IND vs PAK Asia Cup 2022: ನಾಳೆ ಭಾರತ-ಪಾಕ್​ ಪಂದ್ಯ, ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ

IND vs PAK Asia Cup 2022: ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿವೆ. ನಿಖರವಾಗಿ ಒಂದು ವಾರದ ನಂತರ, ಈ ಎರಡು ತಂಡಗಳು ಏಷ್ಯಾ ಕಪ್ 2022 ರಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ.

IND vs PAK

IND vs PAK

  • Share this:
ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸಲು ಸಿದ್ಧವಾಗಿವೆ. ನಿಖರವಾಗಿ ಒಂದು ವಾರದ ನಂತರ, ಈ ಎರಡು ತಂಡಗಳು ಏಷ್ಯಾ ಕಪ್ 2022 ರಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ನಡುವೆ ಗುಂಪು ಪಂದ್ಯ ನಡೆದಿತ್ತು. ಭಾರತವು 5 ವಿಕೆಟ್‌ಗಳಿಂದ ಜಯಗಳಿಸಿತು. A ಗುಂಪಿನ ಈ ಎರಡು ತಂಡಗಳೂ ಸೂಪರ್ 4 (Super 4) ಹಂತ ತಲುಪಿದ್ದರಿಂದ ಮತ್ತೊಮ್ಮೆ ಉಭಯ ತಂಡಗಳು ಮುಖಾಮುಖಿ ಆಗುತ್ತಿದೆ. ನಾಳೆ ಏಷ್ಯಾ ಕಪ್​ನ (Asia Cup) ಸೂಪರ್ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಣಸಾಡಲಿವೆ. ಕಳೆದ ಬಾರಿಯ ಸೋಲಿಗೆ ಪ್ರತ್ಯುತ್ತರವಾಗಿ ಕಂಬ್ಯಾಕ್ ಮಾಡಲು ಪಾಕ್​ ಸಿದ್ಧವಾಗಿದ್ದರೆ, ಇತ್ತ ಟೀಂ ಇಂಡಿಯಾ (Team India) ತನ್ನ ಹಳೆಯ ಲಯದಲ್ಲಿಯೇ ಗೆಲುವನ್ನು ಮುಂದುವರೆಸಿಕೊಂಡು ಹೋಗಲು ಸಿದ್ಧವಾಗಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಮತ್ತು ಪಿಚ್​ ವರದಿ ಹೇಗಿದೆ ನೋಡೋಣ ಬನ್ನಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: Virat Kohli: ಮಾಸ್ಕ್ ಹಾಕಿಕೊಂಡು ಅಭ್ಯಾಸ ಮಾಡಿದ ಕೊಹ್ಲಿ, ಇದನ್ನು ಯಾಕೆ ಬಳಸುತ್ತಾರೆ ಗೊತ್ತಾ?

ಅಲ್ಲದೇ ಟಾಸ್​ ಇಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಏಕೆಂದರೆ ಕಳೆದ ಪಂದ್ಯದಲ್ಲಿಯೂ ಟಾಸ್​ ಗೆದ್ದ ತಂಡವೇ ಜಯ ಗಳಿಸಿದೆ. ಜೊತೆಗೆ ಟಾಸ್​ ಗೆದ್ದ ನಾಯಕ ಚೇಸಿಂಗ್ ಆಯ್ಕೆ ಮಾಡುವುದರಿಂದ ಹೆಚ್ಚು ಲಾಭವಾಗಲಿದೆ. ಪ್ರಮುಖವಾಗಿ ನಾಳಿನ ಹವಾಮಾನ ಉತ್ತಮವಾಗಿದ್ದು, ಯಾವುದೇ ಮಳೆಯ ಮುನ್ಸೂಚನೆ ಇಲ್ಲವಾಗಿದೆ. ಕಳೆದ ಪಂದ್ಯ ನಡೆದ ಮೈದಾನದಲ್ಲಯೇ ನಾಳಿನ ಪಂದ್ಯ ಸಹ ನಡೆಯಲಿದ್ದು, ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

IND vs PAK ಹೆಡ್​ ಟು ಹೆಡ್​:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ.  ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 15 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 9 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಒಟ್ಟಾರೆಯಾಗಿ ಅಂಕಿಅಂಶಗಳ ಪ್ರಕಾರ ಭಾರತ ತಂಡ ಹೆಚ್ಚು ಬಲಿಷ್ಠವಾಗಿದೆ. ಆದರೆ ಪಾಕ್​ ಸಹ ಉತ್ತಮ ದಾಖಲೆ ಹೊಂದಿದ್ದು,  ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳುವ ಸಲುವಾಗಿ ನಾಳೆ ಕಣಕ್ಕಿಳಿಯಲಿದೆ.

ಇದನ್ನೂ ಓದಿ: Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಜಾಲಿ ಮೂಡ್​ನಲ್ಲಿ ರೋಹಿತ್​ ಪಡೆ, ವಿಡಿಯೋ ವೈರಲ್

IND vs PAK  ಸಂಭಾವ್ಯ ಪ್ಲೇಯಿಂಗ್ 11:

ಭಾರತ ಸಂಭಾವ್ಯ ತಂಡ: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್.

ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್, ಮೊಹಮ್ಮದ್ ರಿಜ್ವಾನ್, ಫಖರ್ ಜಮಾನ್, ಖುಷ್ದಿಲ್ ಶಾ, ಇಫ್ತಿಕರ್ ಅಹ್ಮದ್, ಆಸಿಫ್ ಅಲಿ, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾನವಾಜ್ ದಹಾನಿ.
Published by:shrikrishna bhat
First published: