India vs Pakistan: ಈ 5 ಕಾರಣಗಳಿಂದಲೇ ಪಾಕ್​ ಎದುರು ಸೋತ ಭಾರತ! ಅವ್ರೊಬ್ಬರಿಗೆ ಬೌಲಿಂಗ್​ ನೀಡದೇ ಎಡವಿದ್ರಾ ರೋಹಿತ್​?

ದುಬೈನಲ್ಲಿ ನಡೆದ ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 181 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೊನೆಯ ಓವರ್‌ನಲ್ಲಿ ಗುರಿ ಬೆನ್ನಟ್ಟಿತು. ಅದೇ ಸಮಯದಲ್ಲಿ, ಈ ಸೋಲಿನಲ್ಲಿ ಭಾರತ ತಂಡವು ಅನೇಕ ತಪ್ಪುಗಳನ್ನು ಮಾಡಿದೆ.

ಟೀಂ ಇಂಡಿಯಾ

ಟೀಂ ಇಂಡಿಯಾ

  • Share this:
ಒಂದು ಆಟ (Game) ಅಂದರೆ ಅಲ್ಲಿ ಗೆಲುವು (Win) , ಸೋಲು (Lose) ಎರಡು ಇರಲೇ ಬೇಕು. ಕ್ರೀಡೆಯಲ್ಲಿ ಒಬ್ಬ ತುಂಬಾ ಚೆನ್ನಾಗಿ ಆಡುತ್ತಾನೆ ಎಂದ ಮಾತ್ರಕ್ಕೆ ಆತನೇ ಸದಾ ಗೆಲ್ಲಬೇಕು ಎಂದರ್ಥ ಅಲ್ಲ. ಆಟ ಅಂದಮೇಲೆ ಸೋಲು, ಗೆಲುವು ಎರಡು ಇದ್ದೇ ಇರುತ್ತೆ. ಹೀಗೆ ಭಾನುವಾರ ರಾತ್ರಿ ನಡೆದ ಏಷ್ಯಾಕಪ್‌ನ ಸೂಪರ್-4  ಪಂದ್ಯದಲ್ಲಿ (Asia Cup Super - 4 Match) ಪಾಕಿಸ್ತಾನ (Pakistan) ತಂಡವು ಟೀಂ ಇಂಡಿಯಾವನ್ನು (India) ಸೋಲಿಸಿದೆ. ಏಷ್ಯಾ ಕಪ್​ ಸೂಪರ್​ 4 ಪಂದ್ಯಕ್ಕೂ ಮುನ್ನ ಪಾಕ್, ಭಾರತ ಮುಖಾಮುಖಿಯಾಗಿತ್ತು. ಈ ಪಂದ್ಯ ಕೂಡ ಸಾಕಷ್ಟು ರೋಚಕತೆಯಿಂದ ಕೂಡಿತ್ತು. ನಿನ್ನೆ ನಡೆದ ಪಂದ್ಯವೂ ತುಂಬಾ ಟೈಟ್​ ಆಗಿತ್ತು. ಕಡೆಯವರೆಗೂ ವಿಜಯಲಕ್ಷ್ಮಿ ಯಾರ ಕಡೆ ಇದ್ದಾಳೆ ಎಂಬುಂದು ಕನ್ಫೂಸ್​ ಆಗಿತ್ತು. ಕೊನೆಗೂ ಕಡೆ ಓವರ್​ನಲ್ಲಿ ಪಾಕ್ (Pakistan)  ಭಾರತ (India) ದ ಎದುರು ಗೆದ್ದು ಬೀಗಿತು. ಭಾರತ ಈ 5 ಕಾರಣಗಳಿಂದಲೇ ಪಾಕ್ ಎದುರು ಸೋತಿದೆ ಎಂದು ಕ್ರೀಡಾಭಿಮಾನಿಗಳು ಚರ್ಚೆ ಮಾಡುತ್ತಿದ್ದಾರೆ.

ದುಬೈನಲ್ಲಿ ನಡೆದ ಏಷ್ಯಾಕಪ್‌ನ ಸೂಪರ್-4 ಪಂದ್ಯದಲ್ಲಿ ಭಾರತವನ್ನು ಪಾಕಿಸ್ತಾನ 5 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 181 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಪಾಕಿಸ್ತಾನ ಕೊನೆಯ ಓವರ್‌ನಲ್ಲಿ ಗುರಿ ಬೆನ್ನಟ್ಟಿತು. ಅದೇ ಸಮಯದಲ್ಲಿ, ಈ ಸೋಲಿನಲ್ಲಿ ಭಾರತ ತಂಡವು ಅನೇಕ ತಪ್ಪುಗಳನ್ನು ಮಾಡಿದೆ. ಇಂದು ನಾವು ಭಾರತದ ಸೋಲಿಗೆ ಐದು ಕಾರಣಗಳನ್ನು ಹೇಳುತ್ತೇವೆ.

1) ದೀಪಕ್ ಹೂಡಾ ಬೌಲಿಂಗ್ ಮಾಡಬೇಕಿತ್ತು!

ನಿನ್ನೆ ನಡೆದ ಭಾರತ ಪಾಕಿಸ್ತಾನ ಪಂದ್ಯದಲ್ಲಿ ಭಾರತದ ಸೋಲಿಗೆ ದೀಪಕ್ ಹೂಡಾ ಬೌಲಿಂಗ್ ಮಾಡದೇ ಇರುವುದು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ವಾಸ್ತವವಾಗಿ ನಿನ್ನೆ ಭಾರತ ತಂಡವು ಕೇವಲ ಐದು ಬೌಲರ್‌ಗಳೊಂದಿಗೆ ಬೌಲಿಂಗ್ ಮಾಡಿದೆ. ಎಲ್ಲ ಬೌಲರ್‌ಗಳು ಪಾಕಿಸ್ತಾನದ ವಿರುದ್ಧ ಅಸಹಾಯಕರಾಗಿ ನೋಡುತ್ತಿದ್ದರು. ಆಗ ರೋಹಿತ್ ಶರ್ಮಾ ದೀಪಕ್ ಹೂಡಾ ಅವರನ್ನು ಬೌಲಿಂಗ್ ಮಾಡಲು ಕರೆತರುತ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ಅವರಿಗೆ ಬೌಲಿಂಗ್ ಮಾಡಲಿಲ್ಲ.

2) ನಿರ್ಣಾಯಕ ಹಂತದಲ್ಲಿ ಕ್ಯಾಚ್ ಕೈಬಿಟ್ಟ ಅರ್ಷದೀಪ್

ಪಂದ್ಯದ ನಿರ್ಣಾಯಕ ಹಂತದಲ್ಲಿ, ರವಿ ಬಿಷ್ಣೋಯ್ ಅವರ ಎಸೆತದಲ್ಲಿ ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್‌ಮನ್ ಆಸಿಫ್ ಅಲಿ ಹೊಡೆದ ಸರಳ ಕ್ಯಾಚ್​ ಅನ್ನು ಭಾರತದ ವೇಗದ ಬೌಲರ್ ಅರ್ಶ್‌ದೀಪ್ ಸಿಂಗ್ ಕೈಬಿಟ್ಟರು. ಅರ್ಷದೀಪ್ ಅವರ ಈ ಕ್ಯಾಚ್ ಬಿಟ್ಟಿದ್ದು ಪ್ರಮುಖ ಕಾರಣ ಅಂದರೆ ತಪ್ಪಾಗಲ್ಲ

ಇದನ್ನೂ ಓದಿ: ಟೀಂ ಇಂಡಿಯಾ ಎದುರು ಪಾಕಿಸ್ತಾನಕ್ಕೆ 5 ವಿಕೆಟ್​ಗಳ ಜಯ, ಕೊಹ್ಲಿ ಅರ್ಧಶತಕ ವ್ಯರ್ಥ

3)  ಮಂಜಿನ ಹನಿ

ದುಬೈನಲ್ಲಿ ನಡೆದ ಏಷ್ಯಾಕಪ್ ನ ಸೂಪರ್ ಫೋರ್ ಪಂದ್ಯದಲ್ಲೂ ಇಬ್ಬನಿ ಭಾರತವನ್ನು ಸಾಕಷ್ಟು ಕಾಡಿತ್ತು. ಇಬ್ಬನಿಯಿಂದಾಗಿ ಭಾರತದ ಬೌಲರ್‌ಗಳು ಸಾಕಷ್ಟು ತೊಂದರೆಗೆ ಸಿಲುಕಿದ್ದರು. ಅದೇ ಸಮಯದಲ್ಲಿ, ಪಾಕಿಸ್ತಾನದ ಬ್ಯಾಟ್ಸ್‌ಮನ್‌ಗಳು ಇದನ್ನು ತೀವ್ರವಾಗಿ ಬಳಸಿಕೊಂಡರು.

4) ಟಾಸ್​ ಸೋತ್ತಿದ್ದು ಒಂದು ಕಾರಣ!

ಏಷ್ಯಾಕಪ್‌ನ ಸೂಪರ್ ಫೋರ್‌ನಲ್ಲಿ ನಿನ್ನೆ ಪಾಕಿಸ್ತಾನ ವಿರುದ್ಧ ಭಾರತ ಟಾಸ್ ಸೋತಿರುವುದು ಸೋಲಿಗೆ ಪ್ರಮುಖ ಕಾರಣವಾಯಿತು. ಈ ಪಿಚ್‌ನಲ್ಲಿ ಭಾರತ ತಂಡವು ಮೊದಲು ಬೌಲಿಂಗ್ ಮಾಡುವ ಮೂಲಕ ರನ್ ಬೆನ್ನಟ್ಟಲು ಬಯಸಿತು, ಆದರೆ ಭಾರತ ತಂಡವು ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಲು ಮೈದಾನಕ್ಕೆ ಬರಬೇಕಾಯಿತು.

ಇದನ್ನೂ ಓದಿ: ಹರ್ಷಲ್-ಬುಮ್ರಾ ಇದೀಗ ಜಡೇಜಾ, ಟಿ20 ವಿಶ್ವಕಪ್‌ಗೂ ಮುನ್ನ ಟೀಂ ಇಂಡಿಯಾದಲ್ಲಿ ಹೆಚ್ಚಿದ ಟೆನ್ಶನ್

5) ಎಕ್ಸ್ಟ್ರಾ ರನ್​ ನೀಡಿದ್ದು

ಪಾಕಿಸ್ತಾನದಂತಹ ಬಲಿಷ್ಠ ತಂಡದ ವಿರುದ್ಧ 182 ರನ್‌ಗಳ ಗುರಿಯನ್ನು ಉಳಿಸಿಕೊಳ್ಳುವಾಗ, ಭಾರತದ ಬೌಲರ್‌ಗಳು ಇಂದು ಸಾಕಷ್ಟು ಹೆಚ್ಚುವರಿ ರನ್ ನೀಡಿದರು. ಇಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ಒಟ್ಟು 14 ಹೆಚ್ಚುವರಿ ರನ್ ಗಳನ್ನು ನೀಡಿದೆ. ಈ ಹೆಚ್ಚುವರಿ ರನ್‌ಗಳು ಇಂದು ಭಾರತ ತಂಡಕ್ಕೆ ಸಾಕಷ್ಟು ಹೊಡೆತ ನೀಡಿವೆ ಮತ್ತು ಅವರ ಸೋಲಿಗೆ ದೊಡ್ಡ ಕಾರಣವಾಗಿವೆ.
Published by:Vasudeva M
First published: