IND vs PAK Asia Cup 2022: ಇಂಡೋ-ಪಾಕ್​ ಕದನದಲ್ಲಿ ಗೆಲುವು ಯಾರಿಗೆ? ಭವಿಷ್ಯ ನುಡಿದ ಗೂಗಲ್​

IND vs PAK Asia Cup 2022: ಇಂದು ಏಷ್ಯಾ ಕಪ್​ 2022ರಲ್ಲಿ ಭಾರತ ಮತ್ತು ಪಾಕಿಸ್ತಾನ ಹೈವೋಲ್ಟೇಜ್​ ಪಂದ್ಯ ನಡೆಯಲಿದೆ. ದುಬೈನ ರಣಾಂಗಣದಲ್ಲಿ ಈ 2ರಡು ತಂಡಗಳು ಮುಖಾಮುಖಿಯಾಗಲಿದೆ. ಆದರೆ ಪಂದ್ಯಕ್ಕೂ ಮೊದಲು ಯಾರು ಗೆಲ್ಲುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

IND vs PAK

IND vs PAK

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಗೆ ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಚಾಲನೆ ದೊರಕಿದೆ. ಇದರ ನಡುವೆ ಟೂರ್ನಿಯ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಹೌದು, ಇನ್ನೇನು ಕೆಲವೇ ಗಂಟೆಗಳಲ್ಲಿ ಭಾರತ ಮತ್ತು ಪಾಕಿಸ್ತಾನ (IND vs PAK) ತಂಡಗಳು ದುಬೈನ ಅಂತಾರಷ್ಟ್ರೀಯ ಕ್ರೀಡಾಂಗಣದಲ್ಲಿ ಸೆಣಸಾಡಲಿವೆ. ಈ ಬಾರಿ ಐಸಿಸಿ ಟಿ20 ವಿಶ್ವಕಪ್ (ICC T20 World Cup) ಇರುವ ಕಾರಣ ಏಷ್ಯಾಕಪ್ ಟೂರ್ನಿಯನ್ನು ಟಿ20 ಮಾದರಿಯಲ್ಲಿ ನಡೆಸಲಾಗುತ್ತಿದೆ. ಕೊರೋನಾ ಹಿನ್ನಲೆ 2 ವರ್ಷಗಳ ನಂತರ ಇದೀಗ ಮತ್ತೆ ಏಷ್ಯಾ ಕಪ್​ ನಡೆಯುತ್ತಿದೆ. 10 ತಿಂಗಳ ನಂತರ ಮತ್ತೆ ಬದ್ಧ ವೈರಿಗಳಾದ ಇಂಡೋ-ಪಾಕ್​ ಮುಖಾಮುಖಿಯಾಗುತ್ತಿದ್ದು, ಕಳೆದ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ಟೀಂ ಇಂಡಿಯಾ ಸಜ್ಜಾಗಿದೆ. ಆದರೆ ಇದರ ನಡುವೆ ಇಂದಿನ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆ ಎನ್ನುವುದರ ಕುರಿತು ಗೂಗಲ್​ ಭವಿಷ್ಯ ನುಡಿದಿದೆ.

ಭವಿಷ್ಯ ನುಡಿದ ಗೂಗಲ್​:

ಹೌದು, ಇದೇನಪ್ಪಾ ಗೂಗಲ್​ ಭವಿಷ್ಯ ನುಡಿದಿದೆ ಎಂದು ಅಚ್ಚರಿಪಡೆಬೇಡಿ. ಪ್ರತಿ ಪಂದ್ಯಗಳಲ್ಲಿಯೂ ಗೂಗಲ್​ ಯಾವ ತಂಡ ಗೆಲ್ಲುತ್ತದೆ ಎಂದು ಸಂಭವನೀಯ ಅಂಕಿ ಅಂಶವನ್ನು ಬಿಡುಗಡೆ ಮಾಡುತ್ತದೆ. ಅದರಂತೆ ಇದೀಗ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಕ್ಕೂ ಇದೇ ರೀತಿ ಅಂಕಿ ಅಂಶವನ್ನು ರಿಲೀಸ್​ ಮಾಡಿದೆ. ಇದರ ಪ್ರಕಾರ ಇಂದಿನ ಪಂದ್ಯದಲ್ಲಿ ಭಾರತವೇ ಗೆಲ್ಲುವ ಫೇವರೇಟ್​ ಟೀಂ ಆಗಿದೆ.

ಗೂಗಲ್​ ನೀಡಿದ ಅಂಕಿ ಅಂಶ


ಗೂಗಲ್​ ಅಂಕಿ ಅಂಶದ ಪ್ರಕಾರ ಭಾರತ ತಂಡವು ಇಂದು ನಡೆಯುವ ಪಂದ್ಯದಲ್ಲಿ ಶೇ.64ರಷ್ಟು ಗೆಲುವಿನ ಸಾಧ್ಯತೆ ಹೊಂದಿದೆ. ಅದರಂತೆ ಪಾಕಿಸ್ತಾನ ತಂಡವು ಶೇ.36ರಷ್ಟು ಗೆಲುವಿನ ಸಾಧ್ಯತೆ ಹೊಂದಿದೆ ಎಂದು ತಿಳಿಸಿದೆ. ಹೀಗಾಗಿ ಗೂಗಲ್​ ಪ್ರಕಾರ ಪಾಕ್​ ಎದುರು ಟೀಂ ಇಂಡಿಯಾ ಗೆಲ್ಲುವುದು ಪಕ್ಕಾ ಆಗಿದೆ. ಆದರೆ ಇದು ಒಂದು ಕೇವಲ ಅಂಕಿ ಅಂಶವಾಗಿರುವುದರಿಂದ ಪಂದ್ಯದ ಫಲಿತಾಂಶದ ಬಗ್ಗೆ ನಿಖರವಾದ ಮಾಹಿತಿ ಅಲ್ಲವಾದರೂ ಭಾರತೀಯ ಅಭಿಮಾನಿಗಳಿಗೆ ಸಂತಸದ ಸುದ್ದಿಯಾಗಿದೆ.

ಇದನ್ನೂ ಓದಿ: IND vs PAK Asia Cup 2022: ಇಂದು ಭಾರತ-ಪಾಕ್ ಹೈವೋಲ್ಟೇಜ್ ಮ್ಯಾಚ್​, ಹೇಗಿದೆ ಉಭಯ ತಂಡಗಳ ಬಲಾಬಲ

ಪಾಕ್​ ಎದುರು ಭಾರತ ತಂಡದ್ದೇ ಮೇಲುಗೈ:

ಇನ್ನು, ಉಭಯ ತಂಡಗಳ ಬಲಾಬಲ ನೋಡುವುದಾದರೆ, ಏಷ್ಯಾ ಕಪ್​ ಈ ಬಾರಿ ಟಿ20 ಮಾದರಿಯಲ್ಲಿ ನಡೆಯುತ್ತಿದೆ. ಭಾರತ ಮತ್ತು ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಈವರೆಗೆ ಒಟ್ಟು 14 ಬಾರಿ ಮುಖಾಮುಖಿ ಆಗಿದೆ. ಈ ವೇಳೆ ಭಾರತ 8 ಬಾರಿ ಗೆದ್ದಿದೆ. ಪಾಕಿಸ್ತಾನ ಕೇವಲ 5 ಬಾರಿ ಗೆದ್ದಿದೆ. ಇದರ ನಡುವೆ ಒಂದು ಪಂದ್ಯ ರದ್ದಾಗಿತ್ತು. ಅಲ್ಲದೇ ಉಭಯ ತಂಡಗಳು ಟಿ20 ಅಲ್ಲಿ ಈವರೆಗೆ ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಇದರಲ್ಲಿ 6ರಲ್ಲಿ ಭಾರತ ಮತ್ತು ಕೇವಲ 2ರಲ್ಲಿ ಪಾಕ್​ ಗೆದ್ದಿದೆ.

ಇದನ್ನೂ ಓದಿ: Asia Cup 202 IND vs PAK: ಭಾರತ-ಪಾಕಿಸ್ತಾನ ಪಂದ್ಯ ನೋಡಿದ್ರೆ ಬೀಳುತ್ತೆ ದಂಡ, ಇದೆಂತಾ ರೂಲ್ಸ್ ಗುರು!

IND vs PAK  ಸಂಭಾವ್ಯ ಪ್ಲೇಯಿಂಗ್ 11:

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ,  ಭುವನೇಶ್ವರ್ ಕುಮಾರ್, ಅರ್ಷ್ದೀಪ್ ಸಿಂಗ್ ಮತ್ತು ಯುಜ್ವೇಂದ್ರ ಚಾಹಲ್ ಮತ್ತು ದಿನೇಶ್ ಕಾರ್ತಿಕ್

ಪಾಕಿಸ್ತಾನ ತಂಡ: ಬಾಬರ್ ಅಜಮ್ (C), ಮೊಹಮ್ಮದ್ ರಿಜ್ವಾನ್ (WK), ಫಖರ್ ಜಮಾನ್, ಆಸಿಫ್ ಅಲಿ, ಇಫ್ತಿಕರ್ ಅಹ್ಮದ್, ಹೈದರ್ ಅಲಿ, ಶಾದಾಬ್ ಖಾನ್ (VC), ಮೊಹಮ್ಮದ್ ನವಾಜ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾನವಾಜ್ ದಹಾನಿ.
Published by:shrikrishna bhat
First published: