Asia Cup 2022: ಟೀಂ ಇಂಡಿಯಾಗೆ ಬಿಗ್​ ಶಾಕ್​, ಏಷ್ಯಾ ಕಪ್​ನಿಂದ ಜಡೇಜಾ ಔಟ್​!

Asia Cup 2022: ಭಾರತ ತಂಡಕ್ಕೆ ಬಿಗ್​ ಶಾಕ್​ ಒಂದು ಎದುರಾಗಿದೆ. ತಂಡದ ಸ್ಟಾರ್​ ಆಲ್​ ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಅವರು ಏಷ್ಯಾ ಕಪ್​ ಟೂರ್ನಿಯಿಂದ ಹೊರನಡೆದಿದ್ದಾರೆ.

ರವೀಂದ್ರ ಜಡೇಜಾ

ರವೀಂದ್ರ ಜಡೇಜಾ

  • Share this:
ಏಷ್ಯಾ ಕಪ್​ 2022ರ (Asia Cup 2022) ಸೂಪರ್​ 4 ಹಂತಕ್ಕೆ ಈಗಾಗಲೇ ಭಾರತ ತಂಡ ಲಗ್ಗೆ ಇಟ್ಟಿದೆ. ಜೊತೆಗೆ ಸೂಪರ್​ 4 ಹಂತದ ಮೊದಲ ಪಂದ್ಯವನ್ನು ಇದೇ ರವಿವಾರದಂದು ನಡೆಯಲಿದೆ. ಇಂದು ನಡೆಯಲಿರುವ ಹಾಂಗ್​ ಕಾಂಗ್​ ಮತ್ತು ಪಾಕಿಸ್ತಾನ (HK vs PAK) ನಡುವಿನ ಪಂದ್ಯದಲ್ಲಿ ಯಾವ ತಂಡ ಗೆಲುವು ಸಾಧಿಸಲಿದೆಯೋ ಆ ತಂಡ ಟೀಂ ಇಂಡಿಯಾದ (Team India) ಎದುರು ಕಣಕ್ಕಿಳಿಯಲಿದೆ. ಇದರ ನಡುವೆ ಭಾರತ ತಂಡಕ್ಕೆ ಬಿಗ್​ ಶಾಕ್​ ಒಂದು ಎದುರಾಗಿದೆ. ತಂಡದ ಸ್ಟಾರ್​ ಆಲ್​ ರೌಂಡರ್​ ರವೀಂದ್ರ ಜಡೇಜಾ (Ravindra Jadeja) ಅವರು ಏಷ್ಯಾ ಕಪ್​ ಟೂರ್ನಿಯಿಂದ ಹೊರನಡೆದಿದ್ದಾರೆ. ಹೌದು, ಅವರ ಬದಲಾಗಿ ಎಡಗೈ ಸ್ಪಿನ್ ಆಲ್ ರೌಂಡರ್ ಅಕ್ಷರ್ ಪಟೇಲ್ (Axar Patel) ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಬಿಸಿಸಿಐ (BCCI) ಅಧಿಕೃತವಾಗಿ ಮಾಹಿತಿ ನೀಡಿದೆ.

ಏಷ್ಯಾ ಕಪ್​ನಿಂದ ಜಡೇಜಾ ಹೊರಕ್ಕೆ:

ಹೌದು, ಭಾರತ ತಂಡಕ್ಕೆ ಕಳೆದ ಕೆಲ ದಿನಗಳಿಂದ ಗಾಯದ ಸಮಸ್ಯೆ ದೊಡ್ಡ ತಲೆನೋವಾಗಿ ಕಾಡುತ್ತಿದೆ. ಸಾಲು ಸಾಲು ಸ್ಟಾರ್​ ಆಟಗಾರರು ಗಾಯದ ಸಮಸ್ಯೆಯಿಂದ ಮಹತ್ವದ ಟೂರ್ನಿಗಳಿಂದ ಹೊರಗುಳಿಯುತ್ತಿದ್ದಾರೆ. ಈಗಾಗಲೇ ಬುಮ್ರಾ ಏಷ್ಯಾ ಕಪ್​ನಿಂದ ಹೊರಗುಳಿದಿದ್ದರು. ಇದೀಗ ಟೀಂ ಇಂಡಿಯಾದ ಸ್ಟಾರ್​ ಆಲ್​ ರೌಂಡರ್​ ಆದ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಏಷ್ಯಾ ಕಪ್​ 2022ರಿಂದ ಔಟ್​ ಆಗಿದ್ದಾರೆ. ಈ ಕುರಿತು ಸ್ವತಃ ಬಿಸಿಸಿಐ ಟ್ವೀಟ್​ ಮಾಡಿದೆ.

ಪಾಕಿಸ್ತಾನ ಮತ್ತು ಹಾಂಗ್​ ಕಾಂಗ್​ ತಂಡಗಳ ವಿರುದ್ಧ ಭಾರತ ತಂಡದ ಗೆಲುವಿನಲ್ಲಿ ಜಡ್ಡು ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಇದೀಗ ಜಡೇಜಾ ಅವರ ಬಲ ಮೊಣಕಾಲಿಗೆ ಗಾಯವಾಗಿದ್ದು, ಈ ಕಾರಣದಿಂದ ಅಖಿಲ ಭಾರತ ಹಿರಿಯ ಆಯ್ಕೆ ಸಮಿತಿಯು ಜಡೇಜಾ ಅವರನ್ನು ಏಷ್ಯಾ ಕಪ್​ ಟೂರ್ನಿಯಿಂದ ಹೊರನಡೆದಿದ್ದಾರೆ. ಇವರ ಬದಲಾಗಿ ಅಕ್ಷರ್ ಪಟೇಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಸದ್ಯ ಜಡ್ಡು ಅವರು ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ ತಿಳಿಸಿದೆ. ಅಲ್ಲದೇ ಪಟೇಲ್​ ಈಗಾಗಲೇ ಟೀಂ ಇಂಡಿಯಾದ ಸ್ಟ್ಯಾಂಡ್‌ಬೈ ಆಗಿ ಇರುವುದರಿಂದ ಸುಲಭವಾಗಿ ತಂಡದೊಂದಿಗೆ ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ: Asia Cup 2022: ಏಷ್ಯಾ ಕಪ್​ ಸೂಪರ್ 4​ ವೇಳಾಪಟ್ಟಿ, ಮತ್ತೊಮ್ಮೆ ಭಾರತ-ಪಾಕ್ ಹಣಾಹಣಿಗೆ ಡೇಟ್​ ಫಿಕ್ಸ್?

ಟಿ20 ವಿಶ್ವಕಪ್​ಗೆ ಜಡ್ಡು ಅನುಪಸ್ಥಿತಿ?:

ಇದೀಗ ಇಂತಹುದೊಂದು ದೊಡ್ಡ ಪ್ರಶ್ನೆ ಟೀಂ ಇಂಡಿಯಾ ಅಭಿಮಾನಿಗಳಲ್ಲಿ ಕಾಡುತ್ತಿದೆ. ಬಲ ಮೊಣಕಾಲಿಗೆ ಗಾಯವಾಗಿರುವ ಕಾರಣ ಜಡ್ಡು ಮಹತ್ವದ ಟೂರ್ನಿಯಾದ ಏಷ್ಯಾ ಕಪ್​ 2022ರಿಂದ ಔಟ್​ ಆಗಿದ್ದಾರೆ. ಈ ಹಿನ್ನಲೆ ಫಾನ್ಸ್​ ಗಳಲ್ಲಿ ಜಡ್ಡು ಮುಂಬರುವ ಐಸಿಸಿ ಟಿ20 ವಿಶ್ವಕಪ್​ ಒಳಗಾಗಿ ಆರೋಗ್ಯರಾಗಿ ಮತ್ತೆ ತಂಡಕ್ಕೆ ಸೇರಿಕೊಳ್ಳುತ್ತಾರೋ? ಅಥವಾ ವಿಶ್ವಕಪ್​ನಿಂದಲೂ ಹೊರನಡೆಯುತ್ತಾರೋ ಎಂಬ ಪ್ರಶ್ನೆ ಕಾಡುತ್ತಿದೆ. ಈ ಕುರಿತು ಈವರೆಗೆ ಯಾವ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ: T20 Cricket: ಟಿ20 ಕ್ರಿಕೆಟ್​ನಲ್ಲಿ ಮುರಿಯಲಾಗದ ದಾಖಲೆಗಳಿವು, ಒಂದೇ ಪಂದ್ಯದಲ್ಲಿ 489 ರನ್!

ಏಷ್ಯಾ ಕಪ್​ 2022 ಭಾರತ​ ತಂಡ:

ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಅವೇಶ್ ಖಾನ್, ಅಕ್ಷರ್​ ಪಟೇಲ್.
Published by:shrikrishna bhat
First published: