India vs Pakistan Asia cup 2022: ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ, ತಂಡದ ಪ್ರಮುಖ 2 ವಿಕೆಟ್​ ಪತನ

IND vs PAK: ಮೊದಲು ಬ್ಯಾಟಿಂಗ್​ ಆರಂಭಿಸಿರುವ ಪಾಕ್​ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಪಾಕ್​ ನಾಯಕ ಬಾಬರ್ ಅಜಂ ವಿಕೆಟ್​ ಪತನವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಿದೆ. ಅಲ್ಲದೇ ಇಂದು ಭಾರತ ಮತ್ತು ಪಾಕಿಸ್ತಾನ (IND vs PAK) ನಡುವೆ ಹೈವೋಲ್ಟೇಜ್​ ಮುಖಾಮುಖಿ ಆಗುತ್ತಿದೆ. ಈಗಾಗಲೇ ಪಂದ್ಯದ ಟಾಸ್​ ಆಗಿದ್ದು, ಟಾಸ್​ ಗೆದ್ದ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ  ( Rohith Sharma) ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದು, ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್​ ಮಾಡಲಿದೆ. ಈಗಾಗಲೇ ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್​ ಪ್ರಮುಖವಾಗಿದೆ. ಈ ವೇಳೆ ಮೊದಲು ಬ್ಯಾಟಿಂಗ್​ ಆರಂಭಿಸಿರುವ ಪಾಕ್​ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿದೆ. ಪಾಕ್​ ನಾಯಕ ಬಾಬರ್ ಅಜಂ ವಿಕೆಟ್​ ಪತನವಾಗಿದೆ.

ಬಾಬರ್​ ಅಜಂ ವಿಕೆಟ್​ ತೆಗೆದ ಭುವಿ:

ಪಂದ್ಯದ ಆರಂಭದಿಂದಲೂ ಉತ್ತಮ ಸ್ಪೆಲ್​ ಮಾಡಿದ ಭುವನೇಶ್ವರ್ ಕುಮಾರ್​ ಪಾಕ್​​ ತಂಡದ ಪ್ರಮುಖ ವಿಕೆಟ್​ ಉರುಳಿಸಿದ್ದಾರೆ. ಪಾಕ್​ ನಾಯಕ ಬಾಬರ್​ ಅಜಂ ಅವರು ಕೇವಲ 10 ರನ್ ಗಳಿಸಿ ಭುವನೇಶ್ವರ್ ಕುಮಾರ್ ಓವರ್​ ನಲ್ಲಿ ಅರ್ಷದೀಪ್ ಸಿಂಗ್​ಗೆ ಕ್ಯಾಚ್​ ನೀಡಿ ಔಟಾದರು. ಈ ಮೂಲಕ ಪಾಕ್​ ಮೊದಲ ವಿಕೆಟ್​ ಪತನವಾಯಿತು.

ಇದೀಗ ಮತ್ತೊಂದು ಪಾಕ್​ ವಿಕೆಟ್​ ಉರುಳಿಸುವಲ್ಲಿ ಆವೇಶ್​ ಖಾನ್​ ಯಶಸ್ವಿಯಾಗಿದ್ದಾರೆ. ಒನ್​ ಡೌನ್​ ಆಟಗಾರನಾಗಿ ಕಣಕ್ಕಿಳಿದಿದ್ದ ಪಾಕ್​ನ ಫಖರ್ ಜಮಾನ್ ​ಸಹ 6 ಬೌಲ್​ ಎದುರಿಸಿ 2 ಆಕರ್ಷಕ ಫೋರ್​ ಸಿಡಿಸಿ 10 ರನ್​ ಗಳಿಸಿ ಉತ್ತಮವಾಗಿ ಆಟವಾಡುತ್ತಿದ್ದರು. ಆದರೆ ಆವೇಶ್​ ಖಾನ್ ಎಸೆತದಲ್ಲಿ ದಿನೇಶ್​ ಕಾರ್ತಿಕ್​ಗೆ ಕ್ಯಾಚ್​ ನೀಡಿ ಪೆವಿಲಿಯನ್​ ಸೇರಿದ್ದಾರೆ. ಈ ಮೂಲಕ ಪಂದ್ಯದ ಆರಂಭದಲ್ಲಿಯೇ ಪಾಕ್​ ಬ್ಯಾಟ್​ಮನ್ ಮೇಲೆ ಟೀಂ ಇಂಡಿಯಾ ಹಿಡಿತ ಸಾಧಿಸಿದೆ.

ಇದನ್ನೂ ಓದಿ: Asia Cup 2022 IND vs PAK: ಟಾಸ್​ ಗೆದ್ದ ಟೀಂ ಇಂಡಿಯಾ, ತಂಡದಲ್ಲಿ ಮಹತ್ವದ ಬದಲಾವಣೆ; ಹೇಗಿದೆ ಉಭಯ ತಂಡಗಳ ಪ್ಲೇಯಿಂಗ್​ 11

ಸಂಕಷ್ಟದಲ್ಲಿ ಪಾಕ್​:

ಸದ್ಯ ಪಾಕ್​ ಬಾಬರ್​ ಅಜಂ ಮತ್ತು ಫಖರ್ ಜಮಾನ್ ಇಬ್ಬರು ಪ್ರಮುಖ ಆಟಗಾರರು ಔಟ್​ ಆಗುವ ಮೂಲಕ ಸಂಕಷ್ಟಕ್ಕೆ ಸಿಲುಕಿದೆ. ಈ ಮೂಲಕ ತಂಡಕ್ಕೆ ಇದೀಗ ರಿಜ್ವಾನ್ ಮತ್ತು ಇಫ್ತಿಕರ್ ಅಹ್ಮದ್ ಆಸರೆಯಾಗಿದ್ದಾರೆ. ಸದ್ಯ 8 ಓವರ್​ಗೆ 2 ವಿಕೆಟ್​ ನಷ್ಟಕ್ಕೆ  59 ರನ್ ಗಳಿಸಿದೆ.

ಭಾರತ-ಪಾಕ್​ ಹೆಡ್​ ಟು ಹೆಡ್​:

ಏಷ್ಯಾಕಪ್ ನಲ್ಲಿ ಈ ಎರಡು ತಂಡಗಳು ಇದುವರೆಗೆ 14 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 8 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ 5 ಬಾರಿ ಗೆದ್ದಿದೆ. ಇನ್ನೊಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಎರಡು ತಂಡಗಳು ಟಿ20ಯಲ್ಲಿ 8 ಬಾರಿ ಮುಖಾಮುಖಿ ಆಗಿದ್ದರೆ, ಭಾರತ 6 ಬಾರಿ ಗೆದ್ದಿದ್ದರೆ, ಪಾಕಿಸ್ತಾನ 2 ಬಾರಿ ಮಾತ್ರ ಗೆದ್ದಿದೆ. ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದವು. ಪಾಕಿಸ್ತಾನ 10 ವಿಕೆಟ್‌ಗಳಿಂದ ಗೆದ್ದಿತು.

ಇದನ್ನೂ ಓದಿ: Asia Cup 2022: ಪಾಕ್​ ಪಂದ್ಯಕ್ಕೂ ಮುನ್ನ ಸ್ನೇಹಿತನಿಗೆ ವಿಶೇಷ ಸಂದೇಶ ಕಳುಹಿಸಿದ ಎಬಿಡಿ, ಸ್ಪೆಷಲ್ ರೆಕಾರ್ಡ್​ಗೆ ಕೊಹ್ಲಿ ಸಿದ್ಧ

IND vs PAK ಪ್ಲೇಯಿಂಗ್​ 11:

ಭಾರತ ತಂಡದ ಪ್ಲೇಯಿಂಗ್​ 11: ರೋಹಿತ್ ಶರ್ಮಾ, ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್,ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ದಿನೇಶ್ ಕಾರ್ತಿಕ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಾಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್.

ಪಾಕಿಸ್ತಾನ ತಂಡದ ಪ್ಲೇಯಿಂಗ್​ 11: ಬಾಬರ್ ಅಜಮ್ (ನಾಯಕ), ಫಖರ್ ಜಮಾನ್, ರಿಜ್ವಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಕುಶ್ ದಿಲ್ ಶಾ, ಶಾದಾಬ್ ಖಾನ್, ಹರೀಶ್ ರವೂಫ್, ನಸೀಮ್ ಶಾ, ಮೊಹಮ್ಮದ್ ನವಾಜ್, ದಹಾನಿ.
Published by:shrikrishna bhat
First published: