Super 4) ಹಂತಕ್ಕೆ ತಲುಪಿದೆ. ಇದರ ಭಾಗವಾಗಿ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಇಂದು ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮತ್ತೊಮ್ಮೆ ಸೆಣಸಾಡಲಿವೆ. ಈಗಾಗಲೇ ಟಾಸ್​ ಗೆದ್ದಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಬಾರಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್​ ಮಾಡಲಿದ್ದು, ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಭಾರತ ಮತ್ತು ಪಾಕ್​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಭಾರತ ತಂಡದಲ್ಲಿ 3 ಮಹತ್ವದ ಬದಲಾವಣೆ:

ಹೌದು, ಇಂಡಿದನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದಲ್ಲಿ 3 ಮಹತ್ವದ ಬದಲಾವಣೆ ಮಾಡಲಾಗಿದೆ. ಈಗಾಗಲೇ ರವೀಂದ್ರ ಜಡೇಜಾ ಬದಲಿಗೆ ದೀಪಕ್ ಹೂಡಾಗೆ ಸ್ಥಾನ ನೀಡಲಾಗಿದೆ. ಅವೇಶ್ ಖಾನ್ ಅನಾರೋಗ್ಯದಿಂದ ಕಣಕ್ಕಿಳಿದಿಲ್ಲ. ಅಲ್ಲದೇ ಇಂದು ದಿನೇಶ್ ಕಾರ್ತಿಕ್ ಬದಲಾಗಿ ರಿಷಭ್ ಪಂತ್​ ಆಯ್ಕೆ ಆದರೆ, ಹಾಂಗ್​ ಕಾಂಗ್​ ವಿರುದ್ಧ ಕಣಕ್ಕಿಳಿಯದ ಹಾರ್ದಿಕ್ ಪಾಂಡ್ಯ ಮತ್ತೆ ಕಂಬ್ಯಾಕ್ ಮಾಡಿದ್ದಾರೆ.

ಇದನ್ನೂ ಓದಿ: Rohit Sharma: ರೋಹಿತ್​ ರೆಕಾರ್ಡ್ ಮುರಿದ ಅಫ್ಘಾನ್​ ಆಟಗಾರ, ಆದ್ರೂ ವಿಶ್ವ ದಾಖಲೆ ಹೊಸ್ತಿಲಲ್ಲಿ ಹಿಟ್​ಮ್ಯಾನ್​

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.  ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 9 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಒಟ್ಟಾರೆಯಾಗಿ ಅಂಕಿಅಂಶಗಳ ಪ್ರಕಾರ ಭಾರತ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ ಪಾಕ್​ ಸಹ ಉತ್ತಮ ದಾಖಲೆ ಹೊಂದಿದ್ದು,  ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ನಾಳೆ ಕಣಕ್ಕಿಳಿಯಲಿದೆ.

IND vs PAK ತಂಡ:

ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌, ರವಿ ಬಿಷ್ಣೋಯ್‌.

ಇದನ್ನೂ ಓದಿ: IND vs PAK Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಮತ್ತೊಂದು ಆಘಾತ, ತಂಡದ ಪ್ರಮುಖ ಬೌಲರ್ ಅನುಮಾನ!

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ
Published by:shrikrishna bhat
First published: