ಭಾರತ - ಪಾಕ್​ ಪಂದ್ಯಕ್ಕೆ ಅಖಾಡ ಸಿದ್ಧ; ಟೀಂ ಇಂಡಿಯಾವನ್ನು ಕಾಡಲಿದ್ದಾರ ಪಾಕ್​ನ ನಾಲ್ವರು ಆಟಗಾರರು!

zahir | news18
Updated:September 19, 2018, 10:33 AM IST
ಭಾರತ - ಪಾಕ್​ ಪಂದ್ಯಕ್ಕೆ ಅಖಾಡ ಸಿದ್ಧ; ಟೀಂ ಇಂಡಿಯಾವನ್ನು ಕಾಡಲಿದ್ದಾರ ಪಾಕ್​ನ ನಾಲ್ವರು ಆಟಗಾರರು!
zahir | news18
Updated: September 19, 2018, 10:33 AM IST
-ನ್ಯೂಸ್ 18 ಕನ್ನಡ

ವಿಶ್ವ ಕ್ರಿಕೆಟ್​ನಲ್ಲಿ ಪಾಕಿಸ್ತಾನ ತಂಡವನ್ನು ಯಾವತ್ತೂ ಹಗುರವಾಗಿ ಪರಿಗಣಿಸಲಾಗುವುದಿಲ್ಲ. ಇದಕ್ಕೆ ಪಾಕ್ ಕ್ರಿಕೆಟ್ ಇತಿಹಾಸವೇ ಸಾಕ್ಷಿ. ಜಯಗಳಿಸುವ ಮ್ಯಾಚನ್ನು ಕೈಚೆಲ್ಲುವುದು ಮತ್ತು ಸೋಲುವ ಪಂದ್ಯವನ್ನು ಗೆದ್ದು ಸಂಭ್ರಮಿಸಿದ ಅನೇಕ ಉದಾಹರಣೆಗಳು ಕಣ್ಮುಂದೆಯೇ ಇದೆ. ಆದರೂ ಭಾರತ ತಂಡ ಪಾಕ್ ವಿರುದ್ಧ ನೀರಾಯಾಸವಾಗಿ ಗೆಲ್ಲಲು ಮಾತ್ರ ಸಾಧ್ಯವಾಗಿಲ್ಲ. ಇದರಿಂದಲೇ ಇಂಡಿಯಾ-ಪಾಕ್ ಮ್ಯಾಚ್ ಎಂದರೆ ಇಡೀ ವಿಶ್ವವೇ ತುದಿಗಾಲಲ್ಲಿ ನಿಂತಿರುತ್ತದೆ. ಎರಡು ರಾಷ್ಟ್ರಗಳ ಆಟಗಾರರು ರಣಾರಂಗದಲ್ಲಿ ಇಳಿದಿರುವಂತೆ ಗೆಲುವಿಗಾಗಿ ಹೋರಾಡುತ್ತಾರೆ. ಇದೀಗ ಮತ್ತೊಮ್ಮೆ ಭಾರತ-ಪಾಕಿಸ್ತಾನ ಏಷ್ಯಾ ಕಪ್​ನಲ್ಲಿ ಮುಖಾಮುಖಿಯಾಗುತ್ತಿದೆ. ಭಾರತ 2017ರ ಚಾಂಪಿಯನ್ಸ್ ಟ್ರೋಫಿ ನಂತರ ಇದೇ ಮೊದಲ ಬಾರಿ ಪಾಕ್​ ತಂಡವನ್ನು ಎದುರಿಸುತ್ತಿದೆ. ಕಳೆದ ಒಂದು ದಶಕದ ಇತಿಹಾಸದ  ಅಂಕಿ ಅಂಶಗಳನ್ನು ಗಮನಿಸಿದರೆ ಈಗಲೂ ಭಾರತವೇ ಗೆಲ್ಲುವ ಫೇವರೇಟ್ ತಂಡ. ಪಾಕ್ ವಿರುದ್ಧದ ಕಳೆದ 12 ಪಂದ್ಯಗಳಲ್ಲಿ ಭಾರತ 7 ರಲ್ಲಿ ವಿಜಯ ಸಾಧಿಸಿದೆ. ಆದರೆ ಕಳೆದ ಕೆಲ ವರ್ಷಗಳಿಂದ ಪಾಕಿಸ್ತಾನ ಸೂಪರ್ ಲೀಗ್​ ಮೂಲಕ ಒಂದಷ್ಟು ಹೊಸ ಪ್ರತಿಭೆಗಳನ್ನು ಪತ್ತೆ ಹಚ್ಚಲು ಪಾಕ್ ಕ್ರಿಕೆಟ್ ಮಂಡಳಿ ಯಶಸ್ವಿಯಾಗಿದ್ದು, ತಂಡದ ಆಟಗಾರರಲ್ಲಿ ಮಹತ್ತರ ಸುಧಾರಣೆಗಳು ಕಂಡು ಬಂದಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಭಾರತದ ವಿರುದ್ಧ ಬಲಿಷ್ಠ ತಂಡವನ್ನೇ ಕಣಕ್ಕಿಳಿಸಲು ನಿರ್ಧರಿಸಿರುವ ಪಾಕ್​ ತಂಡದ ಆಟಗಾರರು ಟೀಂ ಇಂಡಿಯಾಗೆ ಮಾರಕವಾಗಿ ಪರಿಣಮಿಸಬಹುದು. ಅಂತಹ ನಾಲ್ಕು ಪ್ರಮುಖ ಆಟಗಾರರ ಪಟ್ಟಿ ಇಲ್ಲಿದೆ.

ಫಖರ್ ಝಮಾನ್ :ಕಡಿಮೆ ಸಮಯದ ಅವಧಿಯಲ್ಲೇ ವಿಶ್ವ ಕ್ರಿಕೆಟ್​ನಲ್ಲಿ ಛಾಪು ಮೂಡಿಸಿದ ಪಾಕ್ ಆಟಗಾರ ಫಖರ್ ಝಮಾನ್. ಭಾರತದ ವಿರುದ್ಧ ಚಾಂಪಿಯನ್ಸ್​ ಟ್ರೋಫಿಯಲ್ಲಿ ಸಿಡಿಲಬ್ಬರದ ಶತಕ ಸಿಡಿಸಿದ ಫಖರ್ ಪಾಕ್ ಓಪನರ್ ಆಗಿ ಕಣಕ್ಕಿಳಿಯಲ್ಲಿದ್ದಾರೆ. ಅತ್ಯುತ್ತಮ ಲಯದಲ್ಲಿರುವ ಪಾಕ್ ತಂಡದ ಈ ಯುವ ಆಟಗಾರ ಜಿಂಬಾಬ್ವೆ ವಿರುದ್ಧ ಇತ್ತೀಚೆಗಷ್ಟೇ 210 ರನ್ ಬಾರಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಬಾರಿಸಿದ ಮೊದಲ ಪಾಕ್ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ ವಿರುದ್ಧ ಪಂದ್ಯಗಳಲ್ಲಿ ವೇಗದ ಬೌಲರ್​ಗಳನ್ನು ದಂಡಿಸಿ  ಫಖರ್ ಆತ್ಮ ವಿಶ್ವಾಸದ ಅಲೆಯಲ್ಲಿದ್ದಾರೆ. ಒಟ್ಟು 18 ಏಕದಿನ ಪಂದ್ಯಗಳನ್ನು ಆಡಿರುವ ಈ ಆಟಗಾರ 76.07 ರನ್ ಸರಾಸರಿಯಲ್ಲಿ 1065 ರನ್ ಕಲೆಹಾಕಿರುವುದೇ ಅವರ ಆಕ್ರಮಣಕಾರಿ ಆಟಕ್ಕೆ ಸಾಕ್ಷಿ.

ಹಸನ್ ಅಲಿ:

(Joe Giddens/PA via AP)

Loading...

ಪಾಕ್ ತಂಡ ಆಕ್ರಮಣಕಾರಿ ಬೌಲರ್ ಆಗಿ ಹಸನ್ ಅಲಿ ಗುರುತಿಸಿಕೊಂಡಿದ್ದಾರೆ. ಇನ್​ ಸ್ವಿಂಗ್ ಮತ್ತು ಔಟ್ ಸ್ವಿಂಗ್ ಮೂಲಕ ಬ್ಯಾಟ್ಸ್​​ಮನ್​ಗಳನ್ನು ಕಟ್ಟಿ ಹಾಕುವ ಯಶಸ್ವಿ ದಾಳಿಗಾರ. ಹಾಗೆಯೇ ನಿಧಾನವಾಗಿ ಬೌಲ್ ಎಸೆದು ವಿಕೆಟ್ ಕಬಳಿಸುವ ಸಾಮರ್ಥ್ಯ ಹೊಂದಿದ್ದಾರೆ. ಪಂದ್ಯದ ಅಂತಿಮ ಓವರ್​ಗಳಲ್ಲಿ ರನ್ ಬಿಟ್ಟುಕೊಡದೆ ದಾಂಡಿಗರನ್ನು ಇಕ್ಕಟಿಗೆ ಸಿಲುಕಿಸುವಲ್ಲಿಯು ಹಸನ್ ಅಲಿ ಪ್ರಾವಿಣ್ಯತೆ ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ದಾಖಲೆ ಹೊಂದಿರುವ ಪಾಕ್​ನ ಯುವ ವೇಗಿ 33 ಪಂದ್ಯಗಳಿಂದ 68 ವಿಕೆಟ್​ಗಳನ್ನು ಕಿತ್ತಿದ್ದಾರೆ. ಭಾರತದ ತಂಡ ಆಟಗಾರರು ಹಸನ್ ಅಲಿಯ ವೇಗವನ್ನು ತಂತ್ರಗಳನ್ನು ಸರಿಯಾಗಿ ಅರ್ಥೈಸಿದರೆ ಮಾತ್ರ ಕ್ರೀಸ್​ನಲ್ಲಿ ನಿಲ್ಲಬಹುದು.

ಶೊಯೆಬ್ ಮಲಿಕ್:ಈ ಬಾರಿಯ ಏಷ್ಯಾ ಕಪ್​ನಲ್ಲಿ ಆಡುತ್ತಿರುವ ಪಾಕ್​ ತಂಡದ ಅನುಭವಿ ಆಟಗಾರ. ಭಾರತದ ವಿರುದ್ದ ಅತ್ಯುತ್ತಮ ಸ್ಟ್ರೈಕ್​ರೇಟ್​ ಹೊಂದಿರುವ ಶೊಯೆಬ್ ಮಲಿಕ್ ತಂಡದ ಆಧಾರ ಸ್ತಂಭ ಎನ್ನಬಹುದು. ತಂಡದ ಫೀಲ್ಡಿಂಗ್ ವಿಭಾಗವನ್ನು ಮುನ್ನೆಡೆಸುವ ಶೋಯೆಬ್ 266 ಏಕದಿನ ಪಂದ್ಯಗಳನ್ನು ಆಡಿರುವ ಅನುಭವ ಹೊಂದಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್​ನಲ್ಲಿ 35.07 ರನ್​ ಸರಾಸರಿಯಲ್ಲಿ 7 ಸಾವಿರಕ್ಕೂ ಹೆಚ್ಚಿನ ರನ್​ಗಳನ್ನು ಸಿಡಿಸಿದ್ದಾರೆ. ಇದೇ ಸರಾಸರಿ ಟೀಂ ಇಂಡಿಯಾ ವಿರುದ್ಧ ಪಂದ್ಯಗಳಲ್ಲಿ 47.45 ಸರಾಸರಿಯಲ್ಲಿದೆ. ರಕ್ಷಾತ್ಮಕ ಮತ್ತು ಸ್ಪೋಟಕ ಆಟದಿಂದ ವಿಶ್ವ ಕ್ರಿಕೆಟ್​ನಲ್ಲಿ ಹೆಸರುಗಳಿಸಿರುವ ಶೊಯೆಬ್ ಮಲಿಕ್ ಅಪಾಯಕಾರಿ ಎನಿಸುವುದು ಇದೇ ಕಾರಣಕ್ಕೆ.

ಮೊಹಮ್ಮದ್ ಅಮೀರ್:ಪಾಕ್ ತಂಡದ ವೇಗದ ಅಸ್ತ್ರ. ತನ್ನ ಕರಾರುವಾಕ್ ದಾಳಿಯಿಂದ ಎಂತಹ ಬ್ಯಾಟ್ಸ್​ಮನ್​ಗಳನ್ನು ತಬ್ಬಿಬ್ಬು ಮಾಡುವ ಚಾಕ ಚಕ್ಯತೆ ಮೊಹಮ್ಮದ್ ಅಮೀರ್​ನಲ್ಲಿದೆ. ಈ ಬಾರಿಯ ಭಾರತ-ಪಾಕ್ ನಡುವಿನ ಪಂದ್ಯ ಆಕರ್ಷಣೆ ಕೂಡ ಅವರ ದಾಳಿಯಾಗಿರಲಿದೆ. ಆದರೆ ಈ ಬಾರಿ ಟೀಂ ಇಂಡಿಯಾದಲ್ಲಿ ವಿರಾಟ್​ ಕೊಹ್ಲಿ ಅಭಾವ ಕ್ರಿಕೆಟ್ ಅಭಿಮಾನಿಗಳಿಗೆ ತುಸು ನಿರಾಸೆ ಮೂಡಿಸಿದೆ. ಭಾರತ ತಂಡದಲ್ಲಿ ಕೊಹ್ಲಿ ಆಡದಿರುವುದು ಅಮೀರ್​ಗೆ ಬೋನಸ್ ಆಗಿ ಪರಿಣಮಿಸಲಿದೆ. ನಿಖರ ದಾಳಿ ಮೂಲಕ ಕ್ರಿಕೆಟ್​ ಅಂಗಳದಲ್ಲಿ ಹೆಸರುಗಳಿಸಿರುವ ಅಮೀರ್ 43 ಏಕದಿನ ಪಂದ್ಯಗಳಿಂದ 58 ವಿಕೆಟ್​ ಕಿತ್ತಿದ್ದಾರೆ. ಅಮೀರ್ ದಾಳಿ ತೀವ್ರತೆ ಹೇಗಿರುತ್ತದೆ ಎಂಬುದನ್ನು ಅವರು ತಮ್ಮ ಓವರ್​ನಲ್ಲಿ ಬಿಟ್ಟು ಕೊಟ್ಟಿರುವ ರನ್​ಗಳಿಂದ ಅಳೆಯಬಹುದು. ಏಕದಿನ ಪಂದ್ಯಗಳಲ್ಲಿ ಕೇವಲ 4.75 ಸರಾಸರಿಯಲ್ಲಿ ರನ್ ನೀಡಿರುವ ಮೊಹಮ್ಮದ್ ಅಮೀರ್ ಈ ಬಾರಿ ಭಾರತದ ವಿರುದ್ಧ ಪಾಕ್​ಗೆ ಜಯ ತಂದುಕೊಡುವ ನಿರೀಕ್ಷೆಯಲ್ಲಿದ್ದಾರೆ.ಸೆಪ್ಟಂಬರ್ 19 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧ ಪಂದ್ಯದ ಮೂಲಕ ಟೀಂ ಇಂಡಿಯಾ ಚಾಂಪಿಯನ್ಸ್ ಟ್ರೋಫಿ ಸೋಲಿನ ಸೇಡು ತೀರಿಸಿಕೊಳ್ಳಲಿದೆಯೇ ಎಂಬುದನ್ನು ಕಾದು ನೋಡೋಣ.
First published:September 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ