PAK vs SL Asia Cup 2022: ಏಷ್ಯಾ ಕಪ್​ ಫೈನಲ್, ಶ್ರೀಲಂಕಾ-ಪಾಕ್​ ಕದನ; ಹೇಗಿದೆ ಪಿಚ್​ ರಿಪೋರ್ಟ್? ಇಲ್ಲಿದೆ ಸಂಪೂರ್ಣ ಮಾಹಿತಿ

PAK vs SL Asia Cup 2022: ಏಷ್ಯಾ ಕಪ್ 2022 ರ ಅಂತಿಮ ಪಂದ್ಯವು ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವೆ ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ. ಎರಡು ದಿನಗಳ ಹಿಂದೆ ಶ್ರೀಲಂಕಾ ತಂಡ ಸೂಪರ್-4 ಸುತ್ತಿನಲ್ಲಿ ಪಾಕಿಸ್ತಾನವನ್ನು ಮಣಿಸಿತ್ತು. ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನ ಹವಾಮಾನ ಪರಿಸ್ಥಿತಿ ಮತ್ತು ಪಿಚ್ ವರದಿ ಹೇಗಿದೆ ನೊಡಿ.

SL vs PAK

SL vs PAK

  • Share this:
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ  ಇಂದು ನಡೆಯಲಿರುವ ಏಷ್ಯಾಕಪ್ ಫೈನಲ್ (Asia Cup Final)ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ (PAK v SL ) ಕ್ರಿಕೆಟ್ ತಂಡಗಳು ಮುಖಾಮುಖಿಯಾಗಲಿವೆ.  ಲಂಕಾ ಪಡೆ ಇಂದು ಮತ್ತೊಮ್ಮೆ ಗೆದ್ದು 6ನೇ ಬಾರಿ ಏಷ್ಯಾ ಕಪ್​ 2022 (Asia cup 2022) ಮುಡಿಗೇರಿಸಿಕೊಳ್ಳುವ ತವಕದಲ್ಲಿದೆ. ಆದರೆ ಸೂಪರ್ ಫೋರ್‌ನ ಕೊನೆಯ ಪಂದ್ಯದಲ್ಲಿ ಬಾಬರ್ ಅಜಮ್ ( Babar Azam) ನೇತೃತ್ವದ ಪಾಕಿಸ್ತಾನವು 3ನೇ ಬಾರಿಗೆ ಏಷ್ಯಾ ಕಪ್​ಗೆ ಮುತ್ತಿಕ್ಕಲು ಹವಣಿಸುತ್ತಿದೆ. ಅಲ್ಲದೇ ಉಭಯ ತಂಡಗಳು ಟ್ರೋಪಿ ಗೆಲ್ಲದೇ ಅನೇಕ ವರ್ಷಗಳೇ ಆಗಿವೆ. ಅದರಂತೆ ಶ್ರೀಲಂಕಾ 8 ವರ್ಷಗಳಿಂದ ಕಾಯುತ್ತಿದ್ದರೆ ಪಾಕಿಸ್ತಾನ 10 ವರ್ಷಗಳಿಂದ ಈ ಒಂದು ಗೆಲುವಿಗಾಗಿ ಪಾಕ್​ ಮತ್ತು ಲಂಕಾ ತಂಡಗಳು ಕಾಯುತ್ತಿವೆ. ಹಾಗಿದ್ದರೆ ಇಂದಿನ ಪಂದ್ಯದ ಸಂಪೂರ್ಣ ವಿವರ ಇಲ್ಲಿದೆ ನೊಡಿ.

ಪಂದ್ಯದ ವಿವರ:

ಏಷ್ಯಾ ಕಪ್​ 2022ರ ಫೈನಲ್​ ಕಾದಾಟಕ್ಕೆ ವೇದಿಕೆ ಸಜ್ಜಾಗಿದೆ. ಅಂತಿಮ ಹಣಾಹಣಿಯಲ್ಲಿ ಇಂದು ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಲಿದೆ. ಈ ಪಂದ್ಯವು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತೀಯ ಕಾಲಮಾನ ರಾತ್ರಿ 7 ಗಂಟೆಗೆ ಟಾಸ್​ ಮತ್ತು 7:30 ಪಂದ್ಯ ಆರಂಭವಾಗಲಿದೆ. ಸ್ಟಾರ್ ಸ್ಪೋರ್ಟ್ಸ್, ಡಿಸ್ನಿ+ಹಾಟ್‌ಸ್ಟಾರ್ ನಲ್ಲಿ ಪಂದ್ಯವನ್ನು ವೀಕ್ಷಿಸಬಹುದು.

ದುಬೈ ಹವಾಮಾನ ವರದಿ:

ದುಬೈನಲ್ಲಿ ಮಳೆಯಾಗುವ ಸಾಧ್ಯತೆ ಇಲ್ಲ. ಮೊದಲ ಇನಿಂಗ್ಸ್‌ನಲ್ಲಿ ಬಿಸಿ ಆಟಗಾರರಿಗೆ ತೊಂದರೆಯಾಗಬಹುದು. ಭಾನುವಾರ ಕನಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಮತ್ತು ಗರಿಷ್ಠ ತಾಪಮಾನ 38 ಡಿಗ್ರಿ ಸೆಲ್ಸಿಯಸ್ ಎಂದು ನಿರೀಕ್ಷಿಸಲಾಗಿದೆ. ಗಾಳಿಯು ಗಂಟೆಗೆ 23 ಕಿಲೋಮೀಟರ್ ವೇಗದಲ್ಲಿ ಬೀಸುವ ಸಂದರ್ಭದಲ್ಲಿ ಆರ್ದ್ರತೆಯು 50 ಪ್ರತಿಶತಷ್ಟಿದೆ.

ಇದನ್ನೂ ಓದಿ: Urvashi Rautela: ಊರ್ವಶಿ ರೌಟೇಲಾ ಕುರಿತು ಕೊನೆಗೂ ಮೌನ ಮುರಿದ ಪಾಕ್​ ಆಟಗಾರ, ಇವರಿಬ್ಬರ ನಡುವಿನ ಸಂಬಂಧ ನಿಜಾನಾ?

ಪಿಚ್​ ರಿಪೋರ್ಟ್:

ದುಬೈ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿನ ವಿಕೆಟ್ ಬ್ಯಾಟಿಂಗ್‌ಗೆ ಉತ್ತಮವಾಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ. ಚೆಂಡು ಬ್ಯಾಟ್‌ಗೆ ಚೆನ್ನಾಗಿ ಬರುತ್ತದೆ. ಬೌಲರ್‌ಗಳು ಹೊಸ ಚೆಂಡಿನೊಂದಿಗೆ ಹೆಚ್ಚಿನ ಸಹಾಯವನ್ನು ಪಡೆಯಬಹುದು. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಖಚಿತವಾಗಿದೆ. ಏಕೆಂದರೆ ಈ ಪಿಚ್​ನಲ್ಲಿ ಚೇಸಿಂಗ್​ ಮಾಡಿದ ತಂಡವೇ ಹೆಚ್ಚು ಗೆಲುವು ದಾಖಲಿಸಿದ ಕಾರಣ ಮೊದಲು ಇಂದು ಟಾಸ್​ ಮಹತ್ವದ ಪಾತ್ರ ನಿರ್ವಹಿಸಲಿದೆ. ಪಿಚ್ ವೇಗದ ಬೌಲರ್‌ಗಳು ಮತ್ತು ಸ್ಪಿನ್ನರ್‌ಗಳಿಗೆ ಸಹಾಯ ಮಾಡುತ್ತಿದೆ.

ಅಲ್ಲದೇ ಈ ಮೈದಾನದಲ್ಲಿ ಕಳೆದ 30 ಪಂದ್ಯಗಳಲ್ಲಿ 26 ಬಾರಿ ಗುರಿ ಬೆನ್ನಟ್ಟಿದ ತಂಡ ಗೆದ್ದಿದೆ. ಇದಲ್ಲದೆ, 2021 ರಿಂದ, ಪಾಕಿಸ್ತಾನ ತಂಡವು ಮೊದಲು ಬ್ಯಾಟಿಂಗ್ ಮಾಡುವಾಗ 12 ಪಂದ್ಯಗಳಲ್ಲಿ 5 ರಲ್ಲಿ ಮಾತ್ರ ಗೆದ್ದಿದೆ. ಅದೇ ಸಮಯದಲ್ಲಿ, ಶ್ರೀಲಂಕಾ ತಂಡವು 17 ಪಂದ್ಯಗಳಲ್ಲಿ ಕೇವಲ 2 ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಲಂಕಾ-ಪಾಕ್​ ಹೆಡ್​ ಟು ಹೆಡ್​:

ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಈವರೆಗೆ ಒಟ್ಟು 22 ಟಿ20 ಪಂದ್ಯಗಳಲ್ಲಿ ಮುಖಾಮುಖಿ ಆಗಿವೆ. ಇದರಲ್ಲಿ ಪಾಕಿಸ್ತಾನ 13 ಪಂದ್ಯಗಳನ್ನು ಗೆದ್ದಿದ್ದರೆ, ಶ್ರೀಲಂಕಾ 9 ಪಂದ್ಯಗಳನ್ನು ಗೆದ್ದಿದೆ. ಪಾಕಿಸ್ತಾನ ಮೂರನೇ ಬಾರಿಗೆ ಚಾಂಪಿಯನ್ ಆಗುವ ತವಕದಲ್ಲಿದ್ದರೆ, ಶ್ರೀಲಂಕಾ ತಂಡ ಆರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಉದ್ದೇಶದಿಂದ ಕಣಕ್ಕಿಳಿಯಲಿದೆ. ಪ್ರಸಕ್ತ ಟೂರ್ನಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳು ಸರಿಸಮವಾದ ಪ್ರದರ್ಶನವನ್ನು ನೀಡಿದೆ.

ಇದನ್ನೂ ಓದಿ: Team India: ಬುಮ್ರಾ-ಹರ್ಷಲ್ ಪಟೇಲ್ ಫಿಟ್ನೆಸ್ ಪರೀಕ್ಷೆ, ಒಬ್ಬರು ಇನ್​ ಒಬ್ಬರು ಔಟ್​!

SL vs PAK ಸಂಭಾವ್ಯ ಪ್ಲೇಯಿಂಗ್ XI:

ಶ್ರೀಲಂಕಾ ಸಂಭಾವ್ಯ ತಂಡ: ದನುಷ್ಕ ಗುಣತಿಲಕ, ಪಥುಮ್‌ ನಿಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಚರಿತ್ ಅಸಲಂಕಾ, ಭನುಕಾ ರಾಜಪಕ್ಷ, ದಸುನ್‌ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ಮಹೀಶ ತೀಕ್ಷಣ, ದಿಲ್ಶನ್ ಮಧುಶಂಕ, ಮತೀಶ ಪತಿರಣ.

ಪಾಕಿಸ್ತಾನ ಸಂಭಾವ್ಯ ತಂಡ: ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್‌ಕೀಪರ್), ಫಖರ್ ಜಮಾನ್, ಇಫ್ತಿಕಾರ್ ಅಹ್ಮದ್, ಶದಾಬ್ ಖಾನ್, ಮೊಹಮ್ಮದ್ ನವಾಜ್, ಆಸಿಫ್ ಅಲಿ, ಕುಶ್ದಿಲ್ ಶಾ, ಹ್ಯಾರಿಸ್ ರೌಫ್, ನಸೀಮ್ ಶಾ, ಮೊಹಮ್ಮದ್ ಹಸ್ನೈನ್.
Published by:shrikrishna bhat
First published: