Asia Cup 2022 Hong Kong: ಇವೆರಲ್ಲಾ ಅದ್ಭುತ ಕ್ರಿಕೆಟಿಗರು! ಆದ್ರೂ ಜೀವನೋಪಾಯಕ್ಕಾಗಿ ಡೆಲಿವರಿ ಬಾಯ್​ ಕೆಲ್ಸ ಮಾಡ್ತಿದ್ದಾರೆ

Asia Cup 2022 Hong Kong: ಹಾಂಗ್​ ಕಾಂಗ್​ ಕ್ರಿಕೆಟಿಗರು ವೃತ್ತಿಪರ ಆಟಗಾರರಲ್ಲ ಏಕೆಂದರೆ ಅವರ ಪ್ರಾಥಮಿಕ ಕೆಲಸ ಬೇರೆಯೇ ಆಗಿದೆ. ಅಲ್ಲಿನ ಕ್ರಿಕೆಟಿಗರು ಜೀವನೋಪಾಯಕ್ಕೆ ಮಾಡುವ ಕೆಲಸಗಳ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಕೇಳಿದವರು ಒಮ್ಮೆ ಶಾಕ್​ ಆಗಿದ್ದಾರೆ.

ಹಾಂಗ್​ಕಾಂಗ್ ತಂಡ

ಹಾಂಗ್​ಕಾಂಗ್ ತಂಡ

  • Share this:
ಭಾರತದಲ್ಲಿ ಕ್ರಿಕೆಟ್ (Cricket) ಒಂದು ಪ್ರಸಿದ್ಧ ಕ್ರೀಡೆಯಾಗಿದೆ. ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಅನ್ನು ಧರ್ಮ ಎನ್ನುವಷ್ಟು ಪರಿಗಣಿಸುತ್ತಾರೆ ಎಂದರೂ ತಪ್ಪಾಗಲಾರದು. ಕ್ರಿಕೆಟ್ ಬಗ್ಗೆ ಭಾರತದಲ್ಲಿರುವಷ್ಟು (India ) ಶ್ರದ್ಧೆಯನ್ನು ಜಗತ್ತಿನ ಯಾವ ದೇಶದಲ್ಲಿಯೂ ನೋಡಲು ಸಿಗುವುದಿಲ್ಲ. ಹಾಕಿ (Hockey) ದೇಶದ ರಾಷ್ಟ್ರೀಯು ಕ್ರೀಡೆಯಾದರೂ, ಕ್ರಿಕೆಟ್​ಗೆ ಸಿಗುವಷ್ಟು ಮನ್ನಣೆ ಬೇರೆ ಯಾವ ಆಟಗಳಿಗೂ ಸಿಗುತ್ತಿಲ್ಲ. ಇದೇ ವೇಳೆ ಭಾರತೀಯ ಕ್ರಿಕೆಟ್ ನಲ್ಲಿ ಸಾಕಷ್ಟು ಮಂದಿ ಶ್ರೀಮಂತ ಆಟಗಾರರಿದ್ದಾರೆ. ಕ್ರಿಕೆಟ್ ಪ್ರವೇಶಿಸುವ ಮುನ್ನ ಎಷ್ಟೇ ಬಡವರಾದರೂ ಕ್ರಿಕೆಟ್ ಗೆ ಕಾಲಿಟ್ಟರೆ ರಾತ್ರೋರಾತ್ರಿ ಕೋಟ್ಯಾಧಿಪತಿ ಆದವರನ್ನು ನಾವು ನೋಡಿದ್ದೇವೆ. ಆದರೆ ಹಾಂಗ್ ಕಾಂಗ್ (Hong Kong) ಕ್ರಿಕೆಟ್ ತಂಡದ ಕಥೆಯೇ ಬೇರೆ. ಆ ತಂಡಗಳಲ್ಲಿರುವ ಹೆಚ್ಚಿನ ಆಟಗಾರರ ಜೀವನವು ಕೇವಲ ಕ್ರಿಕೆಟ್​ನಿಂದ ನಡೆಯುತ್ತಿಲ್ಲವಂತೆ. ಕ್ರಿಕೆಟ್​ ಬದಲಾಗಿ ಅವರು ಬೇರೆ ಬೇರೆ ಕೆಲಸಗಳನ್ನೂ ಮಾಡುತ್ತಾರಂತೆ.

ಡೆಲಿವರಿ ಬಾಯ್‌ಗಳಾಗಿ ದುಡಿಯುವ ಕ್ರಿಕೆಟಿಗರು:

ಹಾಂಗ್ ಕಾಂಗ್ ಪ್ಲೇಆಫ್‌ನಲ್ಲಿ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದು ಏಷ್ಯಾಕಪ್‌ಗೆ ಅರ್ಹತೆ ಗಳಿಸಿತು. ತನ್ನ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ 40 ರನ್​ಗಳಿಂದ ಸೋತರೂ ಹಾಂಗ್​ ಕಾಂಗ್​ ತಂಡ ಟೀಂ ಇಂಡಿಯಾಗೆ ಉತ್ತಮ ಪೈಪೋಟಿ ನೀಡುವ ಮೂಲಕ ಮೆಚ್ಚುಗೆ ಪಡೆಯಿತು. ಅದೇ ರೀತಿ ಇಂದು ಪಾಕ್​ ವಿರುದ್ಧ ಹಾಂಗ್​ ಕಾಂಗ್​ ಸೆಣಸಲಿದ್ದು, ಇಲ್ಲಿ ಏನಾದರೂ ಗೆದ್ದಲ್ಲಿ ಸೂಪರ್​ 4 ಹಂತಕ್ಕೆ ತಲುಪಲಿದೆ.

ಆದರೆ ಹಾಂಗ್​ ಕಾಂಗ್​ ಕ್ರಿಕೆಟಿಗರು ವೃತ್ತಿಪರ ಆಟಗಾರರಲ್ಲ ಏಕೆಂದರೆ ಅವರ ಪ್ರಾಥಮಿಕ ಕೆಲಸ ಬೇರೆಯೇ ಆಗಿದೆ. ಅಲ್ಲಿನ ಕ್ರಿಕೆಟಿಗರು ಜೀವನೋಪಾಯಕ್ಕೆ ಮಾಡುವ ಕೆಲಸಗಳ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಕೇಳಿದವರು ಒಮ್ಮೆ ಶಾಕ್​ ಆಗಿದ್ದಾರೆ. ಹೌದು, ಹಾಂಗ್​ ಕಾಂಗ್​ ತಂಡದ ಕ್ರಿಕೆಟಿಗರು  ಫುಡ್ ಪಾಂಡಗಳಂತಹುಗಳಲ್ಲಿ ಡೆಲಿವರಿ ಬಾಯ್‌ಗಳಾಗಿ ದುಡಿಯುತ್ತಿದ್ದಾರಂತೆ. ಹಾಂಗ್​ ಕಾಂಗ್​ ತಂಡದ ಆಟಗಾರರು ಕೇವಲ ಕ್ರಿಕೆಟ್ ಮೇಲಿನ ಉತ್ಸಾಹದಿಂದ ಕ್ರಿಕೆಟ್ ಆಡುತ್ತಿದ್ದು, ತಮ್ಮ ದೇಶವನ್ನು ಕ್ರಿಕೆಟ್‌ನಲ್ಲಿ ಟಾಕ್ ಆಫ್ ಟೌನ್ ಮಾಡಲು ಅವರು ಶ್ರಮಿಸುತ್ತಿದ್ದಾರೆ.

ಇದನ್ನೂ ಓದಿ: Hardik Pandya: ಕೋಟಿ ಮೌಲ್ಯದ ವಾಚ್​ ಕಟ್ಟೋ ಪಾಂಡ್ಯ ಲೈಫ್​​ಸ್ಟೈಲ್​ ನೋಡಿದ್ರೆ ಶಾಕ್​ ಆಗ್ತೀರಾ!

ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಕೊಂಡಿರುವ ಆಟಗಾರರು:

ಕಿಂಚಿತ್ ಶಾ (ಉಪನಾಯಕ) ಆಭರಣ ವ್ಯಾಪಾರದಲ್ಲಿದ್ದಾರೆ. ಅಲ್ಲದೇ ಅನೇಕರು ಪುಡ್​ ಡೆಲಿವರಿ ಬಾಯ್​ ಗಳಾಗಿ ದುಡಿಯುತ್ತಿದ್ಧಾರೆ. ಜೊತೆಗ ಯುವ ಆಟಗಾರ ಆಯುಷ್ ಶುಕ್ಲಾ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದಾರೆ. ಒಟ್ಟಾರೆಯಾಗಿ ಇವರುಗಳು ಕ್ರಿಕೆಟ್​ ಟೂರ್ನಿಗಳಿಲ್ಲದ ವೇಳೆ ಬೇರೆ ಬೇರೆ ಕೆಲಸಗಳ ಮೂಲಕ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಅಲ್ಲದೇ ಹಾಂಗ್​ ಕಾಂಗ್​ ಆಟಗಾರರು ಕಳೆದ 3 ತಿಂಗಳುಗಳಿಂದ ತಮ್ಮ ಮನೆಗಳಿಗೆ ಹೋಗಿಲ್ಲವಂತೆ.

ನಾನು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ:

ಇನ್ನು, ಹಾಂಗ್ ಕಾಂಗ್ ನಾಯಕ ನಿಜಾಕತ್ ಖಾನ್ ಮಾತನಾಡುವಾಗ, ‘ನಾನು ವಿರಾಟ್ ಕೊಹ್ಲಿ ಅವರ ದೊಡ್ಡ ಅಭಿಮಾನಿ, ಅವರು ಪಾಕಿಸ್ತಾನದ ವಿರುದ್ಧ ಉತ್ತಮವಾಗಿ ಆಡಿದರು, ಅವರು ಫಾರ್ಮ್‌ಗೆ ಮರಳಲು ಮತ್ತು ಸಾಕಷ್ಟು ರನ್ ಗಳಿಸಲು ನಾವು ನಿಜವಾಗಿಯೂ ಬಯಸುತ್ತೇನೆ‘ ಎಂದು ಹೇಳಿದ್ದಾರೆ. ಭಾರತ ಪಂದ್ಯದ ಬಳಿಕ ಹಾಂಗ್​ ಕಾಂಗ್​ ಆಟಗಾರರು ಕೊಹ್ಲಿ ಸೇರಿದಂತೆ ಟೀಂ ಇಂಡಿಯಾ ಆಟಗಾರರ ಬಳಿ ಫೋಟೋ, ಆಟೋಗ್ರಾಫ್​ ಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: Virat Kohli: ಕೊಹ್ಲಿ ಅಭಿಮಾನಿಗಳಿಗೆ ಬಿಗ್​ ಶಾಕ್​, ಟಿ20 ಕ್ರಿಕೆಟ್​ಗೆ ವಿದಾಯ ಹೇಳ್ತಾರಾ ವಿರಾಟ್​?

ಇಂದು ಪಾಕ್​-ಹಾಂಗ್​ ಕಾಂಗ್​ ಪಂದ್ಯ:

ಇಂದು ಏಷ್ಯಾ ಕಪ್​ 2022ರಲ್ಲಿ ಇಂದು ಪಾಕಿಸ್ತಾನ ಮತ್ತು ಹಾಂಗ್​ ಕಾಂಗ್​ ತಂಡಗಳು ಸೆಣಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡವು ಸೂಪರ್ 4 ಹಂತಕ್ಕೆ ತಲುಪಲಿದೆ ಮತ್ತು ಭಾರತದ ವಿರುದ್ಧ ಮುಖಾಮುಖಿಯಾಗಲಿದೆ.
Published by:shrikrishna bhat
First published: