IND vs HK Asia Cup 2022: ನಾಳೆ ಭಾರತ-ಹಾಂಗ್​​ಕಾಂಗ್​ ಪಂದ್ಯ, ಭರ್ಜರಿ ತಯಾರಿಯಲ್ಲಿ ಕಿಂಗ್​ ಕೊಹ್ಲಿ

IND vs HK Asia Cup 2022: ಏಷ್ಯಾ ಕಪ್​ 2022ರಲ್ಲಿ ನಾಳೆ ಭಾರತ ಮತ್ತು ಹಾಂಗ್​​ಕಾಂಗ್​ ತಂಡಗಳು ಸೆಣಸಾಡಲಿವೆ. ಈಗಾಗಲೇ ಟೂರ್ನಿಯಲ್ಲಿ ಬಲಿಷ್ಠ ಪಾಕ್ ತಂಡವನ್ನು ಸೋಲಿಸಿರುವ ಇಂಡಿಯಾ ನಾಳೆ ಆತ್ಮ ವಿಶ್ವಾದಲ್ಲಿ ಕಣಕ್ಕಿಳಿಯಲಿದೆ.

IND vs HK

IND vs HK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಇಂದಿನಿಂದ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿದೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿ ಸಹ ಟಿ20 ಮಾದರಿಯಲ್ಲಿ ನಡೆಯಲಿದೆ. ಕೊರೋನಾ ನಂತರ 2 ವರ್ಷಗಳ ಬಳಿಕ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ.  ಏಷ್ಯಾಕಪ್​ನ 4ನೇ ಪಂದ್ಯದಲ್ಲಿ ನಾಳೆ ಭಾರತ ಮತ್ತು ಹಾಂಗ್​​ಕಾಂಗ್​ (India Vs Hong Kong)  ತಂಡಗಳು ಸೆಣಸಾಡಲಿವೆ. ಪಾಕ್​ ತಂಡದ ವಿರುದ್ಧ ಗೆಲುವು ಸಾಧಿಸಿರುವ ಟೀಂ ಇಂಡಿಯಾ ನಾಳೆ ಹೆಚ್ಚಿನ ಆತ್ಮವಿಶ್ವಾಸದಲ್ಲಿ ಕಣಕ್ಕಿಳಿಯಲಿದೆ. ಇತ್ತ ಹಾಂಗ್​​ಕಾಂಗ್​ ತಂಡವು ಟೂರ್ನಿಲ್ಲಿ ಮೊದಲ ಪಂದ್ಯವಾಡಲಿದೆ. ಹಾಗಿದ್ದರೆ ಉಭಯ ತಂಡಗಳ ಬಲಾಬಲ ಹೇಗಿದೆ? ಪಂದ್ಯವು ಎಲ್ಲಿ ನಡೆಯಲಿದೆ ಎಂಬ ಸಂಪೂರ್ಣ ವಿವರ ಇಲ್ಲಿದೆ ನೋಡಿ:​

ಪಂದ್ಯದ ವಿವರ:

ಏಷ್ಯಾ ಕಪ್​ 2022ರ 4ನೇ ಪಂದ್ಯದಲ್ಲಿ ಭಾರತ ಮತ್ತು ಹಾಂಗ್​​ಕಾಂಗ್​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಸ್ವಲ್ಪ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಇದನ್ನೂ ಓದಿ: Shubman Gill: ತನಗಿಂತ 5 ವರ್ಷ ದೊಡ್ಡವಳೊಂದಿಗೆ ಡೇಟಿಂಗ್ ಮಾಡ್ತಿದ್ದಾರಂತೆ ಶುಭಮನ್ ಗಿಲ್, ಯಾರು ಆ ಬಾಲಿವುಡ್​ ನಟಿ?

IND vs HK ಹೆಡ್​ ಟು ಹೆಡ್​:

ಇನ್ನು, ಭಾರತ ಮತ್ತು ಹಾಂಗ್​​ಕಾಂಗ್ ತಂಡಗಳು ಈವರೆಗೆ ಏಕೈಕ ಏಕದಿನ ಪಂದ್ಯವಾಡಿದೆ. 2008 ರಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ 256 ರನ್​ಗಳ ಭರ್ಜರಿ ಜಯ ಸಾಧಿಸಿತ್ತು. ಇದು ಈವರೆಗಿನ ಹೆಚ್ಚಿನ ಅಂತರದಲ್ಲಿ ಗೆದ್ದ ಪಂದ್ಯವಾಗಿದೆ.

ಪಂದ್ಯಕ್ಕೂ ಮುನ್ನ ಕೊಹ್ಲಿ ಭರ್ಜರಿ ತಯಾರಿ:

ಅನೇಕ ದಿನಗಳ ನಂತರ ಮೈದಾಕ್ಕಿಳಿದ ಕೊಹ್ಲಿ ಪಾಕ್ ವಿರುದ್ಧ ಉತ್ತಮವಾಗಿ ಬ್ಯಾಟಿಂಗ್ ಮಾಡಿದರು. ಇದೀಗ ಅವರು ಮುಂಬರುವ ಹಾಂಗ್​​ಕಾಂಗ್ ವಿರುದ್ಧದ ಪಂದ್ಯಕ್ಕಾಗಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಈ ಕುರಿತ ಫೋಟೋಗಳನ್ನು ಅವರು ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಜಿಮ್ ನಲ್ಲಿ ವರ್ಕೌಟ್​ ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದು, ಈ ಫೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.





IND vs HK ಸಂಭಾವ್ಯ ತಂಡ:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್.

ಇದನ್ನೂ ಓದಿ: Jasprit Bumrah: ಟಿ20 ವಿಶ್ವಕಪ್​ಗೂ ಮುನ್ನ ಭಾರತ ತಂಡಕ್ಕೆ ಗುಡ್​ ನ್ಯೂಸ್​, ಟೀಂ ಇಂಡಿಯಾಗೆ ಕಂಬ್ಯಾಕ್​ ಮಾಡಲಿದ್ದಾರೆ ಬಲಗೈ ವೇಗಿ

ಹಾಂಗ್​​ಕಾಂಗ್ ತಂಡ: ಯಾಸಿಮ್ ಮುರ್ತಾಜಾ, ನಿಜಾಕತ್ ಖಾನ್, ಬಾಬರ್ ಹಯಾತ್, ಕಿಂಚಿತ್ ಶಾ, ಐಜಾಜ್ ಖಾನ್, ಸ್ಕಾಟ್ ಮೆಕೆಚ್ನಿ, ಜೀಶನ್ ಅಲಿ, ಹರೂನ್ ಅರ್ಷದ್, ಎಹ್ಸಾನ್ ಖಾನ್, ಮೊಹಮ್ಮದ್ ಗಜನ್ಫರ್, ಆಯುಷ್ ಶುಕ್ಲಾ.
Published by:shrikrishna bhat
First published: