Asia Cup 2022: ಏಷ್ಯಾ ಕಪ್​ನಲ್ಲಿ ತಲೆಕೆಳಗಾದ ಟೀಂ ಇಂಡಿಯಾ ಲೆಕ್ಕಾಚಾರ, ಫೈನಲ್​ ಪ್ರವೇಶಿಸಲು ಇತ್ತು ಇದೊಂದೇ ದಾರಿ

ಭಾರತ ತಂಡವು ಸೂಪರ್ ಫೋರ್ ಹಂತದಲ್ಲಿ ಉತ್ತಮ ಆಟ ಪ್ರದರ್ಶಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲು ಪೈಪೋಟಿ ನಡೆಸುತ್ತಿರುವ ಇತರ ತಂಡಗಳ ದಯೆಯಿಂದ ಫೈನಲ್ ಪ್ರವೇಶಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದು. ಈ ಅವಕಾಶ ಹೇಗೆ ಭಾರತ ತಂಡವು ಪಡೆಯಬಹುದು ಅಂತ ನಿಮಗೆ ಹಂತ ಹಂತವಾಗಿ ತಿಳಿಸುತ್ತೇವೆ ನೋಡಿ.

ಭಾರತ ಕ್ರಿಕೆಟ್ ತಂಡ

ಭಾರತ ಕ್ರಿಕೆಟ್ ತಂಡ

  • Share this:
ಏಳು ಬಾರಿ ಏಷ್ಯಾ ಕಪ್ ಅನ್ನು (Asia Cup) ಗೆದ್ದಂತಹ ಭಾರತ ಕ್ರಿಕೆಟ್ ತಂಡದ (Indian Cricket Team) ಮೇಲೆ ಅಭಿಮಾನಿಗಳು ತುಂಬಾನೇ ಭರವಸೆ ಇಟ್ಟಿಕೊಂಡಿದ್ದು, ಈಗ ಎಂಟನೇ ಬಾರಿಗೆ ಭಾರತ ಕ್ರಿಕೆಟ್ ತಂಡವು ಈ ಏಷ್ಯಾ ಕಪ್ ಅನ್ನು ತನ್ನ ಮುಡಿಗೇರಿಸಿಕೊಳ್ಳುತ್ತದೆ ಅಂತ ತುಂಬಾನೇ ಕುತೂಹಲದಿಂದ ಕಾಯುತ್ತಿದ್ದಾರೆ. ಈಗಾಗಲೇ ಸೂಪರ್ ಫೋರ್ ಸುತ್ತಿನಲ್ಲಿ ಸತತವಾಗಿ ಆಡಿದ ಎರಡು ಪಂದ್ಯಗಳಲ್ಲಿ (Match) ಎರಡನ್ನೂ ಸೋತಿರುವಂತಹ ಭಾರತ ತಂಡಕ್ಕೆ ಇನ್ನೆಲ್ಲಿದೆ ಏಷ್ಯಾ ಕಪ್ ಫೈನಲ್ ಗೆ (Asia Cup Final) ಹೋಗುವ ಅವಕಾಶ ಅಂತ ಬಹುತೇಕರಿಗೆ ಅನ್ನಿಸುತ್ತಿರಬಹುದು.

ಈ ಬಾರಿಯ ಏಷ್ಯಾ ಕಪ್ ನ ಎಲ್ಲಾ ಲೀಗ್ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ, ಸೂಪರ್ ಫೋರ್ ಸುತ್ತಿನಲ್ಲಿಯೂ ಸಹ ಅದನ್ನೇ ಮುಂದುವರೆಸುತ್ತೆ ಅಂತ ಅಭಿಮಾನಿಗಳು ತುಂಬಾನೇ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಸೂಪರ್ ಫೋರ್ ಸುತ್ತಿನಲ್ಲಿ ಮೊದಲ ಪಂದ್ಯವೇ ತನ್ನ ಕಟ್ಟಾ ಎದುರಾಳಿ ಪಾಕಿಸ್ತಾನದೊಂದಿಗೆ ನಡೆಯಿತು ಮತ್ತು ಎಲ್ಲರಿಗೂ ತಿಳಿದಿರುವಂತೆ ಆ ಪಂದ್ಯದಲ್ಲಿ ಭಾರತದ ವಿರುದ್ಧ 182 ರನ್ ಗಳ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡವು 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿತು.

ಪಾಕಿಸ್ತಾನ ವಿರುದ್ಧ ಸೋತ ತಂಡಕ್ಕೆ ಮತ್ತೊಂದು ಆಘಾತ 
ಪಾಕಿಸ್ತಾನದ ವಿರುದ್ಧ ಸೋತು ಸುಣ್ಣವಾದ ಭಾರತ ತಂಡಕ್ಕೆ ಮತ್ತೊಂದು ಆಘಾತ ದುಬೈನಲ್ಲಿ ಮಂಗಳವಾರದಂದು ಕಾದಿತ್ತು. ಹೌದು.. ಏಷ್ಯಾಕಪ್ 2022 ರ ಸೂಪರ್ ಫೋರ್ ಹಂತದ ಭಾರತದ ಎರಡನೆಯ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆರು ವಿಕೆಟ್ ಗಳಿಂದ ಸೋಲು ಅನುಭವಿಸಿ, ಈಗ ಹಾಲಿ ಚಾಂಪಿಯನ್ ಭಾರತ ಏಷ್ಯಾ ಕಪ್ ಟೂರ್ನಿಯಿಂದ ಹೊರ ನಡೆಯಲು ಸಿದ್ದವಾಗಿದೆ.

ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳನ್ನು ಕಲೆ ಹಾಕಿತು. ನಾಯಕ ರೋಹಿತ್ ಶರ್ಮಾ ಅವರು 41 ಎಸೆತಗಳಲ್ಲಿ 72 ರನ್ ಗಳನ್ನು ಬಾರಿಸಿದರು. 174 ರನ್ ಗಳ ಗುರಿಯನ್ನು ಚೇಸ್ ಮಾಡಲು ಶುರು ಮಾಡಿದ ಶ್ರೀಲಂಕಾ ತಂಡವು ಇನ್ನೂ ಒಂದು ಎಸೆತ ಬಾಕಿ ಉಳಿದಿರುವಂತೆಯೇ ಆರು ವಿಕೆಟ್ ಗಳಿಂದ ವಿಜಯ ಸಾಧಿಸಿದರು. 12 ಎಸೆತಗಳಲ್ಲಿ 21 ರನ್ ಗಳ ಅಗತ್ಯವಿದ್ದ ಶ್ರೀಲಂಕಾ ತಂಡದ ಬ್ಯಾಟ್ಸ್ಮನ್ ಗಳಿಗೆ ಬೌಲ್ ಮಾಡಲು ಬಂದ ಭಾರತದ ವೇಗಿ ಭುವನೇಶ್ವರ್ ಕುಮಾರ್ ಅವರು ತಮ್ಮ ಕೊನೆಯ ಓವರ್ ನಲ್ಲಿ 14 ರನ್ ಗಳನ್ನು ನೀಡಿದರು. ಕೊನೆಗೆ 20ನೇ ಓವರ್ ನಲ್ಲಿ ಅರ್ಷ್‌ದೀಪ್ ಸಿಂಗ್ ಅವರಿಗೆ ಬೌಲ್ ಮಾಡಲು ಹೇಳಿದರು.

ಇದನ್ನೂ ಓದಿ: IND vs SL Asia Cup 2022: ಲಂಕಾ ಪಂದ್ಯಕ್ಕೂ ಮುನ್ನ ದ್ರಾವಿಡ್​ಗೆ ಸಲಹೆ ನೀಡಿದ ಗೌತಮ್​ ಗಂಭೀರ್​, ತಂಡಕ್ಕೆ ಎಂಟ್ರಿ ಕೊಡ್ತಾರಾ ಈ ಬೌಲರ್​?

ಅಂತಿಮ ಓವರ್ ನಲ್ಲಿ ಕೇವಲ ಏಳು ರನ್ ಗಳು ಬೇಕಾಗಿದ್ದು, ಇನ್ನೂ ಒಂದು ಎಸೆತ ಬಾಕಿ ಇರುವಂತೆಯೇ ಶ್ರೀಲಂಕಾ ತಂಡವು ಪಂದ್ಯವನ್ನು ಗೆದ್ದುಕೊಂಡಿತು. ಇದರೊಂದಿಗೆ ಶ್ರೀಲಂಕಾ ತಂಡವು ಸೂಪರ್ ಫೋರ್ ಹಂತದ ಅಂಕ ಪಟ್ಟಿಯಲ್ಲಿ ಆಡಿದ ಎರಡು ಪಂದ್ಯಗಳನ್ನು ಗೆದ್ದು ಮೊದಲ ಸ್ಥಾನದಲ್ಲಿದೆ. ಆದರೆ, ಭಾರತ ತಂಡವು ಸೂಪರ್ ಫೋರ್ ಹಂತದಲ್ಲಿ ಉತ್ತಮ ಆಟ ಪ್ರದರ್ಶಿಸಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆಯಲು ಪೈಪೋಟಿ ನಡೆಸುತ್ತಿರುವ ಇತರ ತಂಡಗಳ ದಯೆಯಿಂದ ಫೈನಲ್ ಪ್ರವೇಶಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳಬಹುದು. ಈ ಅವಕಾಶ ಹೇಗೆ ಭಾರತ ತಂಡವು ಪಡೆಯಬಹುದು ಅಂತ ನಿಮಗೆ ಹಂತ ಹಂತವಾಗಿ ತಿಳಿಸುತ್ತೇವೆ ನೋಡಿ.

ಸೂಪರ್ ಫೋರ್ ಹಂತದ ಸ್ವರೂಪ ಹೇಗೆ ಕಾರ್ಯ ನಿರ್ವಹಿಸುತ್ತದೆ?
ಈಗಾಗಲೇ ಏಷ್ಯಾ ಕಪ್ 2022 ರಲ್ಲಿ ಒಟ್ಟು ಆರು ದೇಶಗಳ ಕ್ರಿಕೆಟ್ ತಂಡಗಳು ಭಾಗವಹಿಸಿದ್ದವು, ಇದರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಹಾಂಕಾಂಗ್ ಮತ್ತು ಬಾಂಗ್ಲಾದೇಶ ರಾಷ್ಟ್ರಗಳ ಕ್ರಿಕೆಟ್ ತಂಡಗಳು ಭಾಗಿಯಾಗಿದ್ದವು. ಮೊದಲನೇ ಹಂತದ ಲೀಗ್ ಸುತ್ತಿನಲ್ಲಿ ಹಾಂಕಾಂಗ್ ಮತ್ತು ಬಾಂಗ್ಲಾದೇಶ ಕ್ರಿಕೆಟ್ ತಂಡಗಳು ಟೂರ್ನಿಯಿಂದ ಹೊರಬಿದ್ದವು.

ಇದರ ನಂತರ ಲೀಗ್ ಹಂತದಲ್ಲಿ ಅರ್ಹತೆ ಪಡೆದ ನಾಲ್ಕು ತಂಡಗಳು ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿವೆ. ಅವುಗಳಲ್ಲಿ ಭಾರತ, ಶ್ರೀಲಂಕಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳು ಸೇರಿವೆ. ಈಗ ಎಲ್ಲಾ ನಾಲ್ಕು ತಂಡಗಳು ಒಮ್ಮೆ ಪರಸ್ಪರ ಮುಖಾಮುಖಿಯಾಗಲಿದ್ದಾರೆ, ಅಂದರೆ ಈ ಹಂತದಲ್ಲಿ ಒಟ್ಟು ಆರು ಪಂದ್ಯಗಳು ನಡೆಯಲಿವೆ.

ಏಷ್ಯಾಕಪ್ ನಲ್ಲಿ ಫೈನಲಿಸ್ಟ್ ಗಳನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿಬಾರಿಯೂ ಒಂದು ತಂಡವು ತನ್ನ ಸೂಪರ್ 4 ಮುಖಾಮುಖಿಯನ್ನು ಗೆದ್ದಾಗ, ಅದಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಆದ್ದರಿಂದ, ಸೂಪರ್ 4 ಹಂತದ ನಂತರ ಅಂಕ ಪಟ್ಟಿಯಲ್ಲಿ ಮೊದಲ ಮತ್ತು ಎರಡನೇ ಸ್ಥಾನದಲ್ಲಿರುವ ಎರಡು ತಂಡಗಳು ಏಷ್ಯಾ ಕಪ್ 2022 ರ ಫೈನಲ್ ಪಂದ್ಯವನ್ನು ಆಡಲಿವೆ.

ಏಷ್ಯಾಕಪ್ 2022 ಸೂಪರ್ 4 ಅಂಕ ಪಟ್ಟಿಯು ಪ್ರಸ್ತುತ ಹೇಗಿದೆ ಗೊತ್ತೇ?
ಮಂಗಳವಾರ ಭಾರತದ ವಿರುದ್ಧ ಗೆಲುವು ದಾಖಲಿಸಿದ ನಂತರ, ಶ್ರೀಲಂಕಾವು ತಂಡವು ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದೆ. ದ್ವೀಪ ರಾಷ್ಟ್ರವು ಪ್ರಸ್ತುತ ಸೂಪರ್ 4 ಅಂಕ ಪಟ್ಟಿಯಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡು ನಾಲ್ಕು ಅಂಕಗಳನ್ನು ಮತ್ತು 0.3512 ನೆಟ್ ರನ್ ರೇಟ್ ನೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವು ಭಾರತದ ವಿರುದ್ದದ ಪಂದ್ಯವನ್ನು ಗೆದ್ದುಕೊಂಡು ಎರಡು ಅಂಕಗಳು ಮತ್ತು 0.126 ನೆಟ್ ರನ್ ರೇಟ್ ನೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಇದನ್ನೂ ಓದಿ:  Virat Kohli: RCB ಕಪ್​ ಗೆಲ್ಲದಿರಲು ಕೊಹ್ಲಿಯೇ ಕಾರಣ, ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಮಾಜಿ ಆಟಗಾರ

ಗಮನಾರ್ಹವಾಗಿ, ಟೀಮ್ ಇಂಡಿಯಾ ಪ್ರಸ್ತುತ ಆಡಿದ ಎರಡು ಪಂದ್ಯಗಳಲ್ಲಿ ಸೋತು ಇನ್ನೂ ಅಂಕಗಳ ಪಟ್ಟಿಯಲ್ಲಿ ಶೂನ್ಯ ಅಂಕದಿಂದ ಮುಂದಕ್ಕೆ ಸರಿದಿಲ್ಲ ಎಂದು ಹೇಳಬಹುದು. ಭಾರತ ತಂಡದ ಪ್ರಸ್ತುತ ನೆಟ್ ರನ್ ರೇಟ್ ಸಹ -0.125 ಇದ್ದು ಮೂರನೇ ಸ್ಥಾನದಲ್ಲಿದೆ. ಇನ್ನೂ ಅಫ್ಘಾನಿಸ್ತಾನ ತಂಡವು ಸಹ ಶೂನ್ಯ ಅಂಕಗಳೊಂದಿಗೆ -0.589 ನೆಟ್ ರನ್ ರೇಟ್ ನೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.

ಈಗ ಭಾರತ ತಂಡವು ಏಷ್ಯಾ ಕಪ್ ಫೈನಲ್ ಗೆ ಅರ್ಹತೆ ಪಡೆಯುವುದು ಹೇಗೆ?
ಮೊದಲನೆಯದಾಗಿ, ಭಾರತ ತಂಡವು ಏಷ್ಯಾ ಕಪ್ ಫೈನಲ್ ಪಂದ್ಯವನ್ನು ಪ್ರವೇಶಿಸುವ ಯಾವುದೇ ಭರವಸೆಯನ್ನು ಹೊಂದಲು ಪಾಕಿಸ್ತಾನವು ತನ್ನ ಉಳಿದ ಎರಡೂ ಸೂಪರ್ 4 ಪಂದ್ಯಗಳನ್ನು ಎಂದರೆ ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳ ವಿರುದ್ಧ ಸೋಲಬೇಕು. ಅಲ್ಲದೆ, ರೋಹಿತ್ ಶರ್ಮಾ ನೇತೃತ್ವದ ತಂಡವು ತಮ್ಮ ನೆಟ್ ರನ್ ರೇಟ್ ಅನ್ನು ಸುಧಾರಿಸಲು ಅಫ್ಘಾನಿಸ್ತಾನವನ್ನು ದೊಡ್ಡ ಅಂತರದಿಂದ ಸೋಲಿಸಬೇಕಾಗಿದೆ.

ಮೇಲೆ ತಿಳಿಸಿದ ಎಲ್ಲಾ ಫಲಿತಾಂಶಗಳು ಭಾರತ ತಂಡದ ಪರವಾಗಿ ಹೋದರೆ, ಸೂಪರ್ 4 ಹಂತ ಪೂರ್ಣಗೊಂಡ ನಂತರ ಭಾರತ, ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಲಾ ಒಂದು ಅಂಕವನ್ನು ಹೊಂದಿರುತ್ತವೆ ಮತ್ತು ಸಮೀಕರಣವು ಮೂರು ತಂಡಗಳ ನಡುವಿನ ನೆಟ್ ರನ್ ರೇಟ್ ನ ಮೇಲೆ ಬಂದು ನಿಂತು ಫೈನಲ್ ಗೆ ಯಾರು ಪ್ರವೇಶಿಸುತ್ತಾರೆ ಅಂತ ನಿರ್ಧಾರವಾಗುತ್ತದೆ ಎಂದು ಹೇಳಬಹುದು.

ಇದನ್ನೂ ಓದಿ:  IND vs PAK Asia Cup 2022: ಆ ಪದ ಹೇಳೋಕೆ ನಾಚಿಕೊಂಡ ರಾಹುಲ್​ ದ್ರಾವಿಡ್! ವಿಡಿಯೋ ಸಿಕ್ಕಾಪಟ್ಟೆ ವೈರಲ್​​

ಏಷ್ಯಾಕಪ್ 2022 ಟೂರ್ನಿಯ ಹಣಾಹಣಿಯಲ್ಲಿ ಭಾರತ ತಂಡವು ಹೇಗೆ ಸ್ಥಾನ ಪಡೆಯಬಹುದು ಎಂಬುದರ ಸಂಕ್ಷಿಪ್ತ ವಿವರಣೆ ಇಲ್ಲಿದೆ ನೋಡಿ

  • ಅಫ್ಘಾನಿಸ್ತಾನ ತಂಡವು ಸೂಪರ್ 4 ಹಂತದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಬೇಕು.

  • ಇತ್ತ ಅಫ್ಘಾನಿಸ್ತಾನ ತಂಡವನ್ನು ಭಾರತ ತಂಡವು ತುಂಬಾ ಅಂತರದಿಂದ ಸೋಲಿಸಬೇಕು.

  • ಪಾಕಿಸ್ತಾನ ತಂಡವನ್ನು ಕೊನೆಯ ಪಂದ್ಯದಲ್ಲಿ ಶ್ರೀಲಂಕಾ ತಂಡವು ಸೋಲಿಸಬೇಕು.

  • ಕೊನೆಗೆ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನ ತಂಡಗಳಿಗಿಂತಲೂ ಭಾರತ ತಂಡದ ನೆಟ್ ರನ್ ರೇಟ್ ಜಾಸ್ತಿಯಾಗಿರಬೇಕು.

Published by:Ashwini Prabhu
First published: