IND vs HK Asia Cup 2022: ಪಂದ್ಯ ಸೋತರೂ ಕ್ರಿಕೆಟ್​ ಅಭಿಮಾನಿಗಳ ಮನ ಗೆದ್ದ ಹಾಂಗ್​ಕಾಂಗ್​ ಉಪನಾಯಕ, ಮೈದಾನದಲ್ಲಿಯೇ ಗೆಳತಿಗೆ ಪ್ರಪೋಸ್​ ಮಾಡಿದ ಕ್ರಿಕೆಟಿಗ

IND vs HK: ಭಾರತ ಮತ್ತು ಹಾಂಗ್ ಕಾಂಗ್ ಪಂದ್ಯದ ವೇಳೆ ಆಟಗಾರನೊಬ್ಬ ಕ್ರೀಡಾಂಗಣದಲ್ಲಿ ತುಂಬಾ ರೋಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟಗಾರ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್​ 2022ರ (Asia Cup 2022) 4ನೇ ಪಂದ್ಯದಲ್ಲಿ ಭಾರತ ಮತ್ತು ಹಾಂಗ್​ ಕಾಂಗ್ (IND vs HK)​ ತಂಡಗಳು ಸೆಣಸಾಡಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡವು 20 ಓವರ್​ಗಳಿಗೆ 2 ವಿಕೆಟ್​ ನಷ್ಟಕ್ಕೆ 192 ರನ್ ಗಳಿಸಿತು. ಈ ಮೊತ್ತ ಬೆನ್ನಟ್ಟಿದ ಹಾಂಗ್​ಕಾಂಗ್​ ತಂಡವು 20 ಓವರ್​ ಗಳಲ್ಲಿ 5 ವಿಕೆಟ್​ ನಷ್ಟಕ್ಕೆ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಹೀಗಾಗಿ ಭಾರತ ತಂಡವು 40 ರನ್ ಗಳ ಜಯ ದಾಖಲಿಸುವ ಮೂಲಕ ಸೂಪರ್​ 4 ಹಂತಕ್ಕೆ ತಲುಪಿದೆ. ಆದರೆ ಈ ಪಂದ್ಯದಲ್ಲಿ ಒಂದು ವಿಶೇಷ ಘಟನೆಯೊಂದು ನಡೆದಿದೆ. ಐಪಿಎಲ್ ವೇಳೆ ದೀಪಕ್ ಚಹಾರ್ (Deepak Chahar) ಸ್ಟೇಡಿಯಂನಲ್ಲಿ ರೊಮ್ಯಾಂಟಿಕ್ ಆಗಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದರು. ಅವರ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದೀಗ ಹಾಂಗ್​ಕಾಂಗ್​ನ (Hong Kong) ಆಟಗಾರ ಒಬ್ಬ ದೀಪಕ್ ಚಹಾರ್ ರೀತಿಯಲ್ಲಿಯೇ ಕ್ರೀಡಾಂಗಣದಲ್ಲಿ ರೊಮ್ಯಾಂಟಿಕ್ ಆಗಿ ಗೆಳತಿಗೆ ಪ್ರಪೋಸ್​ ಮಾಡಿದ್ದಾರೆ. ಇದರ ವಿಡಿಯೋಗಳು ಮತ್ತು ಫೋಟೋಗಳು ಸಖತ್​ ವೈರಲ್ ಆಗಿವೆ.

ಕ್ರೀಡಾಂಗಣದಲ್ಲಿ ಗೆಳತಿಗೆ ಪ್ರಪೋಸ್​ ಮಾಡಿದ ಹಾಂಗ್​ಕಾಂಗ್​ ಆಟಗಾರ:

ಏಷ್ಯಾಕಪ್‌ನ ಪಂದ್ಯಗಳು ಪ್ರಸ್ತುತ ಯುಎಇಯಲ್ಲಿ ನಡೆಯುತ್ತಿವೆ. ಭಾರತ ಮತ್ತು ಹಾಂಗ್​​ಕಾಂಗ್ ಪಂದ್ಯದ ವೇಳೆ ಆಟಗಾರನೊಬ್ಬ ಕ್ರೀಡಾಂಗಣದಲ್ಲಿ ತುಂಬಾ ರೋಮ್ಯಾಂಟಿಕ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಆಟಗಾರ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದು, ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಪಂದ್ಯ ಸೋತರೂ ಹಾಂಗ್​ಕಾಂಗ್​ ಉಪನಾಯಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ. ಉಪನಾಯಕ ಕಿಂಚಿತ್ ಶಾ ಕ್ರೀಡಾಂಗಣದಲ್ಲಿ ತನ್ನ ಗೆಳತಿಗೆ ಪ್ರಪೋಸ್ ಮಾಡಿದ್ದಾರೆ.

ಅವರ ವಿಡಿಯೋ ಇದೀಗ ವೈರಲ್ ಅಗಿದೆ. ಇದಲ್ಲದೇ ಈ ದೃಶ್ಯಗಳನ್ನು ನೋಡಿದ ವಿರಾಟ್ ಕೊಹ್ಲಿ ಸಹ ಸಂತಸಗೊಂಡಿದ್ದಾರೆ. ಕಿಂಚಿತ್ ಶಾ ತಂದೆ ವಜ್ರದ ವ್ಯಾಪಾರಿ. ಕ್ರಿಕೆಟ್ ಜೊತೆಗೆ ಅವರು ತಮ್ಮ ತಂದೆಗೆ ವ್ಯಾಪಾರದಲ್ಲಿ ಸಹಾಯ ಮಾಡುತ್ತಾರೆ. ಶಾ 4 ವರ್ಷಗಳ ಕಾಲ ಕ್ಲಬ್ ಕ್ರಿಕೆಟ್ ಆಡಿದ ನಂತರ ಹಾಂಗ್ ಕಾಂಗ್ ತಂಡವನ್ನು ಸೇರಿಕೊಂಡಿದ್ದಾರೆ. 2018ರ ಏಷ್ಯಾಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.

ಇದನ್ನೂ ಓದಿ: David Warner: ಮತ್ತೊಮ್ಮೆ ಭಾರತೀಯರ ಹೃದಯ ಗೆದ್ದ ವಾರ್ನರ್​, ಈ ಬಾರಿ ಅಂಥದ್ದೇನು​ ಮಾಡಿದ್ದಾರೆ ನೋಡಿ!

ಭಾರತ ಮೂಲದ ಕಿಂಚಿತ್ ಶಾ:

ಕಿಂಚಿತ್ ಶಾ ಮುಂಬೈನಲ್ಲಿ ಜನಿಸಿದರು. ಅವರ ತಂದೆ ಕೂಡ ಕ್ರಿಕೆಟ್ ಆಡುತ್ತಿದ್ದರು. ಅವರು ಮೂರು ತಿಂಗಳ ಮಗುವಾಗಿದ್ದಾಗ, ಅವರ ತಂದೆ ಕುಟುಂಬದೊಂದಿ ಹಾಂಗ್​​ಕಾಂಗ್​ ಗೆ ಹೋಗಿದ್ದರು. ತಂದೆ ಕ್ರಿಕೆಟ್ ಆಡುವುದನ್ನು ನೋಡಿ 10ನೇ ವಯಸ್ಸಿನಲ್ಲಿ ಶಾ ಲೆದರ್ ಬಾಲ್ ಕ್ರಿಕೆಟ್ ನಲ್ಲಿ ತೊಡಗಿಕೊಂಡರು.

ಇದನ್ನೂ ಓದಿ: Asia Cup 2022: 6, 6, 6, 6, 6, 6; ಪಂದ್ಯ ಒಂದು-ದಾಖಲೆ ಹಲವು, ಬಾಂಗ್ಲಾ ಎದುರು ಅಫ್ಘಾನ್ ಅಬ್ಬರ

6 ತಿಂಗಳ ನಂತರ ಕೊಹ್ಲಿ ಅರ್ಧಶತಕ:

ಭಾರತ ಎರಡು ವಿಕೆಟ್‌ಗೆ 192 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಸೂರ್ಯಕುಮಾರ್ ಯಾದವ್ ಅವರ ಆಕ್ರಮಣಕಾರಿ ಇನ್ನಿಂಗ್ಸ್ ನಲ್ಲಿ 26 ಎಸೆತಗಳಲ್ಲಿ 68 ರನ್ ಮತ್ತು ವಿರಾಟ್ ಕೊಹ್ಲಿ (ಅಜೇಯ 59) ಅರ್ಧಶತಕ ಗಳಿಸಿದರು. ಬಹಳ ಸಮಯದ ನಂತರ ಕೊಹ್ಲಿ ಅರ್ಧಶತಕ ಗಳಿಸಿದರು. ಇದಕ್ಕೂ ಮೊದಲು ಅವರು ಫೆಬ್ರವರಿ 18 ರಂದು ಕೋಲ್ಕತ್ತಾದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 52 ರನ್ ಗಳಿಸಿದ್ದರು. 193 ರನ್‌ಗಳ ಗುರಿಗೆ ಉತ್ತರವಾಗಿ, ಹಾಂಗ್ ಕಾಂಗ್ ತಂಡವು ಸಂಪೂರ್ಣ ಓವರ್ ಅನ್ನು ಆಡಿತು, ಆದರೆ ಐದು ವಿಕೆಟ್ ನಷ್ಟಕ್ಕೆ ಕೇವಲ 152 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ತಂಡ ಈ ಪಂದ್ಯವನ್ನು 40 ರನ್‌ಗಳ ಅಂತರದಿಂದ ಗೆದ್ದುಕೊಂಡಿತು. ಪಂದ್ಯದಲ್ಲಿ ಬಾಬರ್ ಹಯಾತ್ 41 ಮತ್ತು ಕಿಂಚಿತ್ ಶಾ 30 ರನ್ ಗಳಿಸಿ ಹಾಂಗ್​ಕಾಂಗ್​ ಪರ ಉತ್ತಮ ಪ್ರದರ್ಶನ ನೀಡಿದರು.
Published by:shrikrishna bhat
First published: