IND vs AGF Asia Cup 2022: ಇಂದು ಭಾರತ-ಅಫ್ಘಾನ್​ ಪಂದ್ಯ, ಕೊನೆಯ ಪಂದ್ಯದಲ್ಲಾದರೂ ಗೆಲ್ಲುತ್ತಾ ಟೀಂ ಇಂಡಿಯಾ?

IND vs AGF Asia Cup 2022: ಇಂದು ಏಷ್ಯಾ ಕಪ್ 2022ರ (Asia Cup 2022)​ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಣಸಾಡಲಿವೆ. ಉಭಯ ತಂಡಗಳೆರಡಕ್ಕೂ ಇಂದಿನ ಪಂದ್ಯ ಏಷ್ಯಾ ಕಪ್​ 2022ರಲ್ಲಿ ಕೊನೆಯ ಪಂದ್ಯವಾಗಿರಲಿದೆ.

IND vs AFG

IND vs AFG

  • Share this:
ಇಂದು ಏಷ್ಯಾ ಕಪ್ 2022ರ (Asia Cup 2022)​ ಸೂಪರ್ 4 ಹಂತದ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ (IND vs AGF) ತಂಡವು ಸೆಣಸಾಡಲಿವೆ. ಆದರೆ ಪ್ರಶಸ್ತಿ ನಿರೀಕ್ಷೆ ಕೊನೆಯ ಪಂದ್ಯಕ್ಕೂ ಮುನ್ನವೇ ಭಾರತ ತಂಡ ಟೂರ್ನಿಯಿಂದ ಹೊರಬಿದ್ದಿದೆ. ಲಂಕಾ ಮತ್ತು ಪಾಕಿಸ್ತಾನದ ಸೂಪರ್​ 4 ಹಂತದ ಪಂದ್ಯದಲ್ಲಿ ಟೀಂ ಇಂಡಿಯಾ (Team India) ಸತತ 2 ಸೋಲುವ ಮೂಲಕ ಏಷ್ಯಾ ಕಪ್​ 2022ರಿಂದ ಹೊರಬಿದ್ದಿದೆ. ನಿನ್ನೆ ನಡೆದ ಅಫ್ಘಾನ್​ ಮತ್ತು ಪಾಕಿಸ್ತಾನದ ನಡುವಿನ ಪಂದ್ಯದಲ್ಲಿ ಅಫ್ಘಾನ್​ ಸೋಲುವ ಮೂಲಕ ಭಾರತವು ಟೂರ್ನಿಯಿಂದ ಹೊರನಡೆದಿದೆ. ಇಂದಿನ ಪಂದ್ಯವನ್ನಾದರೂ ಗೆದ್ದು ಟೂರ್ನಿಗೆ ಗೆಲುವಿನ ವಿದಾಯ ಹೇಳಲು ಟೀಂ ಇಂಡಿಯಾ ಸಿದ್ಧವಾಗಿದೆ. ಹಾಗಿದ್ದರೆ ಇಂದಿನ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ ನೋಡಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಸೂಪರ್​ 4 ಹಂತದ 2ನೇ ಭಾರತ ಮತ್ತು  ಅಫ್ಘಾನಿಸ್ತಾನ ​ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚಿನ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ.

ಇದನ್ನೂ ಓದಿ: IND vs SL Asia Cup 2022: ಈ ಬಾರಿ ಏಷ್ಯಾ ಕಪ್​ ಗೆಲ್ಲೋದು ಯಾರು? ಭವಿಷ್ಯ ನುಡಿದ ವೀರೇಂದ್ರ ಸೆಹ್ವಾಗ್

ಫೈನಲ್​ನಲ್ಲಿ ಪಾಕಿಸ್ತಾನ-ಶ್ರೀಲಂಕಾ:

ಹೌದು, ಈಗಾಗಲೇ ಸೂಪರ್ 4 ಹಂತದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಿಂದ ಹರೊಬಿದ್ದಿದೆ. ಅದೇ ರೀತಿ 2 ಪಂದ್ಯಗಳನ್ನು ಗೆದ್ದಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಫಯನಲ್​ ಹೋಗುವುದು ಖಚಿತವಾಗಿದೆ. ಅಲ್ಲದೇ ನಾಳೆ ಲಂಕಾ ಮತ್ತು ಪಾಕ್​ ಸೆಣಸಾಡಲಿದ್ದು, ಇಲ್ಲಿ ಉಭಯ ತಂಡಗಳಿಗೆ ಗೆಲುವಿನ ಅನಿವಾರ್ಯತೆ ಇಲ್ಲ ಎಂದು ಹೇಳಬಹುದಾಗಿದೆ. ಸೆಪ್ಟೆಂಬರ್ 11 ಭಾನುವಾರದಂದು ಇಬ್ಬರ ನಡುವೆ ಫೈನಲ್ ಪಂದ್ಯ ನಡೆಯಲಿದೆ.

2016 ಮತ್ತು 2018ರಲ್ಲಿ ಸತತ ಎರಡು ಬಾರಿ ಏಷ್ಯಾ ಕಪ್​ ಗೆದ್ದು 3ನೇ ಭಾರಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ ಉಂಟಾಗಿದೆ. ಭಾರತ ಮತ್ತು ಅಫ್ಘಾನ್​ ತಂಡಗಳು ಲೀಗ್​ ಹಂತದಲ್ಲಿ ಉತ್ತಮ ಪ್ರದರ್ಶನ  ನೀಡಿ ಸೂಪರ್ 4 ಹಂತದಲ್ಲಿ ಅಷ್ಟಾಗಿ ಉತ್ತಮ ಪ್ರದರ್ಶನ ನೀಡಲಿಲ್ಲ.

ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​-ಭಾರತ ಪ್ರವಾಸಕ್ಕೆ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡ ಪ್ರಕಟ, ಹೇಗಿದೆ ನೋಡಿ ಸೌತ್​ ಆಫ್ರಿಕಾ ಟೀಂ

IND vs AFG ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ಕೆಎಲ್ ರಾಹುಲ್, ರೋಹಿತ್ ಶರ್ಮಾ (c), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (WK), ದೀಪಕ್ ಹೂಡಾ, ಅಕ್ಷರ್ ಪಟೇಲ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್,

ಅಫ್ಗಾನಿಸ್ತಾನ ತಂಡ: ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (wk), ಇಬ್ರಾಹಿಂ ಝದ್ರಾನ್, ಮೊಹಮ್ಮದ್ ನಬಿ (c), ನಜೀಬುಲ್ಲಾ ಝದ್ರಾನ್, ಕರೀಂ ಜನತ್, ಸಮೀವುಲ್ಲಾ ಶಿನ್ವಾರಿ, ರಶೀದ್ ಖಾನ್, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ
Published by:shrikrishna bhat
First published: