India vs Pakistan Asia Cup 2022: ಟೀಂ ಇಂಡಿಯಾ ಎದುರು ಪಾಕಿಸ್ತಾನಕ್ಕೆ 5 ವಿಕೆಟ್​ಗಳ ಜಯ, ಕೊಹ್ಲಿ ಅರ್ಧಶತಕ ವ್ಯರ್ಥ

India vs Pakistan Asia Cup 2022: ಪಾಕಿಸ್ತಾನ ತಂಡವು 19.5 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸುವ ಮೂಲಕ ಭಾರತದ ಪರ ಜಯ ದಾಖಲಿಸಿತು.

ಪಾಕಿಸ್ತಾನ ತಂಡಕ್ಕೆ ಜಯ

ಪಾಕಿಸ್ತಾನ ತಂಡಕ್ಕೆ ಜಯ

  • Share this:
ಏಷ್ಯಾ ಕಪ್​ 2022ರ (Asia Cup 2022) ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಮುಖಾಮುಖಿಯಾದವು. ಈ ಪಂದ್ಯದಲ್ಲಿ ಟಾಸ್​ ಗೆದ್ದ ಪಾಕಿಸ್ತಾನದ ನಾಯಕ ಬಾಬರ್​ ಅಜಂ(Babar Azam) ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ 182 ರನ್​ಗಳ ಟಾರ್ಗೆಟ್​ ನೀಡಿತು. ಈ ಮೊತ್ತ ಬೆನ್ನಟ್ಟಿದ ಪಾಕಿಸ್ತಾನ ತಂಡವು 19.5 ಓವರ್​ಗೆ 5 ವಿಕೆಟ್​ ನಷ್ಟಕ್ಕೆ 182 ರನ್​ ಗಳಿಸುವ ಮೂಲಕ ಭಾರತದ ಪರ ಜಯ ದಾಖಲಿಸಿತು.

ಉತ್ತಮ ಬ್ಯಾಟಿಂಗ್ ಮಾಡಿದ ರಿಜ್ವಾನ್​:

182 ರನ್ ಗಳ ಟಾರ್ಗೆಟ್​ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಭಾರತ ಆರಂಭಿಕ ಆಘಾತ ನೀಡಿತು. ರವಿ ಬಿಷ್ನೋಯ್​ ಪಾಕ್​ ನಾಯಕ ಬಾಬರ್​ ಅಜಂ ಅವರನ್ನು 14 ರನ್ ಗೆ ಔಟ್​ ಮಾಡಿದರು. ಬಳಿಕ ಬಂದ ಫಖರ್ ಜಮಾನ್ 13 ರನ್ ಗಳಿಸಿ ಔಟ್​ ಆದರು. ಆದರೆ 4ನೇ ವಿಕೆಟ್​ ಗೆ ಉತ್ತಮ ಜೊತೆ ಆಟ ಆಡಿದ ಮೊಹಮ್ಮದ್ ರಿಜ್ವಾನ್​ 71 ರನ್ ಮತ್ತು ಮೊಹಮ್ಮದ್ ನವಾಜ್  42 ರನ್​ ಮತ್ತು ಖುಷ್ದಿಲ್ ಶಾ 14 ರನ್​ ಮತ್ತು ಆಸೀಫ್ ಅಲಿ 16 ರನ್ ಗಳಿಸುವ ಮೂಲಕ ತಂಡವು ಜಯ ಗಳಿಸಲು ಸಹಾಯಕರಾದರು.

ಸಂಘಟಿತ ಬೌಲಿಂಗ್​ ದಾಳಿ ಮಾಡಿದ ಭಾರತೀಯರು:

ಇನ್ನು, ಭಾರತೀಯ ಬೌಲರ್​ಗಳು ಸಂಘಟಿತ ದಾಳಿ ಮಾಡಿದರು. ಭಾರತ ಪರ ಭುವನೇಶ್ವರ್ ಕುಮಾರ್, ರವಿ ಬಿಷ್ನೋಯ್​, ಹಾರ್ದಿಕ್ ಪಾಂಡ್ಯ, ಅರ್ಷದೀಪ್‌ ಸಿಂಗ್‌ ಮತ್ತು ಚಹಾಲ್​ ತಲಾ 1 ವಿಕೆಟ್​ ಪಡೆದರು. ಆದರೂ ಪಾಕಿಸ್ತಾನ ತಂಡದ ಬ್ಯಾಟ್ಸ್​ಮನ್​ಗಳನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಲಿಲ್ಲ.

ಕೊಹ್ಲಿ ಅರ್ಧಶತಕ ವ್ಯರ್ಥ:

ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 181 ರನ್​ ಗಳಿಸಿತು. ಭಾರತದ ಪರ ಆರಂಭಿಕರಾಗಿ ರೋಹಿತ್​ ಮತ್ತು ರಾಹುಲ್​ ಉತ್ತಮವಾಗಿ ಬ್ಯಾಟ್​ ಬೀಸಿದರು. ರೋಹಿತ್ ​20 ಬೌಲ್​ಗೆ 2 ಸಿಕ್ಸ್ 1 ಪೋರ್​ ನೆರವಿನಿಂದ 28 ರನ್, ಕೆಎಲ್ ರಾಹುಲ್​ 16 ಬೌಲ್​ಗೆ 2 ಸಿಕ್ಸ್ ಮತ್ತು 3 ಬೌಂಡರಿ ನೆರವಿನಿಂದ 28 ರನ್ ಗಳಿಸಿಸಿದರು. ಉಳಿದಂತೆ ಸೂರ್ಯ ಕುಮಾರ್​ ಯಾದವ್​ 13 ರನ್, ರಿಷಭ್ ಪಂತ್​ 2 ಫೊರ್​ ಸಿಡಿಸಿ 14 ರನ್, ಹಾರ್ದಿಕ್​ ಪಾಂಡ್ಯ 0 ರನ್​, ದೀಪಕ್​ ಹೂಡಾ 16 ರನ್ ಮತ್ತು ಆಕರ್ಷಕ ಅರ್ಧಶತಕ ಸಿಡಿಸಿದ ಕೊಹ್ಲಿ 60 ರನ್​ ಗಳಿಸಿ ಮಿಂಚಿದರು.

ಇದನ್ನೂ ಓದಿ: Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

IND vs PAK ತಂಡ:

ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌, ರವಿ ಬಿಷ್ಣೋಯ್‌.

ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ.
Published by:shrikrishna bhat
First published: