Virat Kohli: ಶತಕದ ನಂತರ ಮುತ್ತಿಕ್ಕಿದ ಉಂಗುರಕ್ಕೂ ವಿರಾಟ್​ಗೂ ಏನು ಸಂಬಂಧ? ಕೊನೆಗೂ ರಿವೀಲ್​ ಆಯ್ತು ರಿಂಗ್​ ಹಿಂದಿನ ಕಹಾನಿ

Virat Kohli: ವಿರಾಟ್ ಶತಕ ಬಾರಿಸಿದ ಕೂಡಲೇ ಕೊರಳಲ್ಲಿದ್ದ ಉಂಗುರವನ್ನು ಹೊರತೆಗೆದು ಮುತ್ತಿಟ್ಟರು. ಆದರೆ ಈ ಉಂಗುರಕ್ಕೂ ವಿರಾಟ್ ಗೂ ಇರುವ ವಿಶೇಷ ಸಂಬಂಧವೇನು? ಇಲ್ಲಿದೆ ನೋಡಿ ಇಂಟ್ರಸ್ಟಿಂಗ್​ ಮಾಹಿತಿ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

  • Share this:
ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಕಳೆದ ರಾತ್ರಿ ಸಿಡಿಸಿದ ಆ ಒಂದು ಶತಕ ಸಾಮಾಜಿಕ ಜಾಲತಾಣವನ್ನೇ ಶೇಕ್​ ಮಾಡಿಬಿಟ್ಟಿದೆ. ಎಲ್ಲಿ ನೋಡಿದರೂ ಕೊಹ್ಲಿಯ ಶತಕದ ಸುದ್ದಿಯೇ ಕಣ್ಣಿಗೆ ಕಾಣುತ್ತಿದ್ದು, ವಿರಾಟ್​ ಅಭಿಮಾನಿಗಳಂತೂ ಸಖತ್​ ಸಂತಸದಲ್ಲಿದ್ದಾರೆ. ಕೊಹ್ಲಿ ಬರೋಬ್ಬರಿ 1021 ದಿನಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ (Cricket) ಶತಕ ಬಾರಿಸಿದ್ದು, T20 ವಿಶ್ವಕಪ್‌ಗೂ (T20 World Cup) ಮುನ್ನ ಕೊಹ್ಲಿ ಫುಲ್ ಫಾರ್ಮ್‌ನಲ್ಲಿರುವುದಾಗಿ ಸೂಚನೆ ನೀಡಿದ್ದಾರೆ. ಶತಕದ ನಂತರ ವಿರಾಟ್ ಅವರ ವಿಶೇಷ ಆಚರಣೆ ಮೂರು ವರ್ಷಗಳ ನಂತರ ಮತ್ತೊಮ್ಮೆ ಕಂಡುಬಂದಿದೆ. ವಿರಾಟ್ ಶತಕ ಬಾರಿಸಿದ ಕೂಡಲೇ ಕೊರಳಲ್ಲಿದ್ದ ಉಂಗುರವನ್ನು ಹೊರತೆಗೆದು ಅದಕ್ಕೆ ಮುತ್ತಿಟ್ಟರು. ಆದರೆ ಈ ಉಂಗುರಕ್ಕೂ ವಿರಾಟ್ ಗೂ ಇರುವ ವಿಶೇಷ ಸಂಬಂಧವೇನು? ಇನಿಂಗ್ಸ್ ಅಂತ್ಯದ ನಂತರ ವಿರಾಟ್ ಇದಕ್ಕೆ ಉತ್ತರಿಸಿದ್ದಾರೆ.

ಶತಕವನ್ನು ಪತ್ನಿಗೆ ಅರ್ಪಿಸಿದ ಕೊಹ್ಲಿ:

ಶತಕ ಸಿಡಿಸಿದ ಬಳಿಕ ವಿರಾಟ್ ಕೊರಳಿಗೆ ಹಾಕಿಕೊಂಡಿದ್ದ ಉಂಗುರಕ್ಕೆ ಮುತ್ತನ್ನು ನೀಡಿದರು. ಇದು ಅವರ ಮದುವೆಯ ಉಂಗುರ. ಹೌದು, ವಿರಾಟ್ ಇನ್ನಿಂಗ್ಸ್ ಮುಗಿಸಿ ಮೈದಾನಕ್ಕೆ ಬಂದಾಗ ಸ್ವತಃ ವಿರಾಟ್ ಈ ಬಗ್ಗೆ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ, ವಿರಾಟ್ ಫಾರ್ಮ್‌ನೊಂದಿಗೆ ಹೋರಾಡಿದರು. ಮೂರು ವರ್ಷಗಳಲ್ಲಿ ಅವರ ಬ್ಯಾಟ್‌ನಿಂದ ಶತಕಗಳಷ್ಟೇ ಅಲ್ಲ ರನ್‌ಗಳೂ ಬತ್ತಿ ಹೋಗಿದ್ದವು. ಇದು ಟೀಕೆಗೂ ಗುರಿಯಾಗಿತ್ತು. ಟಿ20 ವಿಶ್ವಕಪ್‌ ಸೋಲಿನ ಬಳಿಕ ಟಿ20 ಹಾಗೂ ಏಕದಿನ ನಾಯಕತ್ವದಿಂದ ದೂರಸರಿದಿದ್ದರು. ನಂತರ ಅವರು ಟೆಸ್ಟ್ ನಾಯಕತ್ವವನ್ನೂ ತೊರೆದರು. ಈ ಎಲ್ಲಾ ಕಷ್ಟದ ಸಮಯದಲ್ಲಿ ಅನುಷ್ಕಾ ಶರ್ಮಾ ಕೂಡ ವಿರಾಟ್ ಅವರನ್ನು ಬೆಂಬಲಿಸಿದರು. ಅದಕ್ಕಾಗಿಯೇ ವಿರಾಟ್, ಈ ಶತಕದ ಕ್ರೆಡಿಟ್ ಅನ್ನು ಅನುಷ್ಕಾಗೆ ನೀಡುತ್ತಾ, ಈ ಶತಕವನ್ನು ಆಕೆ ಮತ್ತು ಮಗಳು ವಾಮಿಕಾಗೆ ಅರ್ಪಿಸಿರುವುದಾಗಿ ಹೇಳಿಕೊಂಡಿದ್ದಾರೆ.





ಟಿ20 'ವಿರಾಟ್' ಶತಕ:

ಇದು ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್ ಅವರ ಮೊದಲ ಶತಕವಾಗಿದೆ. ಅವರು ಅಫ್ಘಾನಿಸ್ತಾನ ವಿರುದ್ಧ 61 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ ಅಜೇಯ 122 ರನ್ ಗಳಿಸಿದರು. ಇವರ ಶತಕದ ನೆರವಿನಿಂದ ಟೀಂ ಇಂಡಿಯಾ 2 ವಿಕೆಟ್ ನಷ್ಟಕ್ಕೆ 212 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಇದೇ ವೇಳೆ ವಿರಾಟ್ ಈ ಹಿಂದೆ ಐಪಿಎಲ್ ನಲ್ಲಿ 5 ಶತಕ ಸಿಡಿಸಿದ್ದರು. ಇದಲ್ಲದೇ ಭಾರತದ ಪರ ಈ ಮೊದಲು ಟಿ20 ಅಂತರಾಷ್ಟ್ರೀಯ ಪಮದ್ಯದಲ್ಲಿ 118 ರನ್ ಗಳಿಸಿದ್ದ ರೋಹಿತ್ ದಾಖಲೆಯನ್ನು ಕೊಹ್ಲಿ ಮುರಿದಿದ್ದಾರೆ.

ಇದನ್ನೂ ಓದಿ: Virat Kohli: ಒಂದೇ ಶತಕಕ್ಕೆ ದಾಖಲೆಗಳೆಲ್ಲಾ ಅಳಿಸಿ ಹಾಕಿದ ವಿರಾಟ್​​, ಕಿಂಗ್​ ಈಸ್​ ಬ್ಯಾಕ್​ ಎಂದ ಫ್ಯಾನ್ಸ್

ರಿಕಿ ಪಾಂಟಿಂಗ್‌ಗೆ ಸರಿಗಟ್ಟಿದ ಕಿಂಗ್​:

ಈ ಶತಕದೊಂದಿಗೆ ವಿರಾಟ್ ಅಂತಾರಾಷ್ಟ್ರೀಯ ಶತಕಗಳ ಸಂಖ್ಯೆ 71ಕ್ಕೆ ತಲುಪಿದೆ. ಇದೀಗ ಅತಿ ಹೆಚ್ಚು ಅಂತರಾಷ್ಟ್ರೀಯ ಶತಕಗಳ ಪಟ್ಟಿಯಲ್ಲಿ ಆಸೀಸ್​ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರನ್ನು ಸರಿಗಟ್ಟಿದ್ದಾರೆ. ಈ ಪಟ್ಟಿಯಲ್ಲಿ ವಿರಾಟ್ ಈಗ ಸಚಿನ್ ತೆಂಡೂಲ್ಕರ್ ನಂತರ ಎರಡನೇ ಸ್ಥಾನಕ್ಕೆ ತಲುಪಿದ್ದಾರೆ.


Published by:shrikrishna bhat
First published: