ಏಷ್ಯಾ ಕಪ್ 2018: ಟೀಂ ಇಂಡಿಯಾ ನಾಳೆ ಪ್ರಕಟ: ಈ 5 ಆಟಗಾರರಿಗೆ ಸ್ಥಾನ ಸಾಧ್ಯತೆ

news18
Updated:August 31, 2018, 7:12 PM IST
ಏಷ್ಯಾ ಕಪ್ 2018: ಟೀಂ ಇಂಡಿಯಾ ನಾಳೆ ಪ್ರಕಟ: ಈ 5 ಆಟಗಾರರಿಗೆ ಸ್ಥಾನ ಸಾಧ್ಯತೆ
  • News18
  • Last Updated: August 31, 2018, 7:12 PM IST
  • Share this:
ನ್ಯೂಸ್ 18 ಕನ್ನಡ

ಸೆಪ್ಟೆಂಬರ್ 15ರಿಂದ ಆರಂಭವಾಗುವ ಏಷ್ಯಾ ಕಪ್​​ಗೆ ಬಿಸಿಸಿಐ ನಾಳೆ(ಶನಿವಾರ) 15 ಜನರ ಭಾರತ ತಂಡವನ್ನು ಪ್ರಕಟಿಸಲಿದೆ. ಇನ್ನೇನು 2019ರ ವಿಶ್ವಕಪ್​​​ಗೆ ಅರ್ಧ ವರ್ಷವಷ್ಟೇ ಬಾಕಿ ಇರುವಾಗ 50 ಓವರ್​​ಗಳ ಪಂದ್ಯಾಟ ಕೊಹ್ಲಿ ಪಡೆಗೆ ಮುಖ್ಯವಾಗಿದೆ. ಸದ್ಯ ಏಷ್ಯಾ ಕಪ್​​ಗೆ ಆಯ್ಕೆ ಸಮಿತಿ ಯಾವ ಆಟಗಾರರನ್ನು ಆಯ್ಕೆ ಮಾಡಲಿದೆ ಎಂಬುದು ಕುತೂಹಲ ಕೆರಳಿಸಿದೆ. ಜೊತೆಗೆ ಮಯಾಂಕ್ ಅಗರ್ವಾಲ್ ಹಾಗೂ ಮನೀಶ್ ಪಾಂಡೆಗೆ ತಂಡದಲ್ಲಿ ಸ್ಥಾನ ಸಿಗಬಹುದಾ ಎಂಬ ಅನುಮಾನವು ಮೂಡಿದೆ. ಬಿಸಿಸಿಐ ಆಯ್ಕೆ ಮಾಡಬಹುದಾದ 5 ಪ್ರಮುಖ ಆಟಗಾರರನ್ನು ನೋಡುವುದಾದರೆ…

ಮಯಾಂಕ್ ಅಗರ್ವಾಲ್:ಸದ್ಯ ಮಯಾಂಕ್ ಅಗರ್ವಾಲ್ ಅವರ ಬ್ಯಾಟಿಂಗ್ ವೈಖರಿ ನೋಡುವುದಾದರೆ, ಭರ್ಜರಿ ಫಾರ್ಮ್​​ನಲ್ಲಂತು ಇದ್ದಾರೆ. ಈ ತಿಂಗಳ ಆರಂಭದಲ್ಲಿ ದಕ್ಷಿಣಾ ಆಫ್ರಿಕಾ ಎ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಅಗರ್ವಾಲ್ ಅವರು ದ್ವಿಶತಕ ಸಿಡಿಸಿ ಮಿಂಚಿದ್ದರು. 251 ಎಸೆತಗಳಲ್ಲಿ 31 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 220 ರನ್​ ಬಾರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೆ ಆಂಗ್ಲರ ನೆಲದಲ್ಲಿ ನಡೆದ ಇಂಗ್ಲೆಂಡ್ ಲಯನ್ಸ್ ವಿರುದ್ಧ ಪಂದ್ಯದಲ್ಲಿ 104 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸ್​ನೊಂದಿಗೆ 112 ರನ್​​​ ಸಿಡಿಸಿದ್ದರು. ಇಷ್ಟೇ ಅಲ್ಲದೆ ಇಂಗ್ಲೆಂಡ್​ನಲ್ಲೇ ಕಳೆದ ಜೂನ್​​ನಲ್ಲಿ ಸತತ ಮೂರು ಶತಕವನ್ನೂ ಬಾರಿಸಿದ್ದರು. ಇನ್ನು 2017-18ರ ರಣಜಿಯಲ್ಲಿ 1,000 ಗಳಿಸಿದ ಏಕೈಕ ಆಟಗಾರ ಎಂಬ ಕೀರ್ತಿಗೂ ಅಗರ್ವಾಲ್ ಪಾತ್ರರಾಗಿದ್ದರು. ಟೀಂ ಇಂಡಿಯಾದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲು ರೋಹಿತ್ ಶರ್ಮಾ, ಶಿಖರ್ ಧವನ್ ಹಾಗೂ ಕೆಎಲ್ ರಾಹುಲ್ ಈಗಾಗಲೇ ತಯಾರಾಗಿದ್ದು, ಇವರನ್ನ ಹಿಂದಿಕ್ಕಿ ಅಗರ್ವಾಲ್​​ಗೆ ಅವಕಾಶವಿದೆಯೇ ಎಂಬುದು ನೋಡಬೇಕಿದೆ.

ಮನೀಶ್ ಪಾಂಡೆ:

ಮೊನ್ನೆಯಷ್ಟೆ ಭಾರತ ಬಿ ತಂಡದ ಪರ ಆಡಿ ನಾಯಕನಾಗಿ ತಂಡವನ್ನು ಗೆಲ್ಲಿಸಿದ ಮನೀಶ್ ಪಾಂಡೆ ಭರ್ಜರಿ ಫಾರ್ಮ್​​ನಲ್ಲಿದ್ದಾರೆ. 28 ವರ್ಷ ಪ್ರಾಯದ ಪಾಂಡೆ ಈ ಹಿಂದೆ ಅನೇಕ ಬಾರಿ ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರಾದರು, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಹೀಗಾಗಿ ತಂಡಕ್ಕೆ ಆಯ್ಕೆಯಾಗಿದ್ದರು ಬೆಂಚ್ ಕಾಯಬೇಕಾಗಿ ಬಂತು. ಸದ್ಯ ಏಷ್ಯಾ ಕಪ್​​ ಮೇಲೆ ಕಣ್ಣಿಟ್ಟಿರುವ ಪಾಂಡೆಗೆ ತಂಡದಲ್ಲಿ ಸ್ಥಾನ ಲಭಿಸುತ್ತ ಎಂಬುದೇ ಕುತೂಹಲ ಮೂಡಿಸಿದೆ.

ಅಂಬಾಟಿ ರಾಯುಡು:ಅಂಬಾಟಿ ರಾಯುಡು ಅವರು ಏಷ್ಯಾ ಕಪ್​​ನಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು. ಚತುಷ್ಕೋನ ಕ್ರಿಕೆಟ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರಿರುವ ರಾಯುಡು, ಆಯ್ಕೆ ಸಮಿತಿಯ ಫೆವರಿಟ್ ಎನಿಸಿದ್ದಾರೆ. ಕಳೆದ ಐಪಿಎಲ್​​ ಸೀಸನ್​​ನಿಂದಲೂ ರಾಯುಡು ಭರ್ಜರಿ ಫಾರ್ಮ್​​​ನಲ್ಲಿದ್ದು, ಇಂದಿನ ವರೆಗೂ ಅದೇ ಲಯದಲ್ಲಿ ಬ್ಯಾಟ್ ಬಿಸುತ್ತಿರುವುದು ರಾಯುಡುಗೆ ವರವಾಗುವ ಅಂದಾಜಿದೆ.

ಕ್ರುನಾಲ್ ಪಾಂಡ್ಯ:ಟೀಂ ಇಂಡಿಯಾಕ್ಕೆ ಇನ್ನೊಬ್ಬ ಆಲ್ರೌಂಡರ್​​ನ ಅವಶ್ಯಕತೆಯಿದ್ದು, ಕ್ರುನಾಲ್ ಪಾಂಡ್ಯ ಈ ಸ್ಥಾನವನ್ನು ತುಂಬುವ ಸಾಧ್ಯತೆಯಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸದ್ಯ ಕ್ರುನಾಲ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ. ಅಲ್ಲದೆ ಐಪಿಎಲ್​​​ನಲ್ಲಿ ಮುಂಬೈ ಇಂಡಿಯನ್ಸ್​ ಪರ ಹಾಗೂ ಭಾರತ ಎ ತಂಡದ ಪರ ಆಡಿದ್ದು ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯುವ ಅವಕಾಶವಿದೆ. ಅಂತೆಯೇ ಯಜುವೇಂದ್ರ ಚಹಾಲ್ ಅಥವಾ ಕುಲ್ದೀಪ್ ಯಾದವ್​​ ಕೂಡ ಇವರ ಸಾಲಿನಲ್ಲಿದ್ದಾರೆ.

ದೀಪಕ್ ಚಹಾರ್:ರಣಜಿಯಲ್ಲಿ ಕೇವಲ 10 ರನ್​ಗೆ 8 ವಿಕೆಟ್ ಪಡೆದಿರುವ ದೀಪಕ್​​ಗೆ ಈ ಬಾರಿಯ ಏಷ್ಯಾ ಕಪ್​​ನಲ್ಲಿ ಚಾನ್ಸ್​ ಸಿಗುವ ಸಂಭವವಿದೆ. ಐಪಿಎಲ್​​​ನಲ್ಲೂ ಚೆನ್ನೈ ಸೂಪರ್ ಕಿಂಗ್ಸ್​ ಪರ ಆಡಿರುವ ಚಹಾರ್ ಡೆತ್ ಓವರ್​ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು. ಹೀಗಾಗಿ ಹೊಸ ಮುಖಗಳಿಗೆ ಆಯ್ಕೆ ಸಮಿತಿ ಅವಕಾಶ ನೀಡುತ್ತಾರ ನೋಡಬೇಕು. ಇವರ ಜೊತೆ ಕೇದರ್ ಜಾದವ್, ರಿಷಭ್ ಪಂತ್, ಹನುಮಾ ವಹಾರಿ, ಮೊಹಮ್ಮದ್ ಸಿರಾಜ್​ ಮೇಲೆ ಕೂಡ ನಿರೀಕ್ಷೆ ಇದೆ.
First published: August 31, 2018, 7:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading