India vs Pakistan Asia Cup 2022: ಆಕರ್ಷಕ ಅರ್ಧಶತಕ ಸಿಡಿಸಿದ ವಿರಾಟ್​ ಕೊಹ್ಲಿ, ಉತ್ತಮ ಮೊತ್ತದತ್ತ ಟೀಂ ಇಂಡಿಯಾ

IND vs PAK Asia Cup 2022: ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡುತ್ತಿವೆ. ಈಗಾಗಲೇ ಟಾಸ್​ ಗೆದ್ದಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಂ ಅವರು ಮೊಲದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ.

IND vs PAK

IND vs PAK

  • Share this:
ಏಷ್ಯಾ ಕಪ್​ 2022ರ (Asia Cup 2022) ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ (India vs Pakistan) ತಂಡಗಳು ಸೆಣಸಾಡುತ್ತಿವೆ. ಈಗಾಗಲೇ ಟಾಸ್​ ಗೆದ್ದಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಂ (Babar Azam) ಅವರು ಮೊಲದು ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಮೊದಲು ಬ್ಯಾಟಿಂಗ್​ ಆರಂಭಿಸುವ ಭಾರತ ತಂಡವು ಪವರ್​ ಪ್ಲೇ ಓವರ್ ಗಳಲ್ಲಿ ಉತ್ತಮವಾಗಿ ಆಟವಾಡಿದ ಭಾರತದ ಆರಂಭಿಕರಾದ ಕೆಎಲ್ ರಾಹುಲ್ ಮತ್ತು ನಾಯಕ ರೋಹಿತ್ ಶರ್ಮಾ 50 ರನ್​ಗಳ ಜೊತೆಯಾಟವಾಡಿದರು. ಆದರೆ ಇಬ್ಬರು ಸಹ ಒಬ್ಬರ ಬೆನ್ನ ಹಿಂದೆ ಒಬ್ಬರಂತೆ ವಿಕೆಟ್​ ಒಪ್ಪಿಸಿ ಪೆವೆಲಿಯನ್​ ಸೇರಿದ್ದಾರೆ.

ಆಕರ್ಷಕ ಅರ್ಧಶತಕ ಸಿಡಿಸಿದ ವಿರಾಟ್​ ಕೊಹ್ಲಿ:

ಒನ್​ ಡೌನ್​ಗೆ ಬ್ಯಾಟಿಂಗ್​ಗೆ ಆಗಮಿಸಿದ ವಿರಾಟ್​ ಕೊಹ್ಲಿ, ಒಂದೆಡೆ ವಿಕೆಟ್​ಗಳು ಪತನವಾಗುತ್ತಿದ್ದರೂ, ಉತ್ತಮ ಬ್ಯಾಟಿಂಗ್​ ಮಾಡುವ ಮೂಲಕ ಆಕರ್ಷಕ ಅರ್ಧ ಶತಕ ಸಿಡಿಸಿದರು. ಈ ಮೂಲಕ ತಂಡದ ಮೊತ್ತ ಹೆಚ್ಚಿಸುವಲ್ಲಿ ಕೊಹ್ಲಿ ಇಂದು ಉತ್ತಮ ಕೊಡಿಗೆ ನೀಡಿದರು. ಇವರ ಜೊತೆ ಸದ್ಯ ದೀಪಕ್​ ಹೂಡ ಸಹ ಅಬ್ಬರದ ಬ್ಯಾಟಿಂಗ್​ ಮಾಡುತ್ತಿದ್ದಾರೆ.

ಉತ್ತಮವಾಗಿ ಬ್ಯಾಟಿಂಗ್​ ಮಾಡುತ್ತಿದ್ದ ರೋಹಿತ್ ​20 ಬೌಲ್​ಗೆ 2 ಸಿಕ್ಸ್ 1 ಪೋರ್​ ನೆರವಿನಿಂದ 28 ರನ್ ಗಳಿಸಿ ಶಾದಾಬ್ ಖಾನ್ ಗೆ ವಿಕೆಟ್​ ಒಪ್ಪಿಸಿದರು. ರೋಹಿತ್​ ಜೊತೆ ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್​ 16 ಬೌಲ್​ಗೆ 2 ಸಿಕ್ಸ್ ಮತ್ತು 3 ಬೌಂಡರಿ ನೆರವಿನಿಂದ 28 ರನ್ ಗಳಿಸಿ ಹ್ಯಾರಿಸ್ ರೌಫ್ ಗೆ ಔಟ್​ ಆಗಿದ್ದಾರೆ.

ಆರಂಭಿಕರ ನಂತರ ಬ್ಯಾಟಿಂಗ್​ಗೆ ಬಂದ ಸೂರ್ಯ ಕುಮಾರ್​ ಯಾದವ್​ 13 ರನ್​ಗೆ ಮೊಹಮ್ಮದ್ ನವಾಜ್​ಗೆ ವಿಕೆಟ್​ ಒಪ್ಪಿಸಿದ್ದಾರೆ. ಇದರಿಂದಾಗಿ ಭಾರತದ 3ನೇ ವಿಕೆಟ್​ ಪತನವಾಗಿದೆ. ಟೀಂ ಇಂಡಿಯಾದ 4ನೇ ವಿಕೆಟ್​ ಪತನವಾಗಿದ್ದು, ಉತ್ತಮವಾಗಿ ಆಡುತ್ತಿದ್ದ ರಿಷಭ್ ಪಂತ್​ 2 ಫೊರ್​ ಸಿಡಿಸಿ 14 ರನ್​ ಗಳಿಸಿ ಶಾದಾಬ್ ಖಾನ್ ಅವರಿಗೆ ವಿಕೆಟ್​ ಒಪ್ಪಿಸಿದರು. ಟೀಂ ಇಂಡಿಯಾದ ಪವರ್​ ಹಿಟ್ಟರ್ ಆಗಿದ್ದ ಹಾರ್ದಿಕ್​ ಪಾಂಡ್ಯ ವಿಕೆಟ್​ ಪತನವಾಗಿದೆ. ಮೊಹಮ್ಮದ್ ಹಸ್ನೈನ್ ಬೌಲ್​ಗೆ ಕ್ಯಾಚ್​ ನೀಡಿ ಶ್ಯೂನ್​ಕ್ಕೆ ಔಟ್​ ಆದರು.

ಇದನ್ನೂ ಓದಿ: Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

ಪಾಕಿಸ್ತಾನದ ಪರ ಸಂಘಟಿತ ಬೌಲಿಂಗ್ ದಾಳಿ:

ಪಾಕಿಸ್ತಾನದ ಪರ ಮೊಹಮ್ಮದ್ ನವಾಜ್ 4 ಓವರ್​ ಮಾಡಿ 25 ರನ್​ ನೀಡಿ 1 ವಿಕೆಟ್​ ಪಡೆದರು. ಉಳಿದಂತೆ ಶಾದಾಬ್ ಖಾನ್ 4 ಓವರ್​ಗೆ 31 ರನ್​ ನೀಡಿ 2 ವಿಕೆಟ್ ಪಡೆದು ಟೀಂ ಇಂಡಿಯಾ ರನ್​ ವೇಗಕ್ಕೆ ಕಡಿವಾಣ ಹಾಕಿದರು.

IND vs PAK ತಂಡ:

ಭಾರತ ತಂಡ: ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ದೀಪಕ್‌ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ಭುವನೇಶ್ವರ್‌ ಕುಮಾರ್‌, ಅರ್ಷದೀಪ್‌ ಸಿಂಗ್‌, ಯುಜ್ವೇಂದ್ರ ಚಹಲ್‌, ರವಿ ಬಿಷ್ಣೋಯ್‌.

ಇದನ್ನೂ ಓದಿ: IND vs PAK Asia Cup 2022: ಟಾಸ್​ ಗೆದ್ದ ಟೀಂ ಪಾಕಿಸ್ತಾನ, ತಂಡದಲ್ಲಿ ಮಹತ್ವದ ಬದಲಾವಣೆ; ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11


ಪಾಕಿಸ್ತಾನ ತಂಡ: ಮೊಹಮ್ಮದ್ ರಿಜ್ವಾನ್, ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಶಾದಾಬ್ ಖಾನ್, ಆಸಿಫ್ ಅಲಿ, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ಮೊಹಮ್ಮದ್ ಹಸ್ನೈನ್, ನಸೀಮ್ ಶಾ.

Published by:shrikrishna bhat
First published: