Asia Cup 2022: ಏಷ್ಯಾ ಕಪ್​ಗೂ ಮುನ್ನ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟ ಯುವ ವೇಗಿ

Asia Cup 2022: ಏಷ್ಯಾ ಕಪ್​ 2022ಗೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಇದರ ನಡುವೆ ಟೀಂ ಇಂಡಿಯಾಗೆ ಮತ್ತೊಬ್ಬ ಯುವ ವೇಗಿಯ ಎಂಟ್ರಿಯಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯು ಆಗಸ್ಟ್ 27ರಂದು ಯುಎಇ (UAE) ಅಲ್ಲಿ ಅದ್ಧೂರಿಯಾಗಿ ಆರಂಭವಾಗಲಿದೆ. ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾವನ್ನು ಪ್ರಕಟಿಸಿದ್ದು, ರೋಹಿತ್​ ಶರ್ಮಾ (Rohit Sharma) ಅವರನ್ನು ತಂಡದ ನಾಯಕರನ್ನಾಗಿ ಮತ್ತು ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಇದರ ನಡುವೆ ಬಿಸಿಸಿಐ ಅಂತಿಮ ಕ್ಷಣದಲ್ಲಿ ತಂಡಕ್ಕೆ ಹೊಸ ಆಟಗಾರನನ್ನು ಆಯ್ಕೆ ಮಾಡಿದೆ.  ಭಾರತ ತಂಡದ ಅಭ್ಯಾಸಕ್ಕಾಗಿ ಯುವ ಬೌಲರ್ ಕುಲ್ದೀಪ್ ಸೇನ್ (Kuldeep Sen) ಅವರನ್ನು ನೆಟ್ ಬೌಲರ್ ಆಗಿ ಆಯ್ಕೆ ಮಾಡಿದೆ. ಇದೇ ಮೊದಲ ಬಾರಿಗೆ ಕುಲ್ದೀಪ್ ಸೇನ್ ಅವರು ಟೀಂ ಇಂಡಿಯಾದ ನೆಟ್​ ಬೌಲರ್ ಆಗಿ ಆಯ್ಕೆ ಆಗಿದ್ದು, ಅವರು ಭಾರತ ತಂಡವನ್ನು ಆದಷ್ಟು ಭೇಗ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.

ಕುಲ್ದೀಪ್ ಸೇನ್​ಗೆ ಮಣೆ ಹಾಕಿದ ಬಿಸಿಸಿಐ:

ಹೌದು, ಐಪಿಎಲ್​ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಟವಾಡಿದ್ದ ಭಾರತದ ಯುವ ವೇಗದ ಬೌಲರ್​ ಕುಲ್ದೀಪ್ ಸೇನ್ ಇದೀಗ ಟೀಂ ಇಂಡಿಯಾಗೆ ಎಂಟ್ರಿ ನೀಡುತ್ತಿದ್ದಾರೆ, ಏಷ್ಯಾ ಕಪ್​ 2022ಗೆ ಭಾರತ ತಂಡದ ನೆಟ್​ ಬೌಲರ್​ ಆಗಿ ಬಿಸಿಸಿಐ ಕುಲ್ದೀಪ್ ಸೇನ್ ಅವರನ್ನು ಆಯ್ಕೆ ಮಾಡಿದೆ.  ಹೆಚ್ಚುವರಿ ನೆಟ್​ ಬೌಲರ್ ಆಗಿ ಕುಲ್ದೀಪ್ ಸೇನ್ ಹಾಗೂ ದೀಪಕ್ ಚಹರ್ ಅವರನ್ನು ಬಳಸಿಕೊಳ್ಳಲು ಬಿಸಿಸಿಐ ನಿರ್ಧರಿಸಿದೆ.

ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ದೀಪಕ್ ಚಹಾರ್ ಅವರು ಮತ್ತೆ ಇಂಜೂರಿಗೆ ಒಳಗಾಗಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ ಇದಕ್ಕೆ ಇದೀಗ ಬಿಸಿಸಿಐ ಸ್ಪಷ್ಟನೆ ನೀಡಿದ್ದು, ಚಹಾರ್​ ಅವರು ಟೂರ್ನಿಯಲ್ಲಿ ಇರಲಿದ್ದಾರೆ ಎಂದು ಹೇಳಿದೆ. ಹೀಗಾಗಿ ಎಲ್ಲಾ ಊಹಾಪೋಹಗಳಿಗೆ ಇದೀಗ ಸಂಪೂರ್ಣವಾಗಿ ತೆರೆಎಳೆದಿದೆ. ಇನ್ನು, ಈಗಾಗಲೇ ತಂಡದಿಂದ ಪ್ರಮುಖ ಕೋಚ್​ ಆಗಿ ರಾಹುಲ್​ ದ್ರಾವಿಡ್​ ಅವರು ಹೊರನಡೆದಿದ್ದಾರೆ. ಅವರ ಬದಲಿಗೆ ವಿವಿಎಸ್​ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಲಾಗಿದೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್​ಗೆ​ ಎಂಟ್ರಿ ಕೊಟ್ಟ ಹಾಂಗ್​ ಕಾಂಗ್, ಫೈನಲ್ 6 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ

ಟೀಂ ಇಂಡಿಯಾಗೆ ನೂತನ ಕೋಚ್​:

ಹೌದು, ರಾಹುಲ್​ ದ್ರಾವಿಡ್​ ಅವರಿಗೆ ಈಗಾಗಲೇ ಕೊರೋನಾ ಸೋಂಕು ತಗುಲಿರುವ ಹಿನ್ನಲೆ ಅವರ ಬದಲಾಗಿ ಭಾರತ ತಂಡಕ್ಕೆ ಹೊಸ ಕೊಚ್​ ಅವರನ್ನು ಬಿಸಿಸಿಐ ಆಯ್ಕೆ ಮಾಡಿದೆ.  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರನ್ನು ಏಷ್ಯಾಕಪ್ 2022ಗೆ ಭಾರತ ತಂಡದ ಹಂಗಾಮಿ ಕೋಚ್​ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಈ ಕುರಿತು ಬಿಸಿಸಿಐ ಟ್ವೀಟ್​ ಮಾಡುವ ಮೂಲಕ ಮಾಹಿತಿ ನೀಡಿದೆ.

ಭರ್ಜರಿ ಅಭ್ಯಾಸದಲ್ಲಿ ಟೀಂ ಇಂಡಿಯಾ:

ಇನ್ನು, ಈಗಾಗಲೇ ದುಬೈಗೆ ತೆರಳಿರುವ ಭಾರತ ತಂಡ ಆಗಸ್ಟ್ 27ರಿಂದ ಆರಂಭವಾಗಲಿರುವ ಏಷ್ಯಾ ಕಪ್​ ಟಿ20 ಟೂರ್ನಿಗಾಗಿ ಭರ್ಜರಿ ತಯಾರಿ ನಡೆಸುತ್ತಿದೆ. ಈ ಕುರಿತ ವಿಡಿಯೋ ತುಣುಕನ್ನು ಬಿಸಿಸಿಐ ತನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದೆ. ವಿಡಿಯೋದಲ್ಲಿ ಟೀಂ ಇಂಡಿಯಾ ಆಟಗಾರರು ಉಳಿದ ದೇಶದ ಆಟಗಾರೊಂದಿಗೆ ಮಾತುಕತೆ ನಡೆಸುತ್ತಿದ್ದು, ವಿರಾಟ್​ ಕೊಹ್ಲಿ ಮತ್ತು ಪಾಕ್ ನಾಯಕ ಬಾಬರ್ ಅಜಂ ಇಬ್ಬರೂ ಮುಖಾಮುಖಿ ಆಗಿದ್ದಾರೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್ ಟೂರ್ನಿಯನ್ನು​ ಬಹಿಷ್ಕರಿಸಿತ್ತು ಭಾರತ-ಪಾಕ್, ಏನಿದು ರೌಂಡ್ ರಾಬಿನ್ ಸ್ವರೂಪ?

ಏಷ್ಯಾ ಕಪ್​ 2022 ಭಾರತ ತಂಡ: 

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್.
ಮೀಸಲು ಆಟಗಾರರು: ಅಕ್ಷರ್‌ ಪಟೇಲ್‌, ಶ್ರೇಯಸ್ ಅಯ್ಯರ್ ಮತ್ತು ದೀಪಕ್ ಚಹರ್
Published by:shrikrishna bhat
First published: