Asia Cup 2022: ಭಾರತ-ಪಾಕ್​ ಪಂದ್ಯಕ್ಕೆ ಹೇಗಿರಲಿದೆ ಟೀಂ ಇಂಡಿಯಾ ಸಂಭಾವ್ಯ ತಂಡ

ಏಷ್ಯಾ ಕಪ್​ 2022ರಲ್ಲಿ ಪಾಕ್​ ಎದುರು ಕಣಕ್ಕಿಳಿಯಲಿರುವ ಭಾರತದ ಆಟಗಾರರ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದೆ. ಪಾಕ್​ ವಿರುದ್ಧ ಕಣಕ್ಕಿಳಿಯಲಿರುವ ಟೀಂ ಇಂಡಿಯಾದ ಸಂಭಾವ್ಯ ತಂಡ ಈ ರೀತಿ ಇರಲಿದೆ ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಈ ಬಾರಿ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಶ್ರೀಲಂಕಾದ ಆಂತರಿಕ ಬಿಕ್ಕಟ್ಟಿನಿಂದಾಗಿ ಟೂರ್ನಿಯನ್ನು ಈಗಾಗಲೇ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದೆ. ಇದರ ನಡುವೆ ಇದೀಗ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಈಗಾಗಲೇ ಪ್ರಕಟವಾಗಿರು ವೇಳಾಪಟ್ಟಿಯ ಪ್ರಕಾರ ಭಾರತ ಮೊದಲ ಪಂದ್ಯದಲ್ಲಿ ಪಾಕಿಸ್ತಾನ (Pakistan) ತಂಡವನ್ನು ಎದುರಿಸಲಿದ್ದು, ಈ ಪಂದ್ಯದ ಮೇಲೆ ಹೆಚ್ಚಿನ ನಿರೀಕ್ಷೆಗಳಿವೆ. ಭಾರತ ಮತ್ತು ಪಾಕ್ (IND vs PAK) ​ ಪಂದ್ಯವು ಆಗಸ್ಟ್ 28ರಂದು ನಡೆಯಲಿದ್ದು, ಈಗಾಗಲೇ ಆಯ್ಕೆ ಆಗಿರುವ ತಂಡದಲ್ಲಿಯೇ ಪಾಕ್​ ಎದುರು ಯಾವೆಲ್ಲಾ ಆಟಗಾರರು ಕಣಕ್ಕಿಳಿಯಲಿದ್ದಾರೆ ಎಂದು ನೊಡೋಣ ಬನ್ನಿ.

ಹೇಗಿರಲಿದೆ ಪಾಕ್​ ಎದುರು ಭಾರತ ತಂಡ:

ಹೌದು, ಈಗಾಗಲೇ ಎಲ್ಲಡೆ ಏಷ್ಯಾ ಕಪ್​ 2022ರ ಮೇಲೆ ನಿರೀಕ್ಷೆ ಹೆಚ್ಚಿದೆ. ಈಗಾಗಲೇ ಏಷ್ಯಾ ಕಪ್​ಗೆ ಭಾರತ ತಂಡವನ್ನು ಪ್ರಕಟಿಸಿದ್ದು, ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ಹಾಗೂ ಕನ್ನಡಿಗ ಕೆಎಲ್ ರಾಹುಲ್ ಅವರನ್ನು ಉಪ ನಾಯಕರನ್ನಾಗಿ ಬಿಸಿಸಿಐ ಆಯ್ಕೆ ಮಾಡಿದೆ. ಇದರ ನಡುವೆ ಈಗಾಗಲೇ ಸೋಶಿಯಲ್​ ಮೀಡಿಯಾದಲ್ಲಿ ಪಾಕ್​ ಎದುರು ಕಣಕ್ಕಿಳಿಯಲಿರುವ ಭಾರತದ ಆಟಗಾರರ ಕುರಿತು ಸಾಕಷ್ಟು ಚರ್ಚೆಗಳು ಆಗುತ್ತಿದೆ. ಪಾಕ್​ ವಿರುದ್ಧ ಕಣಕ್ಕಿಳಿಯಲಿರುವ ಟೀಂ ಇಂಡಿಯಾದ ಸಂಭಾವ್ಯ ತಂಡ ನೋಡುವುದಾದರೆ,

ಪಾಕ್​ ಎದುರು ಕಣಕ್ಕಿಳಿಯಲಿರುವ ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉ.ನಾ), ವಿರಾಟ್ ಕೊಹ್ಲಿ, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ಯುಜ್ವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ಗೆ ಟೀಂ ಇಂಡಿಯಾ ಪ್ರಕಟ, ಕನ್ನಡಿಗನಿಗೆ ಉಪ ನಾಯಕನ ಪಟ್ಟ

ಓಪನರ್​ ಆಗಿ ನಾಯಕ ಮತ್ತು ಉಪನಾಯಕ:

ಸದ್ಯ ಆಯ್ಕೆ ಆದವರಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಉಪ ನಾಯಕ ಕೆಎಲ್ ರಾಹುಲ್ ಅವರು ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಾಕ್​ ವಿರುದ್ಧವೂ ಇವರಿಬ್ಬರೇ ಇನ್ನಿಂಗ್ಸ್ ಆರಂಭಿಸಬಹುದು. ಹೀಗಾಗಿ ಈ ಜೋಡಿಯ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ಬಳಿಕ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಮತ್ತು ಜಡೇಜಾ ಕ್ರಮವಾಗಿ ಬ್ಯಾಟಿಂಗ್​ ಮಾಡುವ ಸಾಧ್ಯತೆ ಇದೆ. ಭಾರತದ ಪರ 7ರ ಕ್ರಮಾಂಕದ ವರೆಗೆ ಬ್ಯಾಟಿಂಗ್ ಉತ್ತಮವಾಗಿದ್ದು, ದೊಡ್ಡ ಮೊತ್ತದ ನಿರೀಕ್ಷೆಯಿದೆ.

ಹೇಗಿರಲಿದೆ ಬೌಲಿಂಗ್​:

ಇನ್ನು, ಬೌಲಿಂಗ್ ವಿಷಯಕ್ಕೆ ಬಂದಲ್ಲಿ ಅನುಭವಿ ಬೌಲರ್ ಭುವನೇಶ್ವರ್ ಕುಮಾರ್ ಬೌಲಿಂಗ್ ವಿಭಾಗದ ಪ್ರಮುಖ ಆಟಗಾರರಾಗಿದ್ದಾರೆ. ಇವರಲ್ಲದೇ ಚಹಾಲ್​ ಸಹ ಇವರಿಗೆ ಉತ್ತಮ ಸಾಥ್ ನೀಡುವ ಸಾಧ್ಯತೆ ಇದ್ದು, ಆಲ್​ ರೌಂಡರ್​ ಗಳಾದ ಪಅಂಡ್ಯ ಮತ್ತು ಜಡೇಜಾ ಮದ್ಯಮ ಕ್ರಮಾಂಕದಲ್ಲಿ ರನ್​ಗಳ ನಿಯಂತ್ರಣ ಮಾಡಬೇಕಿದೆ.

ಇದನ್ನೂ ಓದಿ: Asia Cup 2022: ಸ್ಟಾರ್​ ಆಟಗಾರಿನಿಗಿಲ್ಲ ಟೀಂ ಇಂಡಿಯಾದಲ್ಲಿ ಸ್ಥಾನ, BCCI ವಿರುದ್ಧ ಅಭಿಮಾನಿಗಳ ಬೇಸರ

ಏಷ್ಯಾ ಕಪ್​ 2022ಗೆ ಆಯ್ಕೆ ಆಗಿರುವ ಟೀಂ ಇಂಡಿಯಾ ಆಟಗಾರರು:

ರೋಹಿತ್ ಶರ್ಮಾ (ನಾಯಕ), ಲೋಕೇಶ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್ ಅರ್ಷದೀಪ್ ಸಿಂಗ್, ಅವೇಶ್ ಖಾನ್.
Published by:shrikrishna bhat
First published: