Asia Cup 2022: ಏಷ್ಯಾ ಕಪ್​ ಇತಿಹಾಸದ ಬಗ್ಗೆ ನಿಮಗೆಷ್ಟು ಗೊತ್ತು? 38 ವರ್ಷಗಳ ಟೂರ್ನಿಯ ಕುರಿತು ತಿಳಿದುಕೊಳ್ಳಿ

ಏಷ್ಯಾ ಕಪ್​ ಟೂರ್ನಿಯು ಯುಎಇಯಲ್ಲಿ ಮೊದಲು 1984ರಲ್ಲಿ ಆಯೋಜಿಸಲಾಯಿತು. ಅಂದರೆ, ಇದು 38 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಟೂರ್ನಿಯಾಗಿದೆ.

ಏಷ್ಯಾ ಕಪ್ 2022

ಏಷ್ಯಾ ಕಪ್ 2022

  • Share this:
ಏಷ್ಯಾ ಕಪ್ 2022 (Asia Cup 2022) ಟೂರ್ನಿಯನ್ನು ಈ ಬಾರಿ ಯುಎಇಗೆ (UAE) ಸ್ಥಳಾಂತರಿಸಲಾಗಿದೆ. ಸದ್ಯ ಟೂರ್ನಿಯ ವೇಳಾಪಟ್ಟಿ ಸಹ ಪ್ರಕಟವಾಗಿದ್ದು, ಈಗಾಗಲೇ ಬಿಸಿಸಿಐ (BCCI) ಏಷ್ಯಾ ಕಪ್​ಗಾಗಿ ಟೀಂ ಇಂಡಿಯಾ ತಂಡವನ್ನು ಪ್ರಕಟಿಸಿದೆ. ಭಾರತ ತಂಡಕ್ಕೆ ರೋಹಿತ್​ ಶರ್ಮಾ (Rohit Sharma) ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿದರೆ, ಕನ್ನಡಿಗ ಕೆಎಲ್​ ರಾಹುಲ್ (KL Rahul)​ ಅವರನ್ನು ಉಪ ನಾಯಕನನ್ನಾಗಿ ಆಯ್ಕೆ ಮಾಡಿದೆ. ಆದರೆ ಈ ಏಷ್ಯಾ ಕಪ್​ ಇತಿಹಾಸದ ಬಗ್ಗೆ ನಿಮಗೆ ತಿಳಿದಿರದ ಅನೇಕ ಸಂಗತಿಗಳನ್ನು ಇಲ್ಲಿ ಹೇಳಲಾಗಿದೆ ನೋಡಿ. ಈ ಪಂದ್ಯಾವಳಿಯನ್ನು ಯುಎಇಯಲ್ಲಿ ಮೊದಲು 1984 ರಲ್ಲಿ ಆಯೋಜಿಸಲಾಯಿತು. ಅಂದರೆ, ಇದು 38 ವರ್ಷಗಳಿಂದ ನಡೆದುಕೊಂಡು ಬರುತ್ತಿರುವ ಒಂದು ಮೆಗಾ ಟೂರ್ನಿಯಾಗಿದೆ.

ಮೊದಲ ಬಾರಿಗೆ ಏಷ್ಯಾ ಕಪ್​ ಎಲ್ಲಿ ನಡೆದಿತ್ತು?:

ಹೌದು, ಮೊದಲ ಏಷ್ಯಾಕಪ್ 1984ರಲ್ಲಿ ಯುಎಇಯಲ್ಲಿ ನಡೆದಿತ್ತು. ಟೂರ್ನಿಯಲ್ಲಿ 3 ತಂಡಗಳ ನಡುವೆ ಒಟ್ಟು 3 ಪಂದ್ಯಗಳು ನಡೆದಿದ್ದವು. ಆದರೆ ಆ ವರ್ಷದ ಟೂರ್ನಿಯಲ್ಲಿ ಫೈನಲ್ ಮಾಡಲಿಲ್ಲ. ರೌಂಡ್ ರಾಬಿನ್ ಆಧಾರದ ಮೇಲೆ ಭಾರತ ತಂಡ ತನ್ನ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಅಗ್ರಸ್ಥಾನದ ಮೂಲಕ ಚಾಂಪಿಯನ್ ಪಟ್ಟವನ್ನು ಪಡೆಯಿತು.

ಕೊನೆಯ ಪಂದ್ಯಾವಳಿಯನ್ನು ಯಾವಾಗ ಆಡಲಾಯಿತು?:

ಏಷ್ಯಾ ಕಪ್ ಕೊನೆಯ ಬಾರಿಗೆ ಯುಎಇಯಲ್ಲಿ 2018 ರಲ್ಲಿ ನಡೆದಿತ್ತು. ಆಗಲೂ ಭಾರತ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಏಕದಿನ ಮಾದರಿಯಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಭಾರತ 3 ವಿಕೆಟ್‌ಗಳಿಂದ ಬಾಂಗ್ಲಾದೇಶವನ್ನು ಸೋಲಿಸಿತು. ಇದೀಗ 4 ವರ್ಷಗಳ ನಂತರ ಮತ್ತೆ ಆಯೋಜಿಸಲಾಗುತ್ತಿದೆ. ಈ ಬಾರಿಯೂ ಟೂರ್ನಿ ಯುಎಇ ನಲ್ಲಿ ನಡೆಯುತ್ತಿದೆ.

ಇದನ್ನೂ ಓದಿ: Asia Cup 2022: ಏಷ್ಯಾಕಪ್ ಇತಿಹಾಸದಲ್ಲಿ ಈ ರೀತಿ ಆಗಿಲ್ವಂತೆ, ಫೈನಲ್​ನಲ್ಲಿ ಮುಖಾಮುಖಿ ಆಗ್ತಾರಾ ಇಂಡೋ-ಪಾಕ್​?

T20 ಸ್ವರೂಪವನ್ನು ಎಷ್ಟು ಬಾರಿ ಆಯೋಜಿಸಲಾಗಿದೆ?:

ಇದುವರೆಗೆ ಟಿ20 ಮಾದರಿಯಲ್ಲಿ ಒಂದೇ ಒಂದು ಏಷ್ಯಾ ಕಪ್​ ಟೂರ್ನಿ ನಡೆದಿದೆ. ಇದನ್ನು 2016 ರಲ್ಲಿ ಮೊದಲ ಬಾರಿಗೆ ಬಾಂಗ್ಲಾದೇಶದಲ್ಲಿ ಆಯೋಜಿಸಲಾಯಿತು. ಇಲ್ಲಿಯೂ ಭಾರತ ತಂಡ ಚಾಂಪಿಯನ್ ಆಯಿತು. ಫೈನಲ್‌ನಲ್ಲಿ ಬಾಂಗ್ಲಾದೇಶವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಇದೀಗ ಎರಡನೇ ಬಾರಿಗೆ ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತಿದೆ.

ಪಂದ್ಯಾವಳಿಯಲ್ಲಿ ಅತ್ಯಂತ ಯಶಸ್ವಿ ತಂಡ ಯಾವುದು?:

ಟೂರ್ನಿಯ ಇತಿಹಾಸದಲ್ಲಿ ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಭಾರತ ತಂಡ 7 ಬಾರಿ ಫೈನಲ್ ಗೆದ್ದಿದ್ದಾರೆ. ಶ್ರೀಲಂಕಾ ತಂಡ 5 ಬಾರಿ ಪ್ರಶಸ್ತಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಪಾಕಿಸ್ತಾನ ತಂಡ ಎರಡು ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಇತರ ತಂಡಗಳು ಇನ್ನೂ ಮೊದಲ ಪ್ರಶಸ್ತಿಗಾಗಿ ಕಾಯುತ್ತಿವೆ.

ಕ್ವಾಲಿಫೈಯರ್‌ನಲ್ಲಿ ಎಷ್ಟು ತಂಡಗಳಿಗೆ ಅವಕಾಶ:

ಏಷ್ಯಾಕಪ್ ಅರ್ಹತಾ ಪಂದ್ಯಗಳು ಆಗಸ್ಟ್ 20 ರಿಂದ 24 ರವರೆಗೆ ಒಮಾನ್‌ನಲ್ಲಿ ನಡೆಯಲಿವೆ. ಯುಎಇ, ಹಾಂಕಾಂಗ್, ಸಿಂಗಾಪುರ ಮತ್ತು ಕುವೈತ್ ಇದರಲ್ಲಿ ಸ್ಥಾನ ಪಡೆದಿವೆ. ಎಲ್ಲಾ ತಂಡಗಳು ಪರಸ್ಪರ ಒಂದೊಂದು ಪಂದ್ಯವನ್ನು ಆಡಲಿವೆ. ಅಗ್ರಸ್ಥಾನದಲ್ಲಿರುವ ತಂಡವು ಮುಖ್ಯ ಸುತ್ತಿಗೆ ಹೋಗುತ್ತದೆ. ಆಗಸ್ಟ್ 27 ರಿಂದ ಯುಎಇಯಲ್ಲಿ ಮುಖ್ಯ ಸುತ್ತಿನ ಪಂದ್ಯಗಳು ನಡೆಯಲಿವೆ. ಇದರಲ್ಲಿ 6 ತಂಡಗಳನ್ನು 2 ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ, ಪಾಕಿಸ್ತಾನ ಮತ್ತು ಅರ್ಹತಾ ತಂಡಗಳು ಮೊದಲ ಗುಂಪಿನಲ್ಲಿ ಸ್ಥಾನ ಪಡೆದಿವೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಎರಡನೇ ಗುಂಪಿನಲ್ಲಿವೆ.

ಇದನ್ನೂ ಓದಿ: Virat Kohli: ಶತಕವಿಲ್ಲದೆ 1000 ದಿನ, ಪಾಕ್ ವಿರುದ್ಧವಾದರೂ ಅಬ್ಬರಿಸುತ್ತಾ ಕೊಹ್ಲಿ ಬ್ಯಾಟ್​?

ಮುಖ್ಯ ಸುತ್ತಿನ ಸ್ವರೂಪ ಹೇಗಿರುತ್ತದೆ?:

ಮುಖ್ಯ ಸುತ್ತಿನಲ್ಲಿ, ಪ್ರತಿ ತಂಡವು ಗುಂಪಿನ ಇತರ ತಂಡಗಳನ್ನು ಒಂದು ಬಾರಿ ಎದುರಿಸಲಿದೆ. ಇದಾದ ನಂತರ ಎರಡೂ ಗುಂಪಿನ ಟಾಪ್-2 ತಂಡಗಳು ಸೂಪರ್-4ಗೆ ಹೋಗಲಿವೆ. ಸೂಪರ್-4ರಲ್ಲಿ ಪ್ರತಿ ತಂಡವೂ ಒಮ್ಮೆ ಎದುರಾಳಿ ತಂಡವನ್ನು ಎದುರಿಸಬೇಕಾಗುತ್ತದೆ. ಇದಾದ ನಂತರ ಟಾಪ್-2 ತಂಡ ಫೈನಲ್‌ಗೆ ಹೋಗಲಿದೆ. ಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ.

ಭಾರತ ಮತ್ತು ಪಾಕಿಸ್ತಾನ ಎಷ್ಟು ಬಾರಿ ಮುಖಾಮುಖಿಯಾಗಬಹುದು?:

ಆಗಸ್ಟ್ 28 ರಂದು ಭಾರತ ಮತ್ತು ಪಾಕಿಸ್ತಾನ ಗುಂಪು ಸುತ್ತಿನಲ್ಲಿ ಮುಖಾಮುಖಿಯಾಗಲಿವೆ. ಇಬ್ಬರೂ ಸೂಪರ್-4 ತಲುಪುವುದು ಖಚಿತ. ಅಂತಹ ಪರಿಸ್ಥಿತಿಯಲ್ಲಿ, ಎರಡು ಸಾಂಪ್ರದಾಯಿಕ ಎದುರಾಳಿ ತಂಡಗಳ ನಡುವೆ ಪಂದ್ಯವೂ ಸಂಭವಿಸಬಹುದು. ಉಭಯ ತಂಡಗಳು ಫೈನಲ್ ತಲುಪುವಲ್ಲಿ ಯಶಸ್ವಿಯಾದರೆ ಮೂರನೇ ಹಣಾಹಣಿ ಕಾಣಬಹುದು.
Published by:shrikrishna bhat
First published: